ರಾಜ್ಯದ ರೈತರ ಹಿತಾಸಕ್ತಿ ಮೊದಲೋ..? ರಾಜಕೀಯದ ಹಿತಾಸಕ್ತಿ ಮೊದಲೋ..? – ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ರಾಜ್ಯದ ರೈತರ ಹಿತಾಸಕ್ತಿ ಮೊದಲೋ..? ರಾಜಕೀಯದ ಹಿತಾಸಕ್ತಿ ಮೊದಲೋ..? – ರಾಜ್ಯ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

ಬೆಂಗಳೂರು: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ತಮಿಳುನಾಡಿಗೆ 10 ಟಿಎಂಸಿ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಡಿಸಿದೆ. ರಾಜ್ಯದ ರೈತರ ಹಿತಾಸಕ್ತಿ ಮೊದಲೋ..? ಅಥವಾ ರಾಜಕೀಯದ ಹಿತಾಸಕ್ತಿ ಮೊದಲೋ..? ಉತ್ತರಿಸಿ ಎಂದು ಕಾಂಗ್ರೆಸ್‌ಗೆ ಬಿಜೆಪಿ ಕೇಳಿದೆ.

ಇದನ್ನೂ ಓದಿ: ಇನ್ನೂ ಬಗೆಹರಿಯದ ತಾಂತ್ರಿಕ ದೋಷ – 14 ಲಕ್ಷಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ ಕುಟುಂಬಗಳಿಗೆ ಪಾವತಿಯಾಗಿಲ್ಲ ಅನ್ನಭಾಗ್ಯದ ಹಣ

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಕಾವೇರಿ ಕೊಳ್ಳದ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ  ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ಮೂಲಕ ರೈತರಿಗೆ ಅನ್ಯಾಯವೆಸಗುತ್ತಿದೆ. ರೈತರು ತಮಗಾದ ಅನ್ಯಾಯದ ಬಗ್ಗೆ ಬೀದಿಗಿಳಿದು ಹೋರಾಟ ನಡೆಸಿದರೆ, ಅದಕ್ಕೆ ರಾಜಕೀಯ ಬಣ್ಣದ ಲೇಪನವನ್ನು ಕಾಂಗ್ರೆಸ್‌ನ ಸಚಿವರುಗಳು ಹಚ್ಚುತ್ತಿದ್ದಾರೆ ಎಂದು ಕಿಡಿಕಾರಿದೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕದ ಹಿತ ಕಾಯಲು ಆಡಳಿತ ನಡೆಸುತ್ತಿದೆಯೋ ಅಥವಾ ತಮಿಳುನಾಡಿನ ಹಿತ ಕಾಯಲು ಆಡಳಿತ ನಡೆಸುತ್ತಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ಸಿಗರೇ, ರೈತರ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯುವ ನಿಮ್ಮ ದುಷ್ಟ ಬುದ್ದಿಗೆ ನಮ್ಮ ಧಿಕ್ಕಾರ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

suddiyaana