ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ – ಅಲರ್ಟ್ ಆದ ಯುವತಿ ಮಾಡಿದ್ದೇನು?

ಮೆಟ್ರೋದಲ್ಲಿ ನಿದ್ದೆಗೆ ಜಾರಿದ ಯುವಕ – ಅಲರ್ಟ್ ಆದ ಯುವತಿ ಮಾಡಿದ್ದೇನು?

ದೂರ ಪ್ರಯಾಣದ ವೇಳೆ ಹಲವರು ನಿದ್ರೆಗೆ ಜಾರುವುದು ಸಾಮಾನ್ಯ. ನಿದ್ರೆ ಮಂಪರಿನಲ್ಲಿ ಕೆಲವರು ಆಚೆ – ಈಚೆ ವಾಲುವ ದೃಶ್ಯಗಳು ನಮ್ಮನ್ನು ನಗು ತರಿಸುತ್ತವೆ. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವಕನೊಬ್ಬ ನಿದ್ದೆಗೆ ಜಾರಿದ್ದಾನೆ. ಈ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಯುವಕನೊಬ್ಬ ಗಾಢ ನಿದ್ದೆಗೆ ಜಾರಿದ್ದಾನೆ. ನಿದ್ದೆ ಮಂಪರಿನಲ್ಲಿದ್ದ ಯುವಕ ಸೀಟಿನಿಂದ ಬೀಳುತ್ತಿದ್ದ ವೇಳೆ ಪಕ್ಕದಲ್ಲೇ ಕುಳಿತಿದ್ದ ಯುವತಿ ರಕ್ಷಿಸಿದ್ದಾಳೆ.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅಮ್ಮನನ್ನು ಸಂಕಷ್ಟದಿಂದ ಪಾರು ಮಾಡಿದ ಪುಟಾಣಿ ..! – ಕಂದನ ಸಮಯಪ್ರಜ್ಞೆಗೆ ಎಲ್ಲರ ಮೆಚ್ಚುಗೆ

ವೈರಲ್ ಆದ ದೃಶ್ಯದಲ್ಲಿ, ಯುವಕ ಪ್ರಯಾಣಿಸುವ ಮೆಟ್ರೋದಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿವೆ. ಅದರಂತೆ ಬಾಗಿಲಿನ ಪಕ್ಕದ ಸೀಟಿನ ತುದಿಯಲ್ಲಿ ಯುವತಿಯೊಬ್ಬಳು ಕುಳಿತಿದ್ದಾಳೆ. ಆಕೆಯ ಪಕ್ಕದಲ್ಲಿಯೇ ನೀಲಿ ಟೀ ಶರ್ಟ್ ತೊಟ್ಟ ಯುವಕನೊಬ್ಬ ಪಕ್ಕದಲ್ಲಿ ಕುಳಿತಿದ್ದಾನೆ. ಅವನು ಕುಳಿತಲ್ಲೇ ನಿದ್ದಗೆ ಜಾರಿದ್ದಾನೆ. ಗಾಢ ನಿದ್ದೆಯಲ್ಲಿದ್ದ ಯುವಕ ನಿಧಾನವಾಗಿ ಸೀಟಿನಿಂದ ಮುಂದಕ್ಕೆ ವಾಲಲು ಪ್ರಾರಂಭಿಸುತ್ತಾನೆ. ಯುವಕ ಇನ್ನೇನು ಕೆಳಗೆ ಬೀಳುತ್ತಾನೆ ಎಂಬುದನ್ನು ಗಮನಿಸಿದ ಯುವತಿ, ಆತನ ಟೀ ಶರ್ಟ್ ಎಳೆದಿದ್ದಾಳೆ. ಈ ಮೂಲಕ ಯುವಕ ಕೆಳಗೆ ಬೀಳುವುದನ್ನು ತಡೆದಿದ್ದಾಳೆ. ಈ ವೀಡಿಯೋ ವೈರಲ್ ಆಗಿದ್ದು, ಅಪರಿಚಿತ ಯುವಕನಿಗೆ ಯುವತಿ ಸಹಾಯ ಮಾಡುವುದನ್ನು ನೋಡಿ ಎಲ್ಲರೂ ಆಕೆಯನ್ನು ಶ್ಲಾಘಿಸಿದ್ದಾರೆ.

 

View this post on Instagram

 

A post shared by Md Moeen Shaikh (@mdmoeenshaikh)

suddiyaana