34 ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?, ಇದುವೇ ಅಧಿಕೃತ ಪಟ್ಟಿನಾ?

34 ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?, ಇದುವೇ ಅಧಿಕೃತ ಪಟ್ಟಿನಾ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಶನಿವಾರ 24 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಾದ ಬಳಿಕ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಇತ್ತು. ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿ 34 ಮಂದಿ ಸಚಿವರಿಗೂ  ಖಾತೆ ಹಂಚಿಕೆ ಮಾಡಲಾಗಿದೆ ಎಂಬ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇನ್ನೂ ಸಹ ಸಿಎಂ ಕಚೇರಿಯಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ:   ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಕಿತ್ತಾಟ – ಜೋರಾಗಿ ಸಾಗುತ್ತಿದೆ ‘ರಾಜದಂಡ’ ಸಮರ

ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ಅವರು ಹಣಕಾಸು, ವಾರ್ತಾ ಮತ್ತು ಪ್ರಸಾರ, ಗುಪ್ತಚರ ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ತಮ್ಮ ಬೇಡಿಕೆಯಂತೆ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನು ಪಡೆಯುವಲ್ಲಿ ಸಕ್ಸಸ್‌ ಆಗಿದ್ದಾರೆ.

ಯಾರಿಗೆ ಯಾವ ಖಾತೆ?

  • ಸಿದ್ದರಾಮಯ್ಯ – ಹಣಕಾಸು, ಗುಪ್ತಚರ,ವಾರ್ತಾ ಮತ್ತು ಪ್ರಸಾರ
  • ಡಿಕೆ ಶಿವಕುಮಾರ್ – ಜಲ ಸಂಪನ್ಮೂಲ, ಬೆಂಗಳೂರು ನಗರ ಅಭಿವೃದ್ಧಿ.
  • ಡಾ.ಜಿ ಪರಮೇಶ್ವರ -ಗೃಹ
  • ಎಚ್.ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ, ಸಣ್ಣ ನೀರಾವರಿ.
  • ಕೆ.ಎಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
  • ಕೆ.ಜೆ ಜಾರ್ಜ್ – ಇಂಧನ
  • ಎಂ.ಬಿ ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಐಟಿ ಬಿಟಿ ಖಾತೆ
  • ರಾಮಲಿಂಗ ರೆಡ್ಡಿ – ಸಾರಿಗೆ ಸತೀಶ್
  • ಜಾರಕಿಹೊಳಿ – ಲೋಕೋಪಯೋಗಿ
  • ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಜಮೀರ್ ಅಹಮದ್ – ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ
  • ಕೃಷ್ಣ ಬೈರೇಗೌಡ – ಕಂದಾಯ
  • ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಚಲುವರಾಯಸ್ವಾಮಿ – ಕೃಷಿ
  • ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ
  • ಹೆಚ್ ಸಿ ಮಹದೇವಪ್ಪ – ಸಮಾಜ ಕಲ್ಯಾಣ
  • ಈಶ್ವರ್ ಖಂಡ್ರೆ – ಅರಣ್ಯ, ಪರಿಸರ ವಿಜ್ಞಾನ
  • ಕೆ ಎನ್ ರಾಜಣ್ಣ – ಸಹಕಾರ ಶರಣಬಸಪ್ಪ
  • ದರ್ಶನಾಪುರ – ಸಣ್ಣ ಕೈಗಾರಿಕೆ ಶಿವಾನಂದ
  • ಪಾಟೀಲ್ – ಜವಳಿ, ಸಕ್ಕರೆ ಆರ್.ಬಿ
  • ತಿಮ್ಮಾಪುರ – ಅಬಕಾರಿ ಮತ್ತು ಮುಜರಾಯಿ
  • ಎಸ್.ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ
  • ಶಿವರಾಜ ತಂಗಡಗಿ – ಹಿಂದುಳಿದ ವರ್ಗ ಮತ್ತು ಎಸ್.ಟಿ ಕಲ್ಯಾಣ
  • ಶರಣ ಪ್ರಕಾಶ ಪಾಟೀಲ – ಉನ್ನತ ಶಿಕ್ಷಣ ಮಾಂಕಾಳ್
  • ವೈದ್ಯ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
  • ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ.
  • ರಹೀಂ ಖಾನ್ – ಪೌರಾಡಳಿತ, ಹಜ್
  • ಡಿ ಸುಧಾಕರ್ – ಮೂಲಸೌಕರ್ಯ ಅಭಿವೃದ್ಧಿ
  • ಸಂತೋಶ್ ಲಾಡ್ – ಕಾರ್ಮಿಕ
  • ಎನ್.ಎಸ್.ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
  • ಬೈರತಿ ಸುರೇಶ್ – ನಗರಾಭಿವೃದ್ದಿ
  • ಮಧು ಬಂಗಾರಪ್ಪ -ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಎಂ.ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
  • ಬಿ.ನಾಗೇಂದ್ರ – ಕ್ರೀಡಾ, ಯವಜನ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

suddiyaana