ಏಕದಿನ ವಿಶ್ವಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್ – ಎಲ್ಲೆಲ್ಲಿ ಪಂದ್ಯ ನಡೆಯುತ್ತೆ?

ಏಕದಿನ ವಿಶ್ವಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್ – ಎಲ್ಲೆಲ್ಲಿ ಪಂದ್ಯ ನಡೆಯುತ್ತೆ?

ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 5 ರಿಂದ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು ನವೆಂಬರ್ 19ಕ್ಕೆ ಅಂತ್ಯಗೊಳ್ಳಲಿದೆ.

ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೊಲ್ಕತ್ತಾ, ಲಕ್ನೋ, ಇಂದೋರ್ ರಾಜ್ಕೋಟ್ ಮತ್ತು ಮುಂಬೈನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಇನ್ನು ಫೈನಲ್ ಪಂದ್ಯ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: 4 ನಿಮಿಷದಲ್ಲಿ ಒಂದು ಮೈಲಿ ಓಡಿ ದಾಖಲೆ ನಿರ್ಮಿಸಿದ 9 ತಿಂಗಳ ಗರ್ಭಿಣಿ!

46 ದಿನಗಳ ಕಾಲ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಒಟ್ಟು 48 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇನ್ನು ತವರು ನೆಲದಲ್ಲಿ ವಿಶ್ವಕಪ್ ನಡೀತಿರೋದ್ರಿಂದ ಟೀಂ ಇಂಡಿಯಾದ ಮೇಲೆ ಭಾರಿ ನಿರೀಕ್ಷೆ ಇದೆ. ಈ ಹಿಂದೆ 2011 ಧೋನಿ ನೇತೃತ್ವದಲ್ಲಿ ಭಾರತ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಸಾಧನೆಯನ್ನ ರೋಹಿತ್ & ಟೀಂ ಮರುಕಳಿಸಲಿ ಅನ್ನೋದೆ ಅಭಿಮಾನಿಗಳ ಆಶಯ.

suddiyaana