ಮನುಷ್ಯ ಕಾಲುಗಳ ಬಳಸಿ ನೇರ ನಡೆಯಲು ಕಲಿತಿದ್ದು ನೆಲದಲ್ಲಿ ಅಲ್ಲ.. ಮರದಲ್ಲಿ..!

ಮನುಷ್ಯ ಕಾಲುಗಳ ಬಳಸಿ ನೇರ ನಡೆಯಲು ಕಲಿತಿದ್ದು ನೆಲದಲ್ಲಿ ಅಲ್ಲ.. ಮರದಲ್ಲಿ..!

ಮಾನವ ವಿಕಸನ ಅನ್ನೋದು ಇವತ್ತಿಗೂ ಕುತೂಹಲಕಾರಿ ವಿಷಯವೇ ಆಗಿದೆ. ಮಾನವ ವಿಕಸನದ ಕುರಿತಾಗಿ ಬೇರೆ ಬೇರೆ ರೀತಿಯಲ್ಲಿ ಅಧ್ಯಯನ ನಡೆಯುತ್ತಲೇ ಇದೆ. ಈ ನಡುವೆ ಮನುಷ್ಯನ ಕುರಿತಾಗಿ ಅಧ್ಯಯನಕಾರರು ಒಂದು ಹೊಸ ವಿಚಾರ ಕಂಡುಹಿಡಿದಿದ್ದಾರೆ. ಮನುಷ್ಯ ಎರಡು ಕಾಲುಗಳನ್ನು ಬಳಸಿ ನೇರವಾಗಿ ನಡೆಯಲು ಕಲಿತಿದ್ದು ನೆಲದಲ್ಲಿ ಅಲ್ಲ. ಅದರ ಬದಲಾಗಿ ಮರಗಳ ಮೇಲೆ ನೇರವಾಗಿ ಮನುಷ್ಯ ನಡೆಯಲು ಪ್ರಾರಂಭಿಸಿದ್ದ ಅನ್ನೋದು ಅಧ್ಯಯನದಲ್ಲಿ ಗೊತ್ತಾಗಿದೆ.

ಇದನ್ನೂ ಓದಿ:  ಮಹಿಳೆ ಮತ್ತು ಪುರುಷ ಪದಕ್ಕೆ ಇಂಗ್ಲೀಷ್‌ಲ್ಲಿ ಹೊಸ ವಿವರಣೆ..! – ಈ ವ್ಯಾಖ್ಯಾನದ ಬಗ್ಗೆ ನಡೀತಿದೆ ಬಿಸಿ ಬಿಸಿ ಚರ್ಚೆ

ಸೈನ್ಸ್ ಅಡ್ವಾನ್ಸಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಶ್ಚಿಮ ತಾಂಜನಿಯಾದ ಇಸಾ ಕಣಿವೆಯಲ್ಲಿ ವಾಸಿಸುವ ಕಾಡು ಚಿಂಪಾಂಜಿಗಳ ಆವಾಸಸ್ಥಾನ ನಮ್ಮ ಆರಂಭಿಕ ಮಾನವ ಪೂರ್ವಜರ ಅಂದರೆ ಹೊಮಿನಿನ್ಸ್ ಆವಾಸಸ್ಥಾನ ರೀತಿಯೇ ಹೋಲುತ್ತದೆ. ಮಾನವ ಬೈಪೆಡಲಿಸಂಗೆ ಮುಕ್ತ ಭೂಮಿ ಪ್ರೋತ್ಸಾಹಿಸಿರಬಹುದು ಎನ್ನುವ ಊಹೆಯೊಂದಿಗೆ ಸವನ್ನಾ ಮೊಸಾಯಿಕ್ ಪ್ರದೇಶವನ್ನ ಆರಿಸಿಕೊಳ್ಳುತ್ತಾರೆ. ಹೆಚ್ಚಿನ ಮರದ ಸಾಂದ್ರತೆಯ ಹೊರತಾಗಿಯೂ ಸವನ್ನಾಗಳು ತೆರೆದ ಭೂ ಪ್ರದೇಶವಾಗಿರುತ್ತದೆ ಮತ್ತು ಮರಗಳು ಕಾಡುಗಳಿಗಿಂತ ಹೆಚ್ಚು ನಿಯಮಿತವಾಗಿ ಅಂತರದಲ್ಲಿರುತ್ತವೆ. ಖಾಲಿ ಆವಾಸಸ್ಥಾನವೂ ಇಸಾ ಚಿಂಪಾಂಜಿಗಳಿಗೆ ಜಾಸ್ತಿ ಸಮಯ ನೆಲದ ಮೇಲೆ ಕಳೆಯುತ್ತಾ ವಿಕಸನಕ್ಕೆ ಕಾರಣವಾಗಿರಬಹುದು ಎಂದು ತಿಳಿದುಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದರು. ಆದರೆ ಇಸಾ ಚಿಂಪಾಂಜಿಗಳು ತೆರೆದ ಸವನ್ನಾ ಪ್ರದೇಶದಲ್ಲಿ ಸಮಯ ಕಳೆಯದೆ ಅತೀ ಹೆಚ್ಚು ಸಮಯ ಮರದ ಮೇಲೆ ನಡೆಯುತ್ತಾ ಕಳೆದರು. ಈ ಅನ್ವೇಷಣೆ ನಮ್ಮ ಮಾನವ ಪೂರ್ವಜರು ನೆಟ್ಟಗೆ ನಡೆಯಲು ತೆರೆದ ಸವನ್ನಾ ಭೂ ಪ್ರದೇಶ ಎಂದೂ ಅಂದುಕೊಂಡಿದ್ದ ದೀರ್ಘ ಕಾಲದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ.

ಪ್ರಾಚೀನ ಮಾನವರು ಮರಗಳ ಸುತ್ತ ಸುತ್ತಲೂ ಎರಡು ಕಾಲುಗಳ ಮೇಲೆ ನಡೆಯಲು ವಿಕಸನ ಗೊಂಡಿರಬಹುದು ಎಂದೂ ಅಧ್ಯಯನಕಾರರು ವಿಶ್ಲೇಷಿಸುತ್ತಿದ್ದಾರೆ. ನಮ್ಮ ಅಧ್ಯಯನವು ಸುಮಾರು ಐದು ಮಿಲಿಯನ್ ವರ್ಷಗಳ ಹಿಂದೆ  ಹೆಚ್ಚು ತೆರೆದ ಸವನ್ನಾ ಆವಾಸಸ್ಥಾನಗಳು ವಾಸ್ತವವಾಗಿ ಬೈಪೆಡಲಿಸಂನ ವಿಕಾಸಕ್ಕೆ ವೇಗವರ್ಧಕವಾಗಿರಲಿಲ್ಲ ಎಂದು ಸೂಚಿಸುತ್ತದೆ. ಬದಲಾಗಿ, ಆಹಾರ ಉತ್ಪಾದಿಸುವ ಮರಗಳ ಹುಡುಕಾಟವು ಪ್ರಾಚೀನ ಮಾನವರ ವಿಕಾಸಕ್ಕೆ ಪ್ರಾಯಶಃ ಕಾರಣವಾಗಿರಬುದು ಎಂದೂ ಅಧ್ಯಯನಕಾರರು ವಿಶ್ಲೇಷಿಸುತ್ತಿದ್ದಾರೆ.

suddiyaana