ಭಾರತದ ಬಲವೇ ಲೋವರ್ ಆರ್ಡರ್ – TOP ORDER ಫೇಲ್ಯೂರ್ ಯಾಕೆ?
RO-KO-JAI ಗಿಂತ ಇವರೇ ಬೆಸ್ಟ್

ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಬೌಲಿಂಗ್ ಸೆಲೆಕ್ಟ್ ಮಾಡ್ಕೊಂಡಿದ್ದಾರೆ. ರೋಹಿತ್ ಶರ್ಮಾ ಸ್ಟ್ರಾಟಜಿ ಕೂಡಾ ವರ್ಕೌಟ್ ಆಗ್ತಿದೆ. ಮೊದ್ಲೇ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಪಿಚ್ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಸಹಾಯಕವಾಗಲಿದೆ. ಹೀಗಾಗಿಯೇ ಟೀಮ್ ಇಂಡಿಯಾ ಕ್ಯಾಪ್ಟನ್ ಬಾಂಗ್ಲಾಗೆ ಬ್ಯಾಟಿಂಗ್ ನೀಡಿ ಆಲ್‌ರೆಡಿ ಬೆಂಡೆತ್ತಿದ್ದಾರೆ. ಪಿಚ್ ಮೊದಲ ಎರಡು ಸೆಷನ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಮತ್ತು ಕೊನೆಯ ಮೂರು ದಿನಗಳಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿ ಮೊದಲ ದಿನವೇ ಬಾಂಗ್ಲಾದ ಬ್ಯಾಟಿಂಗ್ ಬೆನ್ನೆಲುಬು ಮುರಿಯೋ ಕ್ಯಾಪ್ಟನ್ ಪ್ಲಾನ್ ಸಕ್ಸಸ್ ಆಗ್ತಿದೆ. ಆದ್ರೆ, ನೆಕ್ಸ್ಟ್ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಕೆಲ ಟೆನ್ಷನ್ ಶುರುವಾಗಿದೆ. ಅದುವೇ ಟಾಪ್ ಆರ್ಡರ್ ಫೆಲ್ಯೂರ್. ಟಾಪ್ ಆರ್ಡರ್ ಬ್ಯಾಟರ್‌ಗಿಂತ ಲೋವರ್ ಆರ್ಡರ್ ಬ್ಯಾಟರ್‌ಗಳೇ ಬೆಟರ್ ಆಗ್ತಿದ್ದಾರೆ. ಯಾಕೆ ಹೀಗಾಗ್ತಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಸ್ಟ್ರೆಂಥ್ ಇರೋದೇ ಟಾಪ್ ಆರ್ಡರಲ್ಲಿ. ಹಾಗಾದ್ರೆ, ಹಿಟ್ ಮ್ಯಾನ್, ರನ್ ಮೆಷಿನ್, ಯಂಗ್ ಗನ್ ಅಂತಾ ಕರೆಸಿಕೊಂಡ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಗಳು ಫೇಲ್ ಆಗ್ತಿರೋದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IPL ಹರಾಜಿಗೆ ಬರಲೇಬೇಕು KL – RCBಗೆ ಬರಲು ಒಪ್ಪಿದ್ರೂ ಟ್ರೇಡ್ ಇಲ್ಲ
ಟಾಪ್ ಆರ್ಡರ್ V/S ಲೋವರ್ ಆರ್ಡರ್..!
ಟೀಮ್ ಇಂಡಿಯಾದ ಬ್ಯಾಟಿಂಗ್ ಆರ್ಡರ್ನಲ್ಲಿ ಶುರುವಾಗಿದೆ ರಿಯಲ್ ಟೆನ್ಷನ್. ಯಾಕೆಂದ್ರೆ, ಈಗೀಗ ಟಾಪ್ ಆರ್ಡರ್ಗಿಂತ, ಲೋವರ್ ಆರ್ಡರ್ ಇಂಪಾರ್ಟೆಂಟ್ ಆಗಿ ಬದಲಾಗ್ತಿದೆ. ಚೆನ್ನೈನಲ್ಲಿ ನಡೆದ ಬಾಂಗ್ಲಾ ಎದುರಿನ ಮೊದಲ ಟೆಸ್ಟ್ನಲ್ಲಿ ಘಟಾನುಘಟಿ ಬ್ಯಾಟರ್ಗಳು ವೈಫಲ್ಯ ಅನುಭವಿಸಿದ್ದಾರೆ. ತಂಡ ನೆಚ್ಚಿಕೊಂಡಿದ್ದ ಸ್ಟಾರ್ ಬ್ಯಾಟರ್‌ಗಳಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಕೈಕೊಟ್ಟಿದ್ದರು. ಜೊತೆಗೆ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಪ್ ಸೆಂಚೂರಿ ಹೊಡೆದ್ರೂ ಕೂಡಾ ನೆಕ್ಸ್ಟ್ ಇನ್ನಿಂಗ್ಸ್‌ನಲ್ಲಿ ಕೈಕೊಟ್ಟಿದ್ರು. ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್ ನಲ್ಲೂ ಕೈಕೊಟ್ಟಿದ್ರು. ಈ ರೀತಿ ಟಾಪ್ ಆರ್ಡರ್ ಗಳ ವೈಫಲ್ಯ ಶುರುವಾಗಿದ್ದು 2021ರ ಬಳಿಕ. ಅಲ್ಲಿಂದಲೇ ಟಾಪ್ ಕ್ಲಾಸ್ ಬ್ಯಾಟರ್ಗಳ ಬ್ಯಾಟಿಂಗ್ ದರ್ಬಾರ್ಗಿಂತ, ಲೋವರ್ ಆರ್ಡರ್ ಬ್ಯಾಟರ್ಗಳ ದರ್ಬಾರ್ ಜೋರಾಗಿದೆ. 2021ರಿಂದ ಟೀಮ್ ಇಂಡಿಯಾದ ಬ್ಯಾಟಿಂಗ್ ನೋಡಿದ್ರೆ ಟಾಪ್-5ಗಿಂತ ಲೋವರ್ ಆರ್ಡರ್ನ 6 ರಿಂದ 8ರ ವರೆಗಿನ ಆಟಗಾರರ ಆಟವೇ ಅತ್ಯುತ್ತಮವಾಗಿದೆ. ಹೀಗೆ ಟಾಪ್ ಆರ್ಡರ್ ನಲ್ಲಿ ತಂಡಕ್ಕೆ ನೆರವಾಗ್ಬೇಕಿದ್ದ ಬ್ಯಾಟರ್ಸ್ ಕೈ ಕೊಡ್ತಿದ್ರೆ ಇತ್ತ ಲೋವರ್ ಆರ್ಡರ್ ಪ್ಲೇಯರ್ಸ್ ನೆರವಾಗ್ತಿದ್ದಾರೆ.
ಲೋವರ್ ಆರ್ಡರ್ ಬೆಸ್ಟ್!
2021ರಿಂದ ಟೀಮ್ ಇಂಡಿಯಾದ ಟಾಪ್-5 ಬ್ಯಾಟರ್ಗಳು 37.4ರ ಸರಾಸರಿಯಲ್ಲಿ 5428 ರನ್ ಗಳಿಸಿದ್ದಾರೆ. ಈ ಪೈಕಿ 13 ಶತಕ, 23 ಅರ್ಧಶತಕ ದಾಖಲಿಸಿದ್ದಾರೆ. ಇದೇ ಅವಧಿಯಲ್ಲಿ 6ರಿಂದ 8ನೇ ಕ್ರಮಾಂಕದ ಮೂವರು ಬ್ಯಾಟರ್ಗಳು 38.2ರ ಬ್ಯಾಟಿಂಗ್ ಅವರೇಜ್ನಲ್ಲಿ 2753 ರನ್ ಕಲೆ ಹಾಕಿದ್ದಾರೆ. 4 ಶತಕ, 18 ಅರ್ಧಶತಕ ದಾಖಲಿಸಿದ್ದಾರೆ. ಟಾಪ್-5 ಬ್ಯಾಟರ್ಗಳಿಗೆ ಹೋಲಿಸಿದ್ರೆ ಕೆಳ ಕ್ರಮಾಂಕದ ಆಟಗಾರರ ರನ್ ಕಡಿಮೆಯಾಗಿರಬಹುದು. ಬ್ಯಾಟಿಂಗ್ ಅವರೇಜ್ನಲ್ಲಿ ಟಾಪ್-5 ಬ್ಯಾಟರ್ಗಳನ್ನೇ ಮೀರಿಸಿದ್ದಾರೆ. ಟಾಪ್ ಆರ್ಡರ್ಗಿಂತ ಲೋವರ್ ಆರ್ಡರ್ ಬೆಸ್ಟ್ ಅನ್ನೋದನ್ನ ಈ ಅಂಕಿ ಅಂಶಗಳೇ ನಿರೂಪಿಸಿವೆ. ಮಿಡಲ್ ಆರ್ಡರ್ಗೆ ಖಾಯಂ ಬ್ಯಾಟರ್ಗಳು ಇಲ್ಲದಿರುವುದು ಸಹ ಬ್ಯಾಟಿಂಗ್ ಅವರೇಜ್ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಾದರು, ತಪ್ಪಗಳನ್ನ ತಿದ್ದಿಕೊಂಡು ಟಾಪ್ ಆರ್ಡರ್ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡಬೇಕಿದೆ.