ಗಂಡನ ಜೊತೆ ಜಗಳ ಮಾಡಿಕೊಂಡು ಸಾಯಲು ಹೊರಟ ಪತ್ನಿ! – ತಮಾಷೆ ಮಾಡ್ತಿದ್ದಾಳೆ ಎಂದು ವಿಡಿಯೋ ಮಾಡಿದ ಪತಿರಾಯ!

ಗಂಡ ಹೆಂಡತಿ ಮಧ್ಯೆ ಜಗಳ ನಡೆಯೋದು ಕಾಮನ್. ಒಮ್ಮೆ ಕೋಪ ಮಾಡಿಕೊಂಡು ಆಮೇಲೆ ಸರಿಯಾಗುತ್ತಾರೆ. ಆದ್ರೀಗ ಇಲ್ಲೊಂದು ಕಡೆ ಗಂಡ-ಹೆಂಡತಿ ಮಾಡಿಕೊಂಡಿದ್ದಾರೆ. ಬಳಿಕ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಆಕೆ ತಮಾಷೆ ಮಾಡಿಕೊಳ್ಳುತ್ತಿದ್ದಾಳೆ ಅಂದುಕೊಂಡು ಗಂಡ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಇದನ್ನೂ ಓದಿ: ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರು! – ಬಿಡದಿ ರೆಸಾರ್ಟ್‌ನಿಂದ ಮೈಸೂರು ಪ್ರವಾಸಕ್ಕೆ ತೆರಳಿದ ಒಡಿಶಾ ಕೈ ಶಾಸಕರು
ಈ ಘಟನೆ ಆಂಧ್ರಪ್ರದೇಶ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ನಡೆದಿದೆ. ನೇಣಿಗೆ ಶರಣಾದ ಮಹಿಳೆಯನ್ನು ಕೃಷ್ಣವೇಣಿ ಎಂದು ಗುರುತಿಸಲಾಗಿದೆ. ಶ್ರೀನಿವಾಸ್ ಬಂಧಿತ ಆರೋಪಿ.
ಏನಿದು ಘಟನೆ?
ಗಂಡ ಹೆಂಡತಿ ಮಧ್ಯೆ ಜಗಳ ನಡೆದಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಳೆ. ಆದ್ರೆ ಇದನ್ನ ಗಂಡ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಆಕೆ ತಮಾಷೆ ಮಾಡುತ್ತಿದ್ದಾಳೆ ಎಂದು ಅಂದುಕೊಂಡು ಕಾಪಾಡದೇ ತನ್ನ ಮೊಬೈಲ್‍ನಲ್ಲಿ ವೀಡಿಯೋ ಸೆರೆಹಿಡಿದಿದ್ದಾನೆ. ನೀನು ಹಾಗೆ ಕುಣಿಕೆ ಕಟ್ಟಬಾರದು. ಅದನ್ನು ಹೀಗೆ ಮಾಡಬೇಕು ಎಂದು ಅವಳಿಗೆ ಸೂಚನೆ ನೀಡಿದ್ದ ಎಂದು ತಿಳಿದು ಬಂದಿದೆ. ಸದ್ಯ ಪತ್ನಿ ಕೃಷ್ಣವೇಣಿ ಮೃತಪಟ್ಟಿದ್ದು, ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನೋಡಿರಿ

