ಅಬ್ಬಬ್ಬಾ.. ಮೂಗಿನಿಂದ ಬಿಯರ್‌ ಕುಡಿದ ಭೂಪ! – ವೈರಲ್‌ ಹುಚ್ಚಿಗೆ ಇದೆಂಥಾ ಸಾಹಸ?

ಅಬ್ಬಬ್ಬಾ.. ಮೂಗಿನಿಂದ ಬಿಯರ್‌ ಕುಡಿದ ಭೂಪ! – ವೈರಲ್‌ ಹುಚ್ಚಿಗೆ ಇದೆಂಥಾ ಸಾಹಸ?

ಇದು ಸೋಶಿಯಲ್‌ ಮೀಡಿಯಾ ಜಮಾನ. ವೈರಲ್‌ ಆಗಲು ಜನ ಏನ್‌ ಬೇಕಾದ್ರೂ ಮಾಡ್ತಾರೆ. ಇದೀಗ ಇಲ್ಲೊಬ್ಬ ಭೂಪ ಹೊಸ ಸಾಹಸ ಮಾಡಿದ್ದಾನೆ. ಬಿಯರ್‌ನ ಮೂಗಿನ ಮೂಲಕ ಬಿಯರ್‌ ಕುಡಿದಿದ್ದಾನೆ.

ಇದನ್ನೂ ಓದಿ: ಕೋರ್ಟ್‌ ಆದೇಶವಿದ್ರೂ ಮನೆಯೂಟ ನಿರಾಕರಣೆ! – ಪವಿತ್ರಾಗೌಡ ತಾಯಿಯಿಂದ‌ ಕೋರ್ಟ್​​ಗೆ ಅಫಿಡವಿಟ್ ಸಲ್ಲಿಕೆ

ತಾನು ವೈರಲ್‌ ಆಗ್ಬೇಕು.  ಲೈಕ್ಸ್‌, ಕಾಮೆಂಟ್ಸ್‌ ಬರಬೇಕು ಆಗ್ಬೇಕು ಅಂತ ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇತ್ತೀಚೆಗೆ ಇದೊಂದು ಥ್ರೆಂಡ್‌ ಆಗ್ಬಿಟ್ಟಿದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ. ವ್ಯಕ್ತಿಯೊಬ್ಬ ಮೂಗಿನ ಮೂಲಕ ಬಿಯರ್‌ ಕುಡಿದಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಚೀನಾ ಮೂಲದ ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗೆ ಬಿಯರ್ ಗ್ಲಾಸ್‌ ತಾಗಿಸಿಟ್ಟಿದ್ದಾನೆ. ಆ ಮೂಲಕ ಬಿಯರ್‌ನ್ನು ದೇಹದೊಳಗಡೆ ಹೋಗುವಂತೆ ಮಾಡುತ್ತಿದ್ದಾರೆ. ಆ ಬಿಯರ್‌ನ್ನು ನೇರವಾಗಿ ಒಳಕ್ಕೆ ಎಳೆದುಕೊಂಡಿದ್ದಾನೆ. ಈತನ ಹುಚ್ಚು ಸಾಹಸವನ್ನು ಎಲ್ಲರು ಬೆರಗಾಗಿ ನೋಡಿದ್ದಾರೆ. ಇದೀಗ ಈ ವಿಡಿಯೋ ಲಕ್ಷಾಂತರ ವೀವ್ಸ್‌ ಪಡೆದುಕೊಂಡಿದೆ. ಈ ವಿಡಿಯೋ ನೋಡಿ, ಕೆಲವರು ಇದನ್ನು ವಿಚಿತ್ರ ಪ್ರತಿಭೆ ಎಂದು ಲೇವಡಿ ಮಾಡಿದ್ದಾರೆ. ಇನ್ನು ಕೆಲವರು ಇದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Shwetha M