ಫ್ಯಾಷನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ!
ಇದು ಫ್ಯಾಷನ್ ಜಗತ್ತು. ಫ್ಯಾಷನ್ ಲೋಕದಲ್ಲಿ ಇಂದು ಇದ್ದ ಟ್ರೆಂಡ್ ನಾಳೆ ಇರಲ್ಲ, ನಾಳೆ ಇದ್ದಿದ್ದು ಮುಂದಿನ ದಿನ ಇರಲ್ಲ. ಹೀಗೆ ಬದಲಾಗುತ್ತಿರುವ ಜನರ ರುಚಿಗೆ, ಫ್ಯಾಷನ್ ಸೆನ್ಸ್‌ಗೆ ಈ ಸ್ಟೈಲ್ ಸ್ಟೇಟ್‌ಮೆಂಟ್ ಅನ್ನೋದು ಬದಲಾಗುತ್ತಲೇ ಇರುತ್ತದೆ. ಬಟ್ಟೆ, ಆಭರಣಗಳ ಟ್ರೆಂಡ್ ಸಹ ಬದಲಾಗುತ್ತಿದೆ. ಹೀಗಾಗಿಯೇ ಮಹಿಳೆಯರು ಸದಾ ಹೊಸತನವನ್ನು ಬಯಸುತ್ತಿದ್ದಾರೆ. ತಾವು ಧರಿಸಿರುವ ಬಟ್ಟೆಗೆ ಮ್ಯಾಚ್ ಆಗುವಂತೆ ಕಿವಿಯೋಲೆ, ಬಳೆಯನ್ನು ಧರಿಸುತ್ತಾರೆ. ಇಲ್ಲೊಬ್ಬಳು ಮಹಿಳೆ ಫ್ಯಾಷನ್ ಬಳೆಯನ್ನು ತೊಟ್ಟಿದ್ದಕ್ಕೆ ಆಕೆಯ ಪತಿ ಹಾಗೂ ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಘಟನೆ ನವಿಮುಂಬೈನಲ್ಲಿ ನಡೆದಿದೆ. ಮಹಿಳೆಯೊಬ್ಬಳು ಫ್ಯಾಷನ್ ಬಳೆಯನ್ನು ತೊಟ್ಟಿದ್ದಕ್ಕೆ ಆಕೆಯ ಪತಿ ಹಾಗೂ ಅತ್ತೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪತಿ ಹಾಗೂ ಆತನ ಇಬ್ಬರು ಸಂಬಂಧಿಕರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾಳೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಈ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಫ್ಯಾಶನ್ ಬಳೆಯನ್ನು ತೊಟ್ಟಿದ್ದಕ್ಕೆ ಪತಿ 30 ವರ್ಷದ ಪ್ರದೀಪ್ ಅರ್ಕಾಡೆಯು ಪತ್ನಿಗೆ ಬೆಲ್ಟ್ ನಲ್ಲಿ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾನೆ. ನವೆಂಬರ್ 13 ರಂದು 50 ವರ್ಷದ ಅತ್ತೆ ಮಹಿಳೆಯ ಕೂದಲನ್ನು ಎಳೆದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಪತಿ ಕೂಡ ಬೆಲ್ಟ್ ನಿಂದ ಥಳಿಸಿದ್ದಾನೆ. ಅಲ್ಲದೆ ಥಳಿಸುವ ಮುನ್ನ ಅತ್ತೆ ನೆಲಕ್ಕೆ ತಳ್ಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ನಂತರ ಮಹಿಳೆ ಪುಣೆಯಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿ ದೂರು ದಾಖಲಿಸಿದ್ದಾಳೆ. ನಂತರ ಪ್ರಕರಣವನ್ನು ನವಿ ಮುಂಬೈಗೆ ತನಿಖೆಗಾಗಿ ವರ್ಗಾಯಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.