ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ – ಖಾಸಗಿ ಸಂಸ್ಥೆ ಮೂಲಕ ಸರ್ವೆಗೆ ಮುಂದಾದ ಸರ್ಕಾರ

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ – ಖಾಸಗಿ ಸಂಸ್ಥೆ ಮೂಲಕ ಸರ್ವೆಗೆ ಮುಂದಾದ ಸರ್ಕಾರ

ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಫಲಾನುಭವಿಗಳ ಪರಿಷ್ಕರಣೆ ಆಗಬೇಕು ಎಂದು ಶಾಸಕರು, ಸಚಿವರು ಒತ್ತಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ಸರ್ಕಾರ ಗ್ಯಾರಂಟಿಗಳ ಸರ್ವೆ ಸರ್ಕಾರ ಮುಂದಾಗಿದೆ. ಇದ್ಕಕಾಗಿ ಖಾಸಗಿ ಕಂಪನಿಯ ಮೊರೆ ಹೋಗಿದೆ.

ಇದನ್ನೂ ಓದಿ: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. EOS-8 ಮಿಷನ್ ಉಡಾವಣೆ ಯಶಸ್ವಿ!

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳ ಸರ್ವೆ ಮಾಡಿಸಲು ಸರ್ಕಾರ ಮುಂದಾಗಿದೆ. ಇದೀಗ ಈ ಸರ್ವೆಗೆ ಖಾಸಗಿ ಸಂಸ್ಥೆಯ ಮೊರೆ ಹೋಗಿದೆ. ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿ ತಿಂಗಳು ಒಂದರಂತೆ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಗೆ ಅನುಮತಿಯನ್ನ ಸರ್ಕಾರ ಕೊಟ್ಟಿದೆ. M/s M2M MEDIA NETWORK LLP ಸಂಸ್ಥೆಗೆ ಸರ್ವೆ ಜವಾಬ್ದಾರಿ ಸರ್ಕಾರ ನೀಡಿದೆ. ಯಾವುದೇ ಟೆಂಡರ್ ಕರೆಯದೇ ಖಾಸಗಿ ಕಂಪನಿಗೆ 4G ಅಡಿ ವಿನಾಯ್ತಿ ನೀಡಿದೆ.

ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದ್ದು, ಗ್ಯಾರಂಟಿಗಳ ಸರ್ವೆ ಬಗ್ಗೆ ಖುದ್ದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಮೂಲಕ ಕೊಟ್ಡಿದ್ದಾರೆ. ವರದಿ ಬಂದ ಕೂಡಲೇ ಗ್ಯಾರಂಟಿ ಪರಿಷ್ಕರಣೆ ಮಾಡುತ್ತಾ ಸರ್ಕಾರ ಅನ್ನೋ ಅನುಮಾನ ಮೂಡಿದೆ.

ಈಗಾಗಲೇ ಸರ್ವೆ ಕಾರ್ಯಕ್ಕೆ 4 ಇಲಾಖೆಗಳಿಂದ ಖಾಸಗಿ ಕಂಪನಿಗೆ ಹಣ ಬಿಡುಗಡೆ ಮಾಡಲಾಗಿದೆ. ಸಾರಿಗೆ ಇಲಾಖೆಯಿಂದ 17.60 ಲಕ್ಷ ರೂ., ಇಂಧನ ಇಲಾಖೆಯಿಂದ 25 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 25 ಲಕ್ಷ ರೂ., ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ 25 ಲಕ್ಷ ರೂ. ಹಣ ಖಾಸಗಿ ಕಂಪನಿಗೆ ಬಿಡುಗಡೆಯಾಗಿದೆ.

Shwetha M