ಮಗುವನ್ನು ನುಂಗಿ ಹೊರಗೆ ಉಗುಳಿದ ಹಿಪ್ಪೋ..! – ಕಂದ ಬದುಕಿದ್ದೇ ದೊಡ್ಡ ಪವಾಡ..!
ಹಿಪ್ಪೋ ಹೊಟ್ಟೆ ಒಳಗಡೆಯಿಂದ ಮೂರು ನಿಮಿಷ ಇದ್ದ ಪುಟ್ಟ ಕಂದ..!

ಮಗುವನ್ನು ನುಂಗಿ ಹೊರಗೆ ಉಗುಳಿದ ಹಿಪ್ಪೋ..! – ಕಂದ ಬದುಕಿದ್ದೇ ದೊಡ್ಡ ಪವಾಡ..!ಹಿಪ್ಪೋ ಹೊಟ್ಟೆ ಒಳಗಡೆಯಿಂದ ಮೂರು ನಿಮಿಷ ಇದ್ದ ಪುಟ್ಟ ಕಂದ..!

ಉಗಾಂಡ : ಕೆರೆಯ ಬಳಿ ಆಟವಾಡುತ್ತಿದ್ದ ಪುಟ್ಟ ಕಂದನನ್ನು ಹಿಪ್ಪೋ ನುಂಗಿತ್ತು. ಆದರೆ ಕಂದನ ಆಯಸ್ಸು ಗಟ್ಟಿಯಾಗಿತ್ತು. ಮಗುವನ್ನು ನುಂಗಿದ ಹಿಪ್ಪೋ ಮೂರು ನಿಮಿಷದಲ್ಲೇ ಉಗುಳಿದೆ. ಹಿಪ್ಪೋ ಹೊಟ್ಟೆಯಲ್ಲಿ ಕೆಲಕ್ಷಣಗಳ ಕಾಲ ಇದ್ದ ಮಗು ಜೀವಂತವಾಗಿ ಹೊರಬಂದಿದೆ. ಇಂಥಾದ್ದೊಂದು ಭಯಾನಕ ಘಟನೆ ನಡೆದಿದ್ದು ಉಗಾಂಡದಲ್ಲಿ.

ಇದನ್ನೂ ಓದಿ :  ಬಸ್ ಕೆಳಗೆ ಬಿದ್ದ ಅಜ್ಜ ಸೇಫ್ ಆಗಿದ್ದು ಹೇಗೆ? – ಅಪಘಾತದ ಭಯಾನಕ ದೃಶ್ಯ ಫುಲ್ ವೈರಲ್

ಉಗಾಂಡದ ಎಡ್ವರ್ಡ್ ಲೇಕ್ ಮೊದಲೇ ದೊಡ್ಡ ಕೆರೆ. ಅದರಲ್ಲಿ ಹಿಪ್ಪೋಗಳು ವಾಸವಾಗಿದ್ದವು. ಇದೇ ಕೆರೆ ಸಮೀಪ ಕೆಲವು ಮನೆಗಳಿದ್ದವು. ಪೌಲ್ ಇಗಾ ಅನ್ನೋ 2 ವರ್ಷದ  ಪುಟ್ಟ ಕಂದ, ಕೆರೆ ಸಮೀಪವೇ ಆಟವಾಡುತ್ತಿದ್ದ.  ಪೋಷಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಕೆರೆಯೊಳಗಿದ್ದ ಹಿಪ್ಪೋ ಕಣ್ಣು ಮಾತ್ರ ಕಂದನ ಮೇಲೆಯೇ ಇತ್ತು. ಸ್ವಲ್ಪ ಹೊತ್ತು ಹಿಪ್ಪೋ ಗುರಿಯಿಟ್ಟು ಕಾಯತೊಡಗಿತ್ತು. ಮಗು ಬಿಟ್ಟು ಕೆರೆಯ ಅಕ್ಕಪಕ್ಕ ಯಾರೂ ಇಲ್ಲದಿರುವುದು ನೋಡಿ ದೈತ್ಯಗಾತ್ರದ ಹಿಪ್ಪೋ ಬಾಲಕನ ಎಳೆದೊಯ್ದು ನುಂಗಿಬಿಟ್ಟಿದೆ. ಮಗುವಿನ ಅದೃಷ್ಟವೋ ಏನೋ. ಹಿಪ್ಪೋ ಕೆರೆಯಿಂದ ದಡಕ್ಕೆ ಬಂದಿರೋದನ್ನು ನೋಡಿ ಪೋಷಕರು ಓಡೋಡಿ ಬಂದಿದ್ದಾರೆ. ಅಷ್ಟರಲ್ಲೇ ಹಿಪ್ಪೋ ಮಗುವನ್ನು ತಲೆಭಾಗದಿಂದ ನುಂಗಿತ್ತು. ಕಾಲು ಮಾತ್ರ ಕಾಣಿಸುತ್ತಿತ್ತು. ಪೋಷಕರ ಚೀರಾಟ ಕೇಳಿ ಸ್ಥಳೀಯರು ಓಡೋಡಿ ಬಂದಿದ್ದಾರೆ. ಆಗ ಅಲ್ಲಿದ್ದ ಸ್ಥಳೀಯ ಕ್ರಿಸ್ಪಸ್ ಬಗೋಂಜಾ ಎನ್ನುವವರು ನೇರವಾಗಿ ಹಿಪ್ಪೋಗೆ ಕಲ್ಲು ಎಸೆದಿದ್ದಾರೆ. ಕಿರುಚಾಟ, ಕಲ್ಲು ತೂರಾಟದಿಂದ ಗಾಬರಿಗೊಂಡ ಹಿಪ್ಪೋ, ಬಾಲಕನನ್ನು ಹಾಗೇ ಜೀವಂತವಾಗಿ ಹೊರಕ್ಕೆ ಉಗುಳಿದೆ. 3 ನಿಮಿಷಕ್ಕೂ ಹೆಚ್ಚು ಕಾಲ ಹಿಪ್ಪೋ ಬಾಯಿಯೊಳಗಿದ್ದ ಬಾಲಕ ಮರಳಿ ಜೀವಂತವಾಗಿ ಹೊರಬಂದಿದ್ದಾನೆ. ಹಿಪ್ಪೋ ಒಂದು ಬಾರಿ ಗುರಿ ಇಟ್ಟರೆ ಬಳಿಕ ಉಗುಳುವ ಪ್ರಶ್ನೆ ಇಲ್ಲ. ಆದರೆ ಇಲ್ಲೇ ಬಾಲಕನ ಅದೃಷ್ಟ ಚೆನ್ನಾಗಿತ್ತು. ಜೀವಂತವಾಗಿ ಹೊರಬಂದಿದ್ದಾನೆ. ಬಳಿಕ ಹಿಪ್ಪೋ ನೇರಾಗಿ ಕೆರೆಯೊಳಕ್ಕೆ ಹೋಗಿದೆ.

suddiyaana