ಫ್ರೀ ಭಾಗ್ಯ ಕೊಟ್ಟು ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ – ಯಾವ್ಯಾವ ಬ್ರ್ಯಾಂಡ್ ನ ಮದ್ಯದ ಬೆಲೆ ಏರಿಕೆ..?

ಫ್ರೀ ಭಾಗ್ಯ ಕೊಟ್ಟು ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ – ಯಾವ್ಯಾವ ಬ್ರ್ಯಾಂಡ್ ನ ಮದ್ಯದ ಬೆಲೆ ಏರಿಕೆ..?

ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದೊಂದೇ ಯೋಜನೆಗಳನ್ನ ಜಾರಿ ಮಾಡುತ್ತಿದೆ. ಜೂನ್ 11ರಂದು ಮಹತ್ವದ ‘ಶಕ್ತಿ ಯೋಜನೆ’ನೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಹಾಗೇ 200 ಯುನಿಟ್ ಉಚಿತ ವಿದ್ಯುತ್, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿಗೂ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಈ ಗ್ಯಾರಂಟಿಗಳ ನಡುವೆ ಸದ್ದಿಲ್ಲದೆ ಬೆಲೆ ಏರಿಕೆ ಬರೆ ಬೀಳುತ್ತಿದೆ.

ಇದನ್ನೂ ಓದಿ : ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ – ಹಲ್ವಾ, ದೋಸೆ, ಪೂರಿಗಿಲ್ಲ ಅವಕಾಶ!

ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಫ್ರೀ ಕರೆಂಟ್ ಸಿಗುತ್ತದೆ ಎಂದು ರಾಜ್ಯದ ಜನರು ಖುಷಿಯಲ್ಲಿದ್ದಾರೆ. ಆದರೆ ಖುಷಿಯ ಬೆನ್ನಲ್ಲೇ ಕೆಲವೆಡೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಮಾಡಿ ಶಾಕ್ ನೀಡಲಾಗಿದೆ. ಕರೆಂಟ್ ಬಿಲ್ ದರ ಏರಿಕೆ ಬೆನ್ನಲ್ಲೇ ಅಬಕಾರಿ ಇಲಾಖೆಯಿಂದ (Excise Department) ಮದ್ಯ ಪ್ರಿಯರಿಗೆ ಮತ್ತೊಂದು ಶಾಕ್ ನೀಡಿದೆ. ಅಬಕಾರಿ ಇಲಾಖೆ ಸದ್ದಿಲ್ಲದೆ ಮದ್ಯ (Alcohol) ಬೆಲೆ ಏರಿಕೆ (Price Hike) ಮಾಡಿದೆ. ಸ್ಲಾಬ್‌ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‌ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್‌ಗಳ ವಿವಿಧ ಬ್ರ್ಯಾಂಡ್‌ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.

ಫ್ರೀಗಳ ಭಾಗ್ಯಗಳಿಂದ ಖುಷಿಯಲ್ಲಿದ್ದ ಎಣ್ಣೆ ಪ್ರಿಯರ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಯಾವ್ಯಾವ ಬ್ರ್ಯಾಂಡ್​ಗಳ ಬೆಲೆ ಎಷ್ಟಿಷ್ಟು ಎಷ್ಟು ಹೆಚ್ಚಳ ಮಾಡಿದೆ ಅನ್ನೋ ಮಾಹಿತಿ ಇಲ್ಲಿದೆ. 650 ಎಂಎಲ್‌ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ. ಕಿಂಗ್ ಫಿಷರ್ 650 ಎಂಎಲ್‌ಗೆ 160 ರಿಂದ 170 ರೂ. ಏರಿಕೆ. ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ. ಬಡ್ವ್ಯೇಷರ್ 200 ರಿಂದ 220 ರೂ. ಹೆಚ್ಚಳ. ಪವರ್ ಕೂಲ್ 100 ರಿಂದ 110 ರೂ. ಏರಿಕೆ. ಬಕಾರ್ಡಿ 275 ಎಂಎಲ್‌ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ ಬೀಳೋದು ಕೂಡ ಗ್ಯಾರಂಟಿಯಾಗಿದೆ.

suddiyaana