ಬೆಂಕಿಯ ಜ್ವಾಲೆಯಲ್ಲಿ ಸುಟ್ಟುಕರಕಲಾದ 200 ಕೋಳಿಗಳು, 100 ಕುರಿಗಳು!

ಬೆಂಕಿಯ ಜ್ವಾಲೆಯಲ್ಲಿ ಸುಟ್ಟುಕರಕಲಾದ 200 ಕೋಳಿಗಳು, 100 ಕುರಿಗಳು!

ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಸುಮಾರು 200 ಕೋಳಿ, 100 ಕುರಿ, 6 ಹಸುಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ತುಮಕೂರಿನ ಚಿಕ್ಕನಾಯಕನಹಳ್ಳಿಯ  ಹಂದನಕೆರೆಯಲ್ಲಿ ಸೋಮವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಸುಮಾರು 7:30ರ ವೇಳೆಗೆ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವ್ಯಾಪಿಸಿದ ಬೆಂಕಿಯಿಂದ ಸಾಕು ಪ್ರಾಣಿಗಳು ಸಾವಿಗೀಡಾಗಿವೆ. ಹಸು, ಕುರಿ ಹಾಗೂ ಕೋಳಿಗಳು ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾಗಿವೆ. ಘಟನೆಯಿಂದ ಆಘಾತಗೊಂಡ ರೈತ ಚೇತನ್ ಕುಮಾರ್ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ – ನಟ ದರ್ಶನ್‌ಗೆ ಬಿಗ್‌ ರಿಲೀಫ್‌!

ಬೆಂಕಿ ಅವಘಡದಿಂದಾಗಿ ಕೊಟ್ಟಿಗೆ ಸಂಪೂರ್ಣ ನಾಶವಾಗಿದೆ. ಅಗ್ನಿ ಅವಘಡದಿಂದಾಗಿ 30 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆ ಸಂಭವಿಸಿ 12 ಗಂಟೆಗಳಾದರೂ ಯಾವ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

Shwetha M