ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಇರೋ ನಗರಗಳ ಪಟ್ಟಿ ಬಿಡುಗಡೆ – ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಇರೋ ನಗರಗಳ ಪಟ್ಟಿ ಬಿಡುಗಡೆ – ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

ಈಗ ಎಲ್ಲಿ ನೋಡಿದ್ರೂ ಟ್ರಾಫಿಕ್‌ ಕಿರಿಕಿರಿ. ದೊಡ್ಡ ದೊಡ್ಡ ನಗರಗಳಲ್ಲಿ ವಾಹನ ದಟ್ಟಣೆಯಿಂದಾಗಿ ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ಇದೆ. ಇದೀಗ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್‌ ಇರೋ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಅತಿಹೆಚ್ಚು ಸಂಚಾರದಟ್ಟಣೆ ಹೊಂದಿರುವ ನಗರಗಳ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲೇ 6ನೇ ಸ್ಥಾನ ಪಡೆದುಕೊಂಡಿದೆ.  ದೇಶದಲ್ಲಿ ಮೊದಲನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: 3ನೇ ಟೆಸ್ಟ್ ಆಡೋದಿಲ್ವಾ ಜಸ್ಪ್ರಿತ್ ಬುಮ್ರಾ? – ಕೊಹ್ಲಿನೂ ಆಡಲ್ವಾ?

ಹೌದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಟ್ರಾಫಿಕ್‌ ಪೊಲೀಸರು ಕೂಡ ಹರಸಾಹಸ ಪಡುತ್ತಿದ್ದಾರೆ. ಇದೀಗ ಡಚ್ ಜಿಯೋಲೊಕೇಶನ್ ಟೆಕ್ನಾಲಜಿ ಸಂಸ್ಥೆ ಟಾಮ್ ಟಾಮ್’ ವಾರ್ಷಿಕ ಸಂಚಾರ ದಟ್ಟಣೆ ಸೂಚ್ಯಂಕದ ಸಮೀಕ್ಷೆ ನಡೆಸಿದೆ. ಒಟ್ಟು 53 ದೇಶಗಳ 381 ನಗರಗಳನ್ನು ಆಧರಿಸಿ ಸಮೀಕ್ಷೆ ನಡೆಸಿದೆ.

ಈ ಪೈಕಿ ವಿಶ್ವದ ಟಾಪ್ 10 ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ 387 ನಗರಗಳ ಪಟ್ಟಿಯ ಟಾಪ್ 10ರಲ್ಲಿ ಭಾರತದ ಎರಡು ನಗರಗಳಾದ ಬೆಂಗಳೂರು ಹಾಗೂ ಮಹಾರಾಷ್ಟ್ರದ ಪುಣೆ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿವೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯು ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿದೆ. ನಗರದಲ್ಲಿ ಸರಾಸರಿ ವೇಗ 18ಕಿ.ಮೀ.: ಬೆಂಗಳೂರು ನಗರದಲ್ಲಿ ಸಂಚರಿಸುವ ವಾಹನವೊಂದರ ಸರಾಸರಿ ವೇಗವು ಗಂಟೆಗೆ 18 ಕಿ.ಮೀ.ಗಳಾಗಿದೆ. ಅಲ್ಲದೇ ನಗರದಲ್ಲಿ 10 ಕಿ.ಮೀ. ಪ್ರಯಾಣಿಸಲು ಒಂದು ವಾಹನಕ್ಕೆ ಸರಾಸರಿ 28.10 ನಿಮಿಷಗಳ ಸಮಯ ಬೇಕಾಗುತ್ತದೆ ಎಂದು ವರದಿ ಹೇಳಿದೆ.

ಇನ್ನು  ಸಮೀಕ್ಷೆ ವರದಿಯ ಪಟ್ಟಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವೆಂದರೆ ಬ್ರಿಟನ್ ರಾಜಧಾನಿ ಲಂಡನ್‌. ಇದು ಮೊದಲನೇ ಸ್ಥಾನ ಪಡೆದುಕೊಂಡಿದೆ. ಡಬ್ಲಿನ್ 2 ನೇ ಸ್ಥಾನ ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಟೊರೊಂಟೋ , ಮಿಲನ್ 4ನೇ ಸ್ಥಾನ, ಲಿಮಾ 5ನೇ ಸ್ಥಾನ, ಬೆಂಗಳೂರು 6 ಸ್ಥಾನ, ಪುಣೆ 7ನೇ ಸ್ಥಾನದಲ್ಲಿದೆ.

Shwetha M