ಮದುವೆಯಾಗಿ 10 ವರ್ಷದ ನಂತರ ಮತ್ತೊಬ್ಬಳ ಮೇಲೆ ಆಸೆ – ಗುಟ್ಟಾಗಿ ತಾಳಿ ಕಟ್ಟಿ, ಪ್ರೇಯಸಿಯನ್ನೇ ಕೊಂದ ಪಾಪಿ

ಇತ್ತೀಚೆಗೆ ಕೆಲವೊಂದು ಅನೈತಿಕ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುದನ್ನು ಕೇಳಿದ್ದೇವೆ. ಆದರೆ, ಬೆಂಗಳೂರಲ್ಲಿ ಮತ್ತೊಂದು ಕೊಲೆ ನಡೆದಿದೆ. ಅದೂ ಕೂಡಾ ಅನೈತಿಕ ಸಂಬಂಧದಿಂದಲೇ. ಇಲ್ಲಿ ಪಾಪಿ ಪ್ರಿಯಕರ ಹುಡುಗಿಯನ್ನು ಕೊಂದೇ ಬಿಟ್ಟಿದ್ದಾನೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹೃದಯಾಘಾತದಿಂದ 6 ವರ್ಷದ ಬಾಲಕ ಸಾ*ವು – ಕೋಲಾರದಲ್ಲಿ ಸಂಪ್‌ಗೆ ಮಗು ಬಲಿ
ಪ್ರೀತಿ ಎಂದರೆ ಒಂದು ಗೌರವ. ಪ್ರೀತಿ ಎಂದರೆ ಮರ್ಯಾದೆ, ಆದರೆ, ಈಗ ಕೆಲವೊಂದು ಪ್ರಕರಣಗಳು ದಾಖಲಾಗುವುದು ನೋಡಿದರೆ ಪ್ರೀತಿ ಹೆಸರಲ್ಲಿ ನಡೆಯುತ್ತಿರುವುದು ಅನಾಚಾರ. ಈಗಿನ ಕಾಲದ ಪ್ರೇಮಿಗಳ ಸ್ಟೋರಿ ನೋಡಿದರೆ ಕ್ಯಾಕರಿಸಿ ಉಗಿಯಬೇಕು ಅನಿಸುತ್ತೆ. ಇಲ್ಲಾಗಿದ್ದು ಅದೆ. ಬೆಂಗಳೂರಿನ ಬ್ಯಾಡರಹಳ್ಳಿಯ ತಿಗಳರಪಾಳ್ಯ ತುಳಸಿನಗರದಲ್ಲಿ ಯುವತಿಯೊಬ್ಬಳು ಪ್ರಿಯಕರನಿಂದ ಕೊಲೆಯಾಗಿದ್ದಾಳೆ. 22 ವರ್ಷದ ಭವಾನಿ ಕೊಲೆಯಾದ ಪ್ರಿಯತಮೆ. ಆರೋಪಿ ಚಂದ್ರಶೇಖರ್ ಅಲಿಯಾಸ್ ಚಂದನ್ ಪ್ರೀತಿಯ ಬಲೆಯಲ್ಲಿ ಬಿದ್ದವಳು ಕಂಡಿದ್ದು ಮಾತ್ರ ದುರಂತ ಅಂತ್ಯ.
ಹತ್ತು ವರ್ಷಗಳ ಹಿಂದೆ ಮದುವೆ ಆಗಿದ್ದ ಚಂದನ್ಗೆ ಆರು ವರ್ಷದ ಮಗು ಇದೆ. ಆದರೆ, ಇದೇ ಗ್ಯಾಪ್‌ಲ್ಲಿ ಭವಾನಿ ಎಂಬ ಯುವತಿಯ ಮೇಲೆ ಪ್ರೀತಿ ಹುಟ್ಟಿದೆ. ಭವಾನಿ ಜೊತೆ ಒಂದು ವರ್ಷದ ಹಿಂದೆ ಗುಟ್ಟಾಗಿ ಮದುವೆಯಾಗಿದ್ದನು. ಈ ನಡುವೆ ಭವಾನಿ ಮದುವೆಗೆ ಪೋಷಕರು ಸಿದ್ಧತೆ ನಡೆಸಿದ್ದರು. ಮುಂದಿನ ವಾರ ಎಂಗೇಜ್ಮೆಂಟ್ಗೂ ತಯಾರಿ ನಡೆಸಿದ್ದರು. ಈ ವಿಚಾರವನ್ನು ಭವಾನಿ ಚಂದನ್ಗೆ ತಿಳಿಸಿದ್ದಾಳೆ. ಎಂಗೇಜ್ಮೆಂಟ್ ವಿಚಾರವಾಗಿ ಇಬ್ಬರೂ ಗುಟ್ಟಾಗಿ ಮಾಡಿಕೊಂಡ ಮನೆಯಲ್ಲಿ ಜಗಳವಾಡಿದ್ದಾರೆ. ಚಂದನ್ ಹಾಗೂ ಭವಾನಿ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ನಮ್ಮ ಮನೇಲಿ ಗೊತ್ತಾದ್ರೆ ಜಗಳ ಆಗುತ್ತೆ, ತಂದೆ ಒಪ್ಪಲ್ಲ ಅಂತಾ ಭವಾನಿ ಹೇಳಿದ್ದಾಳೆ. ಇದಕ್ಕೆ ಚಂದನ್, ಸರಿ ಮದುವೆ ಆಗೋದು ಬೇಡ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತಾ ಪುಸಲಾಯಿಸಿದ್ದಾನೆ. ಭವಾನಿ ಜೊತೆ ತಾನೂ ವಿಷ ಕುಡಿದಂತೆ ನಾಟಕವಾಡಿದ್ದಾನೆ. ವಿಷ ಸೇವಿಸಿದ್ದ ಭವಾನಿ ವಾಂತಿ ಮಾಡಿಕೊಂಡಿದ್ದಾಳೆ. ಈ ವೇಳೆ ಚಂದನ್ ಆಕೆಯನ್ನ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಭವಾನಿ ಸಾಯುತ್ತಿದ್ದಂತೆ ಚಂದನ್, ಭವಾನಿ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಒಂದು ವರ್ಷದ ಆನಿವರ್ಸರಿ ಅಂತಾ ಇಬ್ಬರು ಮದುವೆಯಾಗಿದ್ದ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ. ಇದನ್ನು ಗಮನಿಸಿದ್ದ ಭವಾನಿ ಸಂಬಂಧಿಕರು ಸ್ಕ್ರೀನ್ ಶಾಟ್ ತೆಗೆದುಕೊಂಡು ಫೋಟೋವನ್ನು ಭವಾನಿ ಪೋಷಕರಿಗೆ ಕಳುಹಿಸಿದ್ದರು. ಫೋಟೋ ನೋಡಿದ ಕೂಡಲೇ ತಂದೆ ಶ್ರೀನಿವಾಸ್ ಮಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಕಾಲ್ ರಿಸೀವ್ ಮಾಡದಿದ್ದಾಗ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆ ಮಾಲೀಕರು ಹೋಗಿ ನೋಡಿದಾಗ ಭವಾನಿ ಶವವಾಗಿ ಮಲಗಿದ್ರೆ, ಚಂದ್ರಶೇಖರ್ ವಿಷ ಕುಡಿದು ಒದ್ದಾಡುತ್ತಿದ್ದನಂತೆ. ಬಾಗಿಲು ಒಡೆದು ಒಳ ಹೋದಾಗ ಭವಾನಿ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಸದ್ಯ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಲ್ಲಿ ಪ್ರೀತಿ ಹೆಸರಲ್ಲಿ ನಡೆದಿದ್ದು ಯುವತಿಯ ಕೊಲೆ. ಆತನಿಂದ ಪತ್ನಿಗೂ ಅನ್ಯಾಯವಾಗಿದೆ. ಮುದ್ದು ಮಗಳು ಆರು ವರ್ಷದ ಕಂದಮ್ಮನಿಗೂ ಪಾಪಿ ತಂದೆ ಅನ್ಯಾಯ ಮಾಡಿದ್ದಾನೆ. ಇಂಥವರ ಅನೈತಿಕ ಸಂಬಂಧಕ್ಕೆ ಅತ್ತ ಸಂಸಾರವೂ ಹಾಳು. ಇತ್ತ ಯುವತಿಯ ಕುಟುಂಬಕ್ಕೆ ಸಿಕ್ಕಿದ್ದು ಬರೀ ಕಣ್ಣೀರು.

ನೋಡಿರಿ

