13 ದಿನ ಕಳೆದರೂ ʼದಿ ಕೇರಳ ಸ್ಟೋರಿʼ ಅಬ್ಬರ ನಿಂತಿಲ್ಲ! –  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತಾ?

13 ದಿನ ಕಳೆದರೂ ʼದಿ ಕೇರಳ ಸ್ಟೋರಿʼ ಅಬ್ಬರ ನಿಂತಿಲ್ಲ! –  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು ಗೊತ್ತಾ?

ʼದಿ ಕೇರಳ ಸ್ಟೋರಿʼ ಬಿಡುಗಡೆಯಾಗಿ 13 ದಿನ ಕಳೆದಿದ್ದರೂ ಕೂಡ  ಸಿನಿಮಾದ ಅಬ್ಬರ ನಿಂತಿಲ್ಲ. . ದೇಶದ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ.

ಟೀಸರ್​ ಬಿಡುಗಡೆ ಆದಾಗಲೇ ಈ ಸಿನಿಮಾ ಭಾರಿ ವಿವಾದ ಎಬ್ಬಿಸಿತ್ತು. ಸಿನಿಮಾ ಬಿಡುಗಡೆ ಬಳಿಕವೂ ಚಿತ್ರ ಪ್ರದರ್ಶನ ತಡೆ ನೀಡಬೇಕೆಂದು ಅನೇಕರ ಕೂಗಾಗಿತ್ತು. ಅಷ್ಟೇ ಅಲ್ಲದೇ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಏನೇ ಆದರೂ ಈ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆಗೆ ತೊಂದರೆ ಆಗಿಲ್ಲ. ಈಗ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್ 156 ಕೋಟಿ ರೂಪಾಯಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ.

ಇದನ್ನೂ ಓದಿ: ಕರ್ನಾಟಕದಲ್ಲೂ ಬ್ಯಾನ್‌ ಆಗುತ್ತಾ ʼದಿ ಕೇರಳ ಸ್ಟೋರಿʼ ?

ಈ ಚಿತ್ರವನ್ನು ನಿರ್ದೇಶಕ ಸುದೀಪ್ತೋ ಸೇನ್​ ಅವರು ನಿರ್ದೇಶನ ಮಾಡಿದ್ದು,  ಮುಖ್ಯಭೂಮಿಕೆಯಲ್ಲಿ ನಟಿ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರ 156 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ನಲ್ಲಿ ಗಳಿಸಿದ್ದು, ಈ ಚಿತ್ರದ ಮುಂದಿರುವ ಟಾರ್ಗೆಟ್​ 200 ಕೋಟಿ ರೂಪಾಯಿ! ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲೇ ಈ ಚಿತ್ರ ದ್ವಿಶತಕ ಬಾರಿಸಲಿದೆ.

ಈ ಸಿನಿಮಾದ ಸೀಕ್ವೆಲ್​ ಬಗ್ಗೆ ಮತ್ತೊಂದು ಸುದ್ದಿ ಕೇಳಿಬಂದಿದೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೇನ್​ವಾಶ್​ ಬಗ್ಗೆ ತೋರಿಸಲಾಗಿದೆ. ಆದರೆ ಹುಡುಗರ ಬ್ರೇನ್​ವಾಶ್​​ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್​ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಹುಡುಗರನ್ನು ಬ್ರೇನ್​ವಾಶ್​ ಮಾಡಿದ್ದರ ಕುರಿತು ಸೀಕ್ವೆಲ್​ ಮಾಡುವಂತೆ ಅವರಿಗೆ ಆಫರ್​ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

suddiyaana