ದಾಖಲೆ ಬರೆದ ʼದಿ ಕೇರಳ ಸ್ಟೋರಿʼ – 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

ದಾಖಲೆ ಬರೆದ ʼದಿ ಕೇರಳ ಸ್ಟೋರಿʼ – 2023ರಲ್ಲಿ ಅತ್ಯಧಿಕ ಗಳಿಸಿದ 2ನೇ ಹಿಂದಿ ಸಿನಿಮಾ!

ವಿವಾದಗಳಿಂದಲೇ ಸುದ್ದಿಯಾಗಿದ್ದ ʼದಿ ಕೇರಳ ಸ್ಟೋರಿʼ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ. ಇದೀಗ ಚಿತ್ರತಂಡಕ್ಕೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ದಿ ಕೇರಳ ಸ್ಟೋರಿ ಸಿನಿಮಾ ರಣಬೀರ್ ಕಪೂರ್ ಅವರ ಲೇಟೆಸ್ಟ್ ರಿಲೀಸ್ ತು ಜೂಟಿ ಮೇ ಮಕ್ಕರ್ ಹಾಗೂ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಕೂಡಾ ಬೀಟ್ ಮಾಡಿದ್ದು, 2023ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಎರಡನೇ ಹಿಂದಿ ಸಿನಿಮಾ ಆಗಿ ಹೊರಹೊಮ್ಮಿದೆ.

ಇದನ್ನೂ ಓದಿ: 13 ದಿನ ಕಳೆದರೂ ʼದಿ ಕೇರಳ ಸ್ಟೋರಿʼ ಅಬ್ಬರ ನಿಂತಿಲ್ಲ! –  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತಾ?

ಸಿನಿಮಾ ರಿಲೀಸ್‌ ಆಗಿ 14 ದಿನ ಕಳೆದಿದೆ. ಆದರೂ ಕೂಡ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಇದುವರೆಗೂ ಈ ಚಿತ್ರ 165 ಕೋಟಿ ರೂಪಾಯಿ ಗಳಿಸಿದ್ದು ಇದು ಉಳಿದ ಎರಡು ಲೇಟೆಸ್ಟ್ ರಿಲೀಸ್ ಹಿಂದಿ ಸಿನಿಮಾಗಳ ಕಲೆಕ್ಷನ್​ಗಿಂತ ಹೆಚ್ಚಾಗಿದೆ. ಶಾರುಖ್ ಅವರ ಪಠಾಣ್ ಸಿನಿಮಾ 2023 ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ. ಇದು ಮೊದಲನೇ ಸ್ಥಾನದಲ್ಲಿದ್ದರೆ ದಿ ಕೇರಳ ಸ್ಟೋರಿ ಎರಡನೇ ಸ್ಥಾನದಲ್ಲಿದೆ.

ತರಣ್ ಆದರ್ಶ್ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಲೇಟೆಸ್ಟ್ ಅಪ್ಡೇಟ್​ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್​ನಲ್ಲಿ ಮತ್ತೊಂದು ಸಿನಿಮಾ ದಾಖಲೆಯ ವೇಗದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ಎಂದು ಹೇಳಿದ್ದಾರೆ.

ಮೇ 5ರಂದು ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗಿದೆ. ಸುದಿಪ್ತೋ ಸೆನ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್‌, ಟ್ರೈಲರ್‌ ಬಿಡುಗಡೆಯಾದಾಗಿನಿಂದಲೂ ಕೂಡ ಈ ಸಿನಿಮಾ ರಿಲೀಸ್‌ ಮಾಡಬಾರದು ಎಂದು ಕೇರಳ ಕಾಂಗ್ರೆಸ್‌ ಸೇರಿದಂತೆ ಅನೇಕ ಸಂಘಟನೆಗಳು ಒತ್ತಾಯಿಸಿದ್ದವು. ಅಷ್ಟೇ ಅಲ್ಲದೇ ಈ ಚಿತ್ರದ ವಿರುದ್ಧ ಅನೇಕ ಆರೋಪಗಳು ಕೂಡ ಕೇಳಿಬಂದಿದ್ದವು. ಇವೆಲ್ಲಾ ಆರೋಪ, ವಿವಾದಗಳ ನಡುವೆ ಕೂಡ ಚಿತ್ರ ಬಾಕ್ಸ್‌ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ.

suddiyaana