ಆಗಸ್ಟ್ 2ಕ್ಕೆ ಭಯಂಕರ ಸೂರ್ಯಗ್ರಹಣ – 6 ನಿಮಿಷ ಇಡೀ ಜಗತ್ತಿಗೆ ಕತ್ತಲು!
ಗ್ರಹಣ ಗ್ರಹಚಾರಕ್ಕೆ ಪರಿಹಾರವೇನು?

ಆಗಸ್ಟ್ 2ಕ್ಕೆ ಭಯಂಕರ ಸೂರ್ಯಗ್ರಹಣ –  6 ನಿಮಿಷ ಇಡೀ ಜಗತ್ತಿಗೆ ಕತ್ತಲು!ಗ್ರಹಣ ಗ್ರಹಚಾರಕ್ಕೆ ಪರಿಹಾರವೇನು?

ಗ್ರಹಣ ಅಂದ್ರೆ ಜನರಿಗೆ ಭಯ ಶುರುವಾಗುತ್ತೆ.. ಗ್ರಹಣದಿಂದ ಗ್ರಹಚಾರ ಕೆಡುತ್ತಾ ಅನ್ನೋ ಭಯ ಹೆಚ್ಚಾಗುತ್ತೆ..  ಸಣ್ಣಪುಟ್ಟ ಗ್ರಹಣ ಬಂದ್ರೆನೇ ಜನ ಜಪತಪ, ಪೂಜೆ ಪುನಸ್ಕಾರ ಅಂತ ಮನೆಯನ್ನ ಸ್ವಚ್ಚ ಮಾಡಿ ಗ್ರಹಣ ಗ್ರಹಚಾರದಿಂದ ಮುಕ್ತಿ ಪಡೆಯೋಕೆ ದೇವರ ಮೊರೆ ಹೋಗ್ತಾರೆ. ಹೀಗಿರುವಾಗ ನೂರು ವರ್ಷದಲ್ಲೇ ಅತೀ ದೊಡ್ಡ ಗ್ರಹಣ ನಡೆಯುತ್ತೆ ಅಂತ ಕೇಳಿದ್ರೆನೇ ಭಯ ಆಗುತ್ತೆ ಅಲ್ವಾ.. ಹಗಲಲ್ಲಿ 6 ನಿಮಿಷ ಕತ್ತಲಾದ್ರೆ ಹೇಗಿರುತ್ತೆ?.. ಕಾಣುತ್ತಿದ್ದ ಸೂರ್ಯ ನೋಡ ನೋಡುತ್ತಿದ್ದಂತೆ ಕಣ್ಮರೆಯಾದ್ರೆ ಭಯನೇ ಆಗುತ್ತೆ ಅಲ್ವಾ.. ಹೌದು ನೀವು ಜೀವನದಲ್ಲೇ ನೋಡದ ಅತೀ ದೊಡ್ಡ ಸೂರ್ಯಗ್ರಹಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಲಿದೆ.

ಆಗಸ್ಟ್ 2..2027.. ಆಗಸದಲ್ಲಿ ಕೌತಕ ನಡೆಯಲಿದೆ.. ಇಡೀ ಜಗತ್ತೇ ದೊಡ್ಡ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ..  ಗ್ರಹಣಕ್ಕೆ ಇನ್ನೂ ಎರಡ್ ವರ್ಷ ಇದೆ .. ಈಗಲೇ ಯಾಕ್ ಹೇಳ್ತಾ ಇದ್ಯಾ ಅಂತ ನೀವು ಕೇಳಬಹುದು.. ನಿಜ ಇನ್ನೂ ಎರಡು ವರ್ಷ ಇದ್ರೂ ಈ ಗ್ರಹಣ ನೀವು ಇಷ್ಟು ವರ್ಷ ನೋಡಿದ ಗ್ರಹಣದಂತೆ ಅಲ್ಲ.. ಭೂಮಿಯಿಂದ ಗೋಚರಿಸುವ ಅತಿ ದೀರ್ಘವಾದ ಪೂರ್ಣ ಸೂರ್ಯಗ್ರಹಣ ಇದಾಗಿರುತ್ತದೆ. ಹಗಲಲ್ಲಿ ಸೂರ್ಯ ಸಂಪೂರ್ಣವಾಗಿ ಕಣ್ಮರೆಯಾಗುತ್ತಾನೆ. ಸುಮಾರು 6 ನಿಮಿಷಗಳ ಕಾಲ ಭೂಮಿಯು ಕತ್ತಲಲ್ಲಿ ಮುಳುಗುತ್ತದೆ. ನೂರಾರು ವರ್ಷಗಳ ಇತಿಹಾಸದಲ್ಲಿ ಇದು ಅತಿ ದೀರ್ಘವಾದ ಸೂರ್ಯಗ್ರಹಣವಾಗಿದೆ.

ಇತಿಹಾಸದಲ್ಲಿ ಅತೀ ದೀರ್ಘವಾದ ಪೂರ್ಣ ಸೂರ್ಯಗ್ರಹಣ ಕ್ರಿ.ಪೂ 743ರಲ್ಲಿ ಸಂಭವಿಸಿತ್ತು. ಆಗ 7 ನಿಮಿಷ 28 ಸೆಕೆಂಡುಗಳ ಕಾಲ ಭೂಮಿಯ ಮೇಲೆ ಕತ್ತಲು ಆವರಿಸಿತ್ತು.  ಅದು ಬಿಟ್ರೆ 2027 ಆಗಸ್ಟ್ 2 ರಂದು ಬರಲಿರುವ ಸೂರ್ಯಗ್ರಹಣವು ದೊಡ್ಡ ಸೂರ್ಯಗ್ರಹಣವಾಗಿದೆ. ಆದ್ದರಿಂದ ಭೂಮಿಯ ಮೇಲಿನ ವಿವಿಧ ಖಂಡಗಳಲ್ಲಿರುವ ಕೋಟ್ಯಾಂತರ ಜನರಿಗೆ, ಆಕಾಶ ವೀಕ್ಷಕರಿಗೆ, ವಿಜ್ಞಾನಿಗಳಿಗೆ, ಛಾಯಾಗ್ರಾಹಕರು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಸಂಪೂರ್ಣ ಸೂರ್ಯಗ್ರಹಣ ಆಗೋಕೆ ಮೂರು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಭೂಮಿಯು ಸೂರ್ಯನಿಂದ ಅತ್ಯಂತ ದೂರದಲ್ಲಿರುತ್ತದೆ. . ಇದರಿಂದಾಗಿ ಸೂರ್ಯ ಚಿಕ್ಕದಾಗಿ ಕಾಣುತ್ತದೆ. ಎರಡನೇಯ ಕಾರಣವೆಂದರೆ ಚಂದ್ರನು ಭೂಮಿಗೆ ಹತ್ತಿರವಾಗುವುದರಿಂದ ಅದು ದೊಡ್ಡದಾಗಿ ಕಾಣುತ್ತದೆ. ಮೂರನೆಯದಾಗಿ, ಚಂದ್ರನ ನೆರಳು ಸಮಭಾಜಕದ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ನೆರಳು ನಿಧಾನವಾಗಿ ಬೆಳೆಯುತ್ತದೆ. ಹೀಗಾಗಿ ಭೂಮಿಗೆ ಚಂದ್ರ ಅಡ್ಡ ಬಂದು 6 ನಿಮಿಷಗಳ ಕಾಲ ಸೂರ್ಯ ಕಾಣೋದಿಲ್ಲ.

  ಭಾರತದಲ್ಲಿ ಗ್ರಹಣ ಗೋಚರಿಸುತ್ತಾ?

2027ರ ಆಗಸ್ಟ್‌ನಲ್ಲಿ ಸಂಭವಿಸುವ ಸೂರ್ಯಗ್ರಹಣ ಭಾರತ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ಗೋಚರಿಸುವುದಿಲ್ಲ. ಲಿಬಿಯಾದ ಬೆಂಗಾಜಿಯಲ್ಲಿ ಈ ಸೂರ್ಯಗ್ರಹಣವನ್ನು ವೀಕ್ಷಿಸಲು ಉತ್ತಮ ಸ್ಥಳವಾಗಿದೆ. ಈಜಿಪ್ಟ್‌ನ ಐತಿಹಾಸಿಕ ನಗರವಾದ ಲಕ್ಸರ್ ಬಳಿ 6 ನಿಮಿಷಗಳ ಕಾಲ ದಟ್ಟವಾದ ಕತ್ತಲು ಇರುತ್ತದೆ. ಇಟಾಲಿಯನ್ ದ್ವೀಪವಾದ ಲ್ಯಾಂಪೆಡೂಸಾ ಸಂಪೂರ್ಣವಾಗಿ ಕತ್ತಲಿನಿಂದ ಆವೃತವಾಗಿರುತ್ತದೆ. ಸೌದಿ ಅರೇಬಿಯಾದ ಜೆಡ್ಡಾ, ಮೆಕ್ಕಾ, ಯೆಮೆನ್ ಮತ್ತು ಸೊಮಾಲಿಯಾದ ಕೆಲವು ಭಾಗಗಳು ಗ್ರಹಣವನ್ನು ವೀಕ್ಷಿಸುವ ಕೊನೆಯ ಸ್ಥಳಗಳಾಗಿವೆ. 2027ರ ನಂತರ ಇಂತಹ ಸೂರ್ಯಗ್ರಹಣವು 2117ರಲ್ಲಿ ಸಂಭವಿಸುವುದರಿಂದ, ಅನೇಕ ಬಾಹ್ಯಾಕಾಶ ಉತ್ಸಾಹಿಗಳು ಈ ದೃಶ್ಯವನ್ನು ಸೆರೆಹಿಡಿಯಲು ಆಫ್ರಿಕಾಕ್ಕೆ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಬಹುದು.

Kishor KV