ಬಸ್ ಕೆಳಗೆ ಬಿದ್ದ ಅಜ್ಜ ಸೇಫ್ ಆಗಿದ್ದು ಹೇಗೆ? – ಅಪಘಾತದ ಭಯಾನಕ ದೃಶ್ಯ ಫುಲ್ ವೈರಲ್

ಬಸ್ ಕೆಳಗೆ ಬಿದ್ದ ಅಜ್ಜ ಸೇಫ್ ಆಗಿದ್ದು ಹೇಗೆ? – ಅಪಘಾತದ ಭಯಾನಕ ದೃಶ್ಯ ಫುಲ್ ವೈರಲ್

ಮುಂಬೈ: ತಮ್ಮ ಪಾಡಿಗೆ ರಸ್ತೆ ದಾಟುತ್ತಿದ್ದಾಗ ಸಡನ್ ಆಗಿಯೇ ವೃದ್ಧರೊಬ್ಬರು ಬಸ್ ಅಡಿ ಬಿದ್ದಿದ್ದಾರೆ. ಚಾಲಕನಿಗೆ ಸಡನ್ ಆಗಿ ಬಸ್ ನಿಲ್ಲಿಸಲು ಕೂಡಾ ಸಾಧ್ಯವಾಗಿರಲಿಲ್ಲ. ಬಸ್ ಮುಂದಕ್ಕೆ ಚಲಿಸಿಯೇ ಬಿಟ್ಟಿದೆ. ಪಾಪದ ವೃದ್ಧ ಬಸ್ ಅಡಿ ಬಿದ್ದೂ ಆಗಿದೆ. ಮುಂದೆ ನಡೆದಿದ್ದು ಮಾತ್ರ ಯಾರೂ ಊಹಿಸಲಾಗದ ಸನ್ನಿವೇಶ. ಇಂಥಾದ್ದೊಂದು ಘಟನೆ ನಡೆದಿದ್ದು ಮುಂಬೈನ ಪೂವೈ ಪ್ರದೇಶದಲ್ಲಿ.

ಇದನ್ನೂ ಓದಿ:  ಮಹಿಳೆ ಮತ್ತು ಪುರುಷ ಪದಕ್ಕೆ ಇಂಗ್ಲೀಷ್‌ಲ್ಲಿ ಹೊಸ ವಿವರಣೆ..! – ಈ ವ್ಯಾಖ್ಯಾನದ ಬಗ್ಗೆ ನಡೀತಿದೆ ಬಿಸಿ ಬಿಸಿ ಚರ್ಚೆ

ಮುಂಬೈನ ಪೊವೈ ಪ್ರದೇಶದಲ್ಲಿ ನಡೆದಿರೋ ಈ ಘಟನೆ ನೋಡಿದ್ರೆ ನಿಜಕ್ಕೂ ಬೆಚ್ಚಿಬೀಳುವುದು ಖಂಡಿತ.  ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೃದ್ಧ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಅನ್ನೋದೇ ಸಮಾಧಾನದ ವಿಚಾರ. ಕುರ್ತಾ ಪೈಜಾಮಾ ಧರಿಸಿದ್ದ ವ್ಯಕ್ತಿ ರಸ್ತೆ ದಾಟುತ್ತಿರುವಾಗ ಬಸ್ ಬಂದು ಡಿಕ್ಕಿ ಹೊಡೆದಿದೆ. ಆಗ ವೃದ್ಧ ಕೆಳಗೆ ಬೀಳುತ್ತಾರೆ. ಬಸ್ ಮುಂದಕ್ಕೆ ಚಲಿಸಿಯೂ ಆಗಿತ್ತು. ಸ್ವಲ್ಪ ಮುಂದೆ ಬಂದು ಬಸ್ ನಿಲ್ಲಿಸಿದ ಚಾಲಕ ಇಳಿದುಬರುತ್ತಾನೆ. ಆಗ ಎಲ್ಲರೂ ಬಳಿ ಬಂದು ಸ್ವಲ್ಪ ಮುಂದಕ್ಕೆ ಬಸ್ ತಿರುಗಿಸುವಂತೆ ಹೇಳುತ್ತಾರೆ. ಹಾಗೆ ಮಾಡಿದಾಗ ಬಸ್‌ನಡಿ ಬಿದ್ದಿದ್ದ ವೃದ್ಧ ಕೂಡಾ ಆರಾಮಾಗಿಯೇ ಎದ್ದು ಬರುತ್ತಾರೆ. ಇವರನ್ನ ನೋಡಿ ಚಾಲಕನಿಗೆ ಹೋದ ಜೀವ ಬಂದಂತಾಗಿದೆ. ಜೊತೆಗೆ ಭಯಾನಕ ಘಟನೆ ನೋಡಿ ಬೆಚ್ಚಿ ಬಿದ್ದಿದ್ದ ಅಲ್ಲಿನ ಜನ ಕೂಡಾ ನಿರಾಳರಾಗಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

suddiyaana