ಪ್ರಿವೆಡ್ಡಿಂಗ್ ಶೂಟ್ ವೇಳೆ ಆನೆ ಮೇಲಿಂದ ಆಯತಪ್ಪಿ ಬಿದ್ದ ಮಾವುತ – ಎದ್ನೋ ಬಿದ್ನೋ ಅಂತಾ ಓಡಿದ ಜೋಡಿ!

ಪ್ರಿವೆಡ್ಡಿಂಗ್ ಶೂಟ್ ವೇಳೆ ಆನೆ ಮೇಲಿಂದ ಆಯತಪ್ಪಿ ಬಿದ್ದ ಮಾವುತ – ಎದ್ನೋ ಬಿದ್ನೋ ಅಂತಾ ಓಡಿದ ಜೋಡಿ!

ಮದುವೆ ಎಂದಾಗ ಇತ್ತೀಚಿನ ದಿನಗಳಲ್ಲಿ ಪ್ರಿವೆಡ್ಡಿಂಗ್ ಶೂಟ್​ ಸರ್ವೇ ಸಾಮಾನ್ಯವಾಗಿದೆ. ಈಗಿನ ಕಾಲದಲ್ಲಿ ಪ್ರಿವೆಡ್ಡಿಂಗ್ ಶೂಟ್‌ ಇಲ್ಲ ಅಂದ್ರೆ ಮದುವೆ, ಮದುವೆನೇ ಅಲ್ಲಾ ಅನ್ನೋ ತರ ಜನ ಆಡ್ಕೊಳ್ತಾರೆ. ಹೀಗಾಗಿ. ಒಬ್ಬೊಬ್ಬರು ಒಂದೊಂದು ಥೀಮ್‌ ಇಟ್ಟುಕೊಂಡು ಪ್ರಿವೆಡ್ಡಿಂಗ್ ಶೂಟ್‌ ಮಾಡಿಸಿಕೊಳ್ಳುತ್ತಾರೆ. ಕೆಲವರಂತೂ ತಾವು ತುಂಬಾ ವಿಭಿನ್ನವಾಗಿ ಪ್ರಿವೆಡ್ಡಿಂಗ್ ಶೂಟ್‌ ಮಾಡಿಸಿಕೊಳ್ಳಬೇಕು ಅಂತಾ ಅಂದುಕೊಳ್ಳುತ್ತಾರೆ. ಇದೀಗ ಇಲ್ಲೊಂದು ಜೋಡಿ ಆನೆಯೊಂದಿಗೆ ಪ್ರಿವೆಡ್ಡಿಂಗ್ ಶೂಟ್‌ ಮಾಡಿಸಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಮಾವುತ ಆಯತಪ್ಪಿ ಆನೆ ಮೇಲಿಂದ ಬಿದ್ದಿದ್ದು, ಗಾಬರಿಯಿಂದ ಈ ಜೋಡಿ ಅಲ್ಲಿಂದ ಓಡಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ನೀಲ್ ಸೃಷ್ಟಿಸಿದ ಸಲಾರ್ ಪ್ರಪಂಚ ಹೇಗಿದೆ? – ಧೂಳೆಬ್ಬಿಸಿದ ಪ್ರಭಾಸ್ ಸಿನಿಮಾದ ಟ್ರೈಲರ್

ಹೌದು, ಈ ಘಟನೆ ಶಿವಮೊಗ್ಗ ತಾಲೂಕಿನ ಸಕ್ರೆಬೈಲ್ ಆನೆ ಬಿಡಾರದಲ್ಲಿ ನಡೆದಿದೆ. ಶನಿವಾರ ಯುವಕ, ಯುವತಿ ಪ್ರಿವೆಡ್ಡಿಂಗ್ ಶೂಟ್‌ ಮಾಡಿಸಲು ಸಕ್ರೆಬೈಲ್ ಆನೆ ಬಿಡಾರಕ್ಕೆ ಬಂದಿದ್ದರು. ಕುಂತಿ ಎಂಬ ಆನೆ ಬಳಿ ಈ ಜೋಡಿ ಪ್ರಿವೆಡ್ಡಿಂಗ್ ಶೂಟ್‌ ಮಾಡುದ್ದರು. ವೇಳೆ ಮಾವುತ ಶಂಷುದ್ದೀನ್ ಆನೆ ಮೇಲೆ ಕುಳಿತಿದ್ದರು. ಕುಂತಿ ಜನ್ಮ ನೀಡಿದ್ದ ಆನೆ ಮರಿ ಅಲ್ಲೇ ನಿಂತಿತ್ತು. ಇದಕ್ಕಿದ್ದಂತೆ ಮರಿ ಆನೆ ತಾಯಿಯತ್ತ ಓಡಿ ಬಂದಿದೆ. ಈ ವೇಳೆ ಕುಂತಿ ಆನೆ ವಿಚಲಿತಗೊಂಡಿದ್ದು, ಮಾವುತ ಶಂಷುದ್ದೀನ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಮಾವುತ ಕೆಳಕ್ಕೆ ಬಿಳುತ್ತಿದ್ದಂತೆ ಫೋಟೊ ಶೂಟಿಂಗ್‌ನಲ್ಲಿದ್ದ ಯುವಕ ಯುವತಿ ಗಾಬರಿಯಿಂದ ಓಡಿಹೋಗಿದ್ದಾರೆ.

ಈ ಘಟನೆಯಿಂದ ಆನೆ ಬಿಡಾರದಲ್ಲಿ ಕೆಲವೊತ್ತು ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಗಾಯಾಳು ಶಂಷುದ್ದೀನ್  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

Shwetha M