ಒಟಿಟಿಯಲ್ಲೂ ರಿಲೀಸ್ ಆಗಲಿದೆ ‘ದಿ ಕೇರಳ ಸ್ಟೋರಿ’! – ಯಾವಾಗ ಬಿಡುಗಡೆ ಗೊತ್ತಾ?

ಒಟಿಟಿಯಲ್ಲೂ ರಿಲೀಸ್ ಆಗಲಿದೆ ‘ದಿ ಕೇರಳ ಸ್ಟೋರಿ’! – ಯಾವಾಗ ಬಿಡುಗಡೆ ಗೊತ್ತಾ?

ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿಸಿರುವ ‘ದಿ ಕೇರಳ ಸ್ಟೋರಿ” ಮೇ 5 ರಂದು ರಿಲೀಸ್ ಆಗಿದೆ. ಭಾರಿ ವಿರೋಧಗಳ ನಡುವೆಯೂ ಈ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಕೋಟಿಗೂ ಮೀರಿದ ಕಮಾಯಿ ಮಾಡಿದೆ.

‘ದಿ ಕೇರಳ ಸ್ಟೋರಿʼ ಸಿನಿಮಾಗೆ ಥಿಯೇಟರ್‌ ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ನಡುವೆ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಸಿನಿಮಾ ರಿಲೀಸ್‌ ವೇಳೆ ಸಿನಿಮಾದ ಒಟಿಟಿ ರೈಟ್ಸ್‌ ಬಗ್ಗೆ ಚಿತ್ರತಂಡ ಹೇಳಿರಲಿಲ್ಲ. ಆದರೆ ಇದೀಗ ಜೀ ನೆಟವರ್ಕ್‌ ನೊಂದಿಗೆ ಸಿನಿಮಾ ತಂಡದ ಮಾತುಕತೆ ಅಂತಿಮವಾಗಿದ್ದು, ಈ ಕುರಿತ ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿಯಿದೆ ಎಂದು ಒಟಿಟಿ ಪ್ಲೇ ವರದಿ ತಿಳಿಸಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸರ್ಕಾರ!

ಈ ಸಿನಿಮಾ ಬಿಡುಗಡೆಯಾದ ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಜುಲೈ 7 ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಚಿತ್ರ ತಂಡ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.

ಸುದೀಪ್ತೋ ಸೇನ್ ನಿರ್ದೇಶನದ ʼದಿ ಕೇರಳ ಸ್ಟೋರಿʼ ಸಿನಿಮಾ ದೇಶದೆಲ್ಲೆಡೆ ಸದ್ಯ ಸಂಚಲನ ಸೃಷ್ಟಿಸಿದೆ. ವಿವಾದದಿಂದಲೇ ಒಂದಷ್ಟು ಸುದ್ದಿಯಾಗಿರುವ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿಗೂ ಮೀರಿದ ಕಮಾಯಿ ಮಾಡಿದೆ. ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಐಸಿಸ್‌ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕುರಿತಾದ ಕಥೆಯನ್ನು ಸಿನಿಮಾ ಒಳಗೊಂಡಿದೆ. 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಮತಾಂತರಗೊಂಡು, ಭಯೋತ್ಪಾದನ ಸಂಘಟನೆಗೆ ಸೇರಿದ್ದಾರೆ ಎಂದು ಮೊದಲು ಚಿತ್ರತಂಡ ಟೀಸರ್‌ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಅದು 3 ಭಾರತೀಯ ಮಹಿಳೆಯರು ಎಂಬುದಾಗಿ ಬದಲಾವಣೆ ಮಾಡಿತ್ತು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

suddiyaana