ಸ್ಯಾಂಡಲ್ವುಡ್ ಭರವಸೆಯ ನಟ ರಾಜ್ ಬಿ ಶೆಟ್ಟಿ ರುದ್ರಾವತಾರ – ‘ರಕ್ಕಸಪುರದೋಳ್’ ಸಿನಿಮಾದ ಲುಕ್ ಬಿಡುಗಡೆ

ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೋಳ್’ ಸಿನಿಮಾದ ಲುಕ್ ಬಿಡುಗಡೆಯಾಗಿದೆ. ಹೊತ್ತಿ ಉರಿಯುವ ಬೆಂಕಿಯಲ್ಲಿ ಕ್ರೋಧ ಭರಿತ ಲುಕ್ನಲ್ಲಿ ರಾಜ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಕ್ತಸಿಕ್ತ ಅವತಾರದಲ್ಲಿ ಡಿವೈನ್ಸ್ಟಾರ್ ಘರ್ಜನೆ! – ಕಾಂತಾರ ಚಾಪ್ಟರ್ 1 ಪೋಸ್ಟರ್ ರಿಲೀಸ್
ರಾಜ್ ಬಿ ಶೆಟ್ಟಿ ಅವರು ಜುಲೈ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಾಜ್ ಶೆಟ್ಟಿಯವರಿಗೆ ಬರ್ತ್ಡೇ ಗಿಫ್ಟ್ ಕೂಡಾ ಭರ್ಜರಿಯಾಗಿಯೇ ಸಿಕ್ಕಿದೆ. ಜನ್ಮದಿನದ ಪ್ರಯುಕ್ತ ಅವರ ನಟನೆಯ ‘ರಕ್ಕಸಪುರದೋಳ್’ ಸಿನಿಮಾದ ಲುಕ್ ಬಿಡುಗಡೆಯಾಗಿದೆ. ಸಿನಿಮಾ ಲುಕ್ನಲ್ಲಿ ರಾಜ್ ಬಿ ಶೆಟ್ಟಿಯವರ ರುದ್ರಾವತಾರ ಕಾಣಿಸಿದೆ.
‘ಬೀದಿ ಬೀದಿಗಳಲ್ಲಿ ಭಯ ಕಾರ್ಯಭಾರ ಮಾಡುವಾಗ ಅವನು ರೋಷದಲ್ಲಿ ಮುನ್ನುಗ್ಗುತ್ತಾನೆ’ ಎಂಬ ಟ್ಯಾಗ್ಲೈನ್ ಅನ್ನೂ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ರಾಜ್ ಶೆಟ್ಟಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿ ಸಾರಂಗ ನಿರ್ದೇಶನದ ಈ ಸಿನಿಮಾವನ್ನು ಸಾಹಸ ನಿರ್ದೇಶಕ ಡಾ ರವಿವರ್ಮ ನಿರ್ಮಾಣ ಮಾಡುತ್ತಿದ್ದಾರೆ. ಸ್ವಾತಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ ನಾಯಕಿಯರು. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನವಿದೆ. ರಕ್ಕಸಪುರದೋಳ್ ಚಿತ್ರದ ಕಥೆ ಬಹಳ ಚೆನ್ನಾಗಿದೆ. ಈ ಸಿನಿಮಾ ಬಗ್ಗೆ ರಾಜ್ ಬಿ ಶೆಟ್ಟಿ ಅಭಿಮಾನದಿಂದ ಮಾತಾಡಿದರು. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ರೆಡಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಇದರಲ್ಲಿದೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದರು.

ನೋಡಿರಿ

