ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ – ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಂಡ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಬೆಂಗಳೂರು: ಕರ್ನಾಟಕದ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆಯಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರುವ ದೇವಾಲಯಗಳ ಪೈಕಿ ಕುಕ್ಕೆ ಸುಬ್ರಮಣ್ಯ ಶ್ರೀಮಂತ ದೇವಾಲಯವಾಗಿದ್ದು, ಕಳೆದ ವರ್ಷವೂ ಮೊದಲ ಸ್ಥಾನದಲ್ಲಿತ್ತು. ಈ ವರ್ಷವೂ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ: ಅನ್ನಭಾಗ್ಯದ ಹಣ ಪಡೆಯಲು ಷರತ್ತು– ಆಧಾರ್ ಲಿಂಕ್ ಆಗಿದ್ರೆ ಮಾತ್ರ ಧನಭಾಗ್ಯ!
2022-23ರ ಅವಧಿಯಲ್ಲಿ ದೇವಾಲಯ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮೂರನೇ ಸ್ಥಾನವನ್ನು ಪಡೆದಿದೆ.
ಯಾವ ದೇವಸ್ಥಾನದ ಆದಾಯ ಎಷ್ಟು?
- ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ – ಆದಾಯ : 123.64 ಕೋಟಿ ರೂ. – ವೆಚ್ಚ : 63.77 ಕೋಟಿ ರೂ.
- ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು – ಆದಾಯ : 59.47 ಲಕ್ಷ ರೂ. -ವೆಚ್ಚ: 33.32 ಲಕ್ಷ ರೂ.
- ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು – ಆದಾಯ: 52.40 ಲಕ್ಷ ರೂ. – ವೆಚ್ಚ: 52.40 ಲಕ್ಷ ರೂ.
- ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಎಡೆಯೂರು – ಆದಾಯ: 36.48 ಲಕ್ಷ ರೂ. – ವೆಚ್ಚ: 35.68 ಲಕ್ಷ ರೂ.
- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು – ಆದಾಯ: 32.10 ಕೋಟಿ ರೂ. – ವೆಚ್ಚ: 25.97 ಕೋಟಿ ರೂ.
- ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ನಂಜನಗೂಡು – ಆದಾಯ: 26.71 ಕೋಟಿ ರೂ. – ವೆಚ್ಚ: 18. 74 ಕೋಟಿ ರೂ.
- ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ – ಆದಾಯ: 22.52 ಕೋಟಿ ರೂ. – ವೆಚ್ಚ: 11.51 ಕೋಟಿ ರೂ.
- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ – ಆದಾಯ: 14 .55 ಕೋಟಿ ರೂ. – ವೆಚ್ಚ: 13.02ಕೋಟಿ ರೂ.
- ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರ – ಆದಾಯ: 12.25 ಕೋಟಿ ರೂ.- ವೆಚ್ಚ: 7.40 ಕೋಟಿ ರೂ.
- ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು – ಆದಾಯ: 10.58 ಕೋಟಿ ರೂ. – ವೆಚ್ಚ: 19.41 ಕೋಟಿ ರೂ.