ಎರಡನೇ ತರಗತಿಯ ಪುಟಾಣಿ ಮೇಲೆ ಆ್ಯಸಿಡ್ ಎರಚಿದ ಮುಖ್ಯ ಶಿಕ್ಷಕ – ಇದೇನಾ ಗುರುಗಳೇ ನೀವು ಕಲಿಸುವ ಶಿಸ್ತಿನ ಪಾಠ?

ಎರಡನೇ ತರಗತಿಯ ಪುಟಾಣಿ ಮೇಲೆ ಆ್ಯಸಿಡ್ ಎರಚಿದ ಮುಖ್ಯ ಶಿಕ್ಷಕ – ಇದೇನಾ ಗುರುಗಳೇ ನೀವು ಕಲಿಸುವ ಶಿಸ್ತಿನ ಪಾಠ?

ಶಿಕ್ಷಕರನ್ನು ಗುರುಗಳು ಎಂದು ಗೌರವದಿಂದ ಕರೆಯುವ ಸಮಾಜ ನಮ್ಮದು. ಗುರುಗಳು ಎಂದರೆ ಮಕ್ಕಳಿಗೂ ಅಷ್ಟೇ ಗೌರವ, ಪ್ರೀತಿ, ಆದರ. ಮನೆಯಲ್ಲಿ ಹೆತ್ತವರ ಮಾತು ಕೇಳುತ್ತಾರೋ ಬಿಡುತ್ತಾರೋ.. ಆದರೆ, ಶಾಲೆಗೆ ಬಂದ ಮೇಲೆ ಶಿಕ್ಷಕರು ಹೇಳಿದ್ದೇ ವೇದವಾಕ್ಯ. ಶಿಕ್ಷಕರನ್ನು ಅಷ್ಟೊಂದು ಪ್ರೀತಿ ಮತ್ತು ಗೌರವದಿಂದ ನೋಡುತ್ತಾರೆ ವಿದ್ಯಾರ್ಥಿಗಳು. ಆದರೆ, ಇಲ್ಲೊಬ್ಬ ಶಿಕ್ಷಕ ಅದರಲ್ಲೂ ಮುಖ್ಯ ಶಿಕ್ಷಕರೊಬ್ಬರು ತನ್ನ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚುವ ಮೂಲಕ ಶಿಕ್ಷಕ ವೃತ್ತಿಗೆ ಅಪಮಾನ ಮಾಡಿದ್ದಾರೆ.

ಇದನ್ನೂ ಓದಿ: ವರ್ತೂರು ಸಂತೋಷ್ ಅರೆಸ್ಟ್.. ಸೆಲೆಬ್ರಿಟಿಗಳಿಗೆ ಬರೀ ನೋಟಿಸ್ – ಹುಲಿ ಉಗುರಿನ ಕೇಸ್​ ನಲ್ಲಿ ರೈತನಿಗೊಂದು ನ್ಯಾಯ, ಸ್ಟಾರ್ಸ್ ಗೊಂದು ನ್ಯಾಯ!

ದಸರಾ ರಜೆ ಮುಗಿಸಿ ಶಾಲೆಗೆ ಹೊರಡುವ ಸಂಭ್ರಮ ಮಕ್ಕಳಿಗೆ. ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ಮುದ್ದು ಕಂದಮ್ಮಳಿಗೂ ಅದೇ ಸಂಭ್ರಮ. ದಸರಾ ರಜೆ ಮುಗಿಸಿದ ಎರಡನೇ ತರಗತಿಯ ಪುಟಾಣಿ ಸಿಂಚನಾ ಅ. 25ರಂದು ಶಾಲೆಗೆ ಬಂದಿದ್ದಳು. 8 ವರ್ಷದ ಪುಟಾಣಿ ಈಕೆ. ಆವತ್ತು ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಸೂಚಿಸಿದ್ದರಂತೆ. ಅದೇ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಶೌಚಾಲಯದ ಬಳಿ ಬಂದಿದ್ದಾಳೆ. ಆಗ ಕೋಪಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಇರಿಸಿದ್ದ ಆಸಿಡ್ ನ್ನೇ ತೆಗೆದುಕೊಂಡು ಎರಚಿದ್ದಾರೆ. ಪರಿಣಾಮ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಬಾಲಕಿಯ ತಾಯಿ ಪವಿತ್ರಾ ಆಗ್ರಹಿಸಿದ್ದರು. ಅದರಂತೆಯೇ ಈಗ ಮುಖ್ಯಶಿಕ್ಷಕ ರಂಗಸ್ವಾಮಿ ಅಮಾನತುಗೊಳಿಸಿ DDPI ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ. ಇನ್ನು ಗಾಯಾಳು ಸಿಂಚನಾಳನ್ನು ಮುಖ್ಯ ಶಿಕ್ಷಕ ರಂಗಸ್ವಾಮಿಯೇ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಪ್ರಕರಣದ ಬಗ್ಗೆ ಕೇಳಿದ್ರೆ ದಸರಾ ರಜೆಯ ಬಳಿಕ ಇಂದು ಶಾಲೆ ಪುನರಾರಂಭಗೊಂಡಿದೆ. ಹೀಗಾಗಿ, ಕೆಲ ಹಿರಿಯ ವಿದ್ಯಾರ್ಥಿಗಳೊಂದಿಗೆ ಶಾಲೆ ಸ್ವಚ್ಚಗೊಳಿಸಲಾಯಿತು. ಶೌಚಾಲಯ ಸ್ವಚ್ಛತೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆಗ ಸಿಂಚನಾ ಅಲ್ಲಿಗೆ ಬಂದಿದ್ದಳು. ನೀನು ಹೋಗಮ್ಮ ಎನ್ನುವಷ್ಟರಲ್ಲಿ ಪಾಕೆಟ್ ಕಟ್ ಮಾಡಿದ ಪುಡಿ ಸಿಂಚನಾಳ ಮೇಲೆ ಬಿದ್ದಿತು. ಯಾವುದೇ ದುರುದ್ದೇಶದಿಂದ ಎರಚಿಲ್ಲ ಎಂದು ಮುಖ್ಯಶಿಕ್ಷಕ ರಂಗಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಮುಖ್ಯ ಶಿಕ್ಷಕ ಅಮಾನತುಗೊಂಡಿದ್ದಾರೆ.

Sulekha