ಹೆಚ್ಚಾಯ್ತು H3N2 ವೈರಸ್ ಹಾವಳಿ – ಲಕ್ಷಣಗಳೇನು ಮತ್ತು ಮುನ್ನೆಚ್ಚರಿಕಾ ಕ್ರಮಗಳೇನು?

ಹೆಚ್ಚಾಯ್ತು H3N2 ವೈರಸ್ ಹಾವಳಿ – ಲಕ್ಷಣಗಳೇನು ಮತ್ತು ಮುನ್ನೆಚ್ಚರಿಕಾ ಕ್ರಮಗಳೇನು?

ಬೆಂಗಳೂರು: ಮೂರು ವರ್ಷಗಳ ನರಕಯಾತನೆ ಬಳಿಕ ಕೊರೊನಾ ಮುಕ್ತಿ ಪಡೆದು ಜೀವನ ಸಹಜಸ್ಥಿತಿಗೆ ಬಂದು ಒಂದು ವರ್ಷವಾಗಿದ್ಯಷ್ಟೇ. ಈಗ ಇನ್​ಪ್ಲುಯೆನ್ಸಾ ಹೆಸರಿನ H3N2 ವೈರಸ್ ಕಾಡೋಕೆ ಶುರು ಮಾಡಿದೆ.

ದೇಶಾದ್ಯಂತ ಹಲವು ಮಂದಿಗೆ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಇದುವರೆಗೆ 26 H3N2 ಪ್ರಕರಣಗಳು ಪತ್ತೆಯಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಫುಲ್ ಅಲರ್ಟ್ ಆಗಿದ್ದು, ಎಚ್ಚರಿಕೆ ವಹಿಸುವಂತೆ ಜನಸಾಮಾನ್ಯರಿಗೆ ಸೂಚಿಸಿದೆ.

ಇದನ್ನೂ ಓದಿ: H3N2 ವೈರಸ್​ ಗೆ ಮಕ್ಕಳು, ವೃದ್ಧರು, ಗರ್ಭಿಣಿಯರೇ ಟಾರ್ಗೆಟ್ – ಸಚಿವ ಸುಧಾಕರ್ ಕೊಟ್ಟ ಸಲಹೆಗಳೇನು..?

ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸೋಂಕು ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಸುಧಾಕರ್, ಇವತ್ತಿನಿಂದ್ಲೇ ರಾಜ್ಯದ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಗಳಲ್ಲಿ ಎಲ್ಲಾ ಸಿಬ್ಬಂದಿ ಮಾಸ್ಕ್ ಹಾಕಿಕೊಳ್ಳಬೇಕು. ಬೇಸಿಗೆ ಹಿನ್ನೆಲೆ ಬಿಸಿಗಾಳಿ ಇರೋದ್ರಿಂದ ಅನಗತ್ಯವಾಗಿ ಓಡಾಡುವುದನ್ನ ಜನ ಕಡಿಮೆ ಮಾಡಬೇಕು ಅಂತಾ ಹೇಳಿದ್ದಾರೆ.

ಈ H3N2 ವೈರಸ್​ನ ಲಕ್ಷಣಗಳೇನು? ಯಾರಿಗೆ ಎಷ್ಟು ಅಪಾಯಕಾರಿಯಾಗಿದೆ? ನೀವು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು ಅನ್ನೋ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಯಾರನ್ನು ಕಾಡುತ್ತೆ H3N2 ಸೋಂಕು?

  • 5 ವರ್ಷದೊಳಗಿನ ಮಕ್ಕಳಿಗೆ ಅಪಾಯಕಾರಿಯಾಗುವ ಸಾಧ್ಯತೆ
  • 2 ವರ್ಷದೊಳಗಿನ ಮಕ್ಕಳು ಬೇಗನೆ ವೈರಸ್​ಗೆ ತುತ್ತಾಗಬಹುದು
  • 65 ವರ್ಷ ಮೇಲ್ಪಟ್ಟವರಿಗೂ ಆರೋಗ್ಯ ಸಮಸ್ಯೆ ಉಂಟಾಗಬಹುದು
  • ಅಸ್ತಮಾ, ಕಿಡ್ನಿ, ಕರುಳು ಸಮಸ್ಯೆ ಇರುವವರಿಗೆ ಅಪಾಯ ಸಾಧ್ಯತೆ
  • ಸ್ಟ್ರೋಕ್​ಗೊಳಗಾದವರಿಗೆ, ಗರ್ಭಿಣಿಯರಿಗೆ ಸಮಸ್ಯೆಯಾಗಬಹುದು
  • ಸೋಂಕಿಗೊಳಗಾದವರು ದೀರ್ಘಕಾಲದ ಶೀತ, ಜ್ವರದಿಂದ ಬಳಲುತ್ತಾರೆ
  • ಉಸಿರಾಟದ ಸಮಸ್ಯೆ, ವಾಂತಿ, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತೆ

ಸೋಂಕು ಬರದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು  

  • ಪದೇ ಪದೆ ಸೋಪ್​ ಬಳಸಿ ಕೈ ತೊಳೆದುಕೊಳ್ಳಿ
  • ಮಾಸ್ಕ್ ಧರಿಸಿ, ಜನನಿಬಿಡ ಪ್ರದೇಶಗಳಿಂದ ದೂರವಿರಿ
  • ಸೀನುವಾಗ, ಕೆಮ್ಮುವಾಗ ಬಾಯಿ ಕವರ್​ ಮಾಡಿಕೊಳ್ಳಿ
  • ನೀರು, ಜ್ಯೂಸ್ ಸೇರಿದಂತೆ ದ್ರವಾಹಾರವನ್ನು ಹೆಚ್ಚು ಬಳಸಿ
  • ವೈದ್ಯರು ಸಲಹೆ ನೀಡಿದ ಔಷಧವನ್ನು ಮಾತ್ರ ಪಡೆಯಿರಿ
  • ಯಾರಿಗೂ ಶೇಕ್​ಹ್ಯಾಂಡ್ ಮಾಡಬೇಡಿ, ಉಗುಳಬೇಡಿ
  • ಹೋಲಿ ಹಬ್ಬದಿಂದ ದೂರವಿರೋದು ಒಳ್ಳೆಯದು

suddiyaana