‘ದಿ ಕೇರಳ ಸ್ಟೋರಿ’ 3 ದಿನದಲ್ಲಿ ಬಾಚಿದ್ದೆಷ್ಟು ಕೋಟಿ ರೂಪಾಯಿ? – ಸಿನಿಮಾ ಮೇಲೆ ಮತ್ತೊಂದು ಗಂಭೀರ ಆರೋಪ!

 ‘ದಿ ಕೇರಳ ಸ್ಟೋರಿ’ 3 ದಿನದಲ್ಲಿ ಬಾಚಿದ್ದೆಷ್ಟು ಕೋಟಿ ರೂಪಾಯಿ? – ಸಿನಿಮಾ ಮೇಲೆ ಮತ್ತೊಂದು ಗಂಭೀರ ಆರೋಪ!

ಇಸ್ಲಾಂ ಮತಾಂತರ ಕುರಿತ ಕಥಾಹಂದರದ ‘ದಿ ಕೇರಳ ಸ್ಟೋರಿ’ ಚಿತ್ರ ಭಾರಿ ವಿರೋಧಗಳ ನಡುವೆಯೂ ರಿಲೀಸ್ ಆಗಿದೆ. ಕೇರಳ ಹಾಗೂ ತಮಿಳು ನಾಡಿನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗದೇ ಇದ್ದರೂ ಕೂಡ, ಇತರ ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚುನಾವಣಾ ಪ್ರಚಾರ, ಐಪಿಎಲ್ ಹಾವಳಿ ಮಧ್ಯೆ ಕೂಡ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಕೇವಲ ಮೂರು ದಿನದಲ್ಲಿ 35. 25 ಕೋಟಿ ರೂಪಾಯಿ ಬಾಚಿಕೊಂಡಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾದ ದಿನ ಪ್ರೇಕ್ಷಕರಿಂದ ಅಷ್ಟೇನೂ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ ಶನಿವಾರ ಹಾಗೂ ಭಾನುವಾರದಿಂದ ದೇಶದ ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಶುಕ್ರವಾರ (ಮೇ 5) ರಂದು 8. 3 ಕೋಟಿ ರೂಪಾಯಿ, ಶನಿವಾರ 11.22 ಕೋಟಿ ರೂಪಾಯಿ ಹಾಗೂ ಮೂರನೇ ದಿನ 16 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಮೂರು ದಿನದ ಒಟ್ಟು ಆದಾಯ 35. 25 ಕೋಟಿ ರೂಪಾಯಿ ಎಂದು ಬಾಲಿವುಡ್ ಸಿನಿಮಾ ಲೆಕ್ಕಿಗ ತರುಣ್ ಆದರ್ಶ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮಗಳ ಸಿನಿಮಾದಲ್ಲಿ ಮೊಹಿದ್ದೀನ್ ಭಾಯ್ ಆಗಿ ಕಾಣಿಸಿಕೊಂಡ ರಜನಿಕಾಂತ್ – ತಲೈವಾ ಫ್ಯಾನ್ಸ್ ಸಿಟ್ಟಾಗಿದ್ದೇಕೆ?

ಇನ್ನು ಈ ಸಿನಿಮಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಚಿತ್ರದ ಟೀಸರ್‌ ಬಿಡುಗಡೆಯಾದ ನಂತರ ದಕ್ಷಿಣ ರಾಜ್ಯದಿಂದ 32 ಸಾವಿರ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಜೊತೆಗೆ ಇಸ್ಲಾಮಿಕ್‌ ಸ್ಟೇಟ್ಸ್‌ನಿಂದ ಭಯೋತ್ಪಾದಕ ಸಂಘಟನೆಗಳಿಗೆ ಮಹಿಳೆಯರನ್ನ ನೇಮಕ ಮಾಡಿಕೊಳ್ಳಲಾಗಿದೆ ಎಂದು ಚಲನಚಿತ್ರ ನಿರ್ಮಾಪಕರೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸಿನಿಮಾ ಬಿಡುಗಡೆಗೊಂಡ ನಂತರ ಈ ಚಿತ್ರವು ಕೇರಳದಲ್ಲಿ ಧಾರ್ಮಿಕ ಉಪದೇಶಗಳನ್ನ ಕೇಂದ್ರೀಕರಿಸಿದ್ದು, ಹಿಂದೂ ಮತ್ತು ಕ್ರಿಶ್ಚಿಯನ್‌ ಮಹಿಳೆಯರನ್ನ ತೀವ್ರಗಾಮಿಗೊಳಿಸಲು ಇಸ್ಲಾಂ ಧರ್ಮಗುರುಗಳು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯರನ್ನ ಇಸ್ಲಾಂಗೆ ಮತಾಂತರಿಸಿ ಅಫ್ಘಾನಿಸ್ತಾನ, ಯೆಮೆನ್ ಮತ್ತು ಸಿರಿಯಾದಂತಹ ದೇಶಗಳಿಗೆ ಕಳುಹಿಸಲಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎನ್ನಲಾಗುತ್ತಿದೆ.

ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

suddiyaana