ಎಣ್ಣೆ ಪ್ರಿಯರ ಕಿಕ್‌ ಇಳಿಸಿದ ಸರ್ಕಾರ – ಯಾವ್ಯಾವ ಬ್ರ್ಯಾಂಡ್‌ ದರ ಎಷ್ಟು? ಇಲ್ಲಿದೆ ಮಾಹಿತಿ..

ಎಣ್ಣೆ ಪ್ರಿಯರ ಕಿಕ್‌ ಇಳಿಸಿದ ಸರ್ಕಾರ – ಯಾವ್ಯಾವ ಬ್ರ್ಯಾಂಡ್‌ ದರ ಎಷ್ಟು? ಇಲ್ಲಿದೆ ಮಾಹಿತಿ..

ಬೆಂಗಳೂರು: ರಾಜ್ಯದ ಎಣ್ಣೆ ಪ್ರಿಯರಿಗೆ ದರ ಏರಿಕೆಯ ಬಿಸಿ ತಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಇದೀಗ ಮದ್ಯದ ದರ ಇನ್ನೊಂದು ವಾರದಲ್ಲಿ ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

ರಾಜ್ಯ ಸರ್ಕಾರ ಅಬಕಾರಿ ಸುಂಕ ಶೇ 20 ರಷ್ಟು ಹೆಚ್ಚಳ ಮಾಡುತ್ತಿದೆ. ಹೀಗಾಗಿ ಮದ್ಯದ ದರ ಮತ್ತಷ್ಟು ಹೆಚ್ಚಳವಾಗಲಿದೆ. ಇನ್ನು ಮುಂದೆ ಬ್ರಾಂಡೆಡ್ ಮದ್ಯಗಳು ದುಬಾರಿಯಾಗಲಿದೆ. ಈಗಾಗಲೇ ಹೊಸ ದರ ಪಟ್ಟಿಯನ್ನು ಅಬಕಾರಿ ಇಲಾಖೆ ಬಿಡುಗಡೆ ಮಾಡಿದೆ. ಹೀಗಾಗಿ ಇನ್ನೊಂದು ವಾರದ ಬಳಿಕ ದರ ಏರಿಕೆಯಾಗಲಿದೆ. 4-5 ದಿನ ಅಥವಾ ವಾರದಲ್ಲಿ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಸರ್ಕಾರ ಅನುಮೋದನೆ ಬಳಿಕ ಹೊಸ ದರ ಜಾರಿಗೊಳಿಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯ ಜೈನಮುನಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ – ಹಣ ವಾಪಸ್ ಕೇಳಿದ್ದಕ್ಕೆ ಆಪ್ತರಿಂದಲೇ ಮರ್ಡರ್

ರಾಜ್ಯದಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಮದ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಿಂದಲೇ ಸರ್ಕಾರಕ್ಕೆ ಆದಾಯ ಮೂಲ ಎಂದು ಪ್ರತಿಭಟನೆ ನಡೆಸಿದ್ದಾರೆ.

ಮದ್ಯದ ಹೊಸ ದರ ಪಟ್ಟಿ ಹೀಗಿದೆ..

  • ಬ್ಲಾಕ್ & ವೈಟ್: ಹಿಂದಿನ ಬೆಲೆ 2,464- ಏರಿಕೆ ಬೆಲೆ – 2,800
  • ಜಾನಿ ವಾಕರ್ ಬ್ಲಾಕ್ ಲೇಬಲ್: ಹಿಂದಿನ ಬೆಲೆ – 6,250, ಏರಿಕೆ ಬೆಲೆ – 7,150
  • ಚಿವಾಸ್ ರೀಗಲ್: ಹಿಂದಿನ ಬೆಲೆ – 6,200, ಏರಿಕೆ ಬೆಲೆ – 7,000
  • ಟೀಚರ್ಸ್: ಹಿಂದಿನ ದರ – 2,451, ಏರಿಕೆ ದರ – 2,800
  • ಬ್ಲಾಕ್ & ವೈಟ್: ಹಿಂದಿನದರ – 2,415, ಏರಿಕೆ ದರ – 2, 800
  • ರೊಮನೊವಾ ವೋಡ್ಕಾ: ಹಿಂದಿನ ಬೆಲೆ – 915, ಏರಿಕೆ ಬೆಲೆ – 1,000 100
  • ಪೈಪರ್ ವಿಸ್ಕಿ: ಹಿಂದಿನ ಬೆಲೆ – 106, ಏರಿಕೆ ಬೆಲೆ – 120

ಬಿಯರ್ ಗಳ ಮೇಲೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತಿದೆ. ತೆರಿಗೆ ಹೆಚ್ಚಳದಿಂದ ಬಿಯರ್ ಗಳೂ ದುಬಾರಿಯಾಗಲಿದ್ದು, ಕನಿಷ್ಠ 20 ರೂ. ಹೆಚ್ಚಳ ಮಾಡಲಾಗುತ್ತಿದೆ. ಕಿಂಗ್‍ಫಿಷರ್ ಬೆಲೆ 170 ಇದ್ದಿದು 190 ರೂ., ಬಡ್ ವೈಸರ್ ಬೆಲೆ 220 ಇದ್ದಿದ್ದು 240 ರೂ., ಟ್ಯೂಬರ್ಗ್ ಬೆಲೆ 170 ಇದ್ದಿದ್ದು 190 ರೂ. ಹಾಗೂ ಕಾರ್ಲ್ಸ್ ಬರ್ಗ್ ಬೆಲೆ 220 ಇದ್ದಿದ್ದು 250 ರೂ. ಆಗಲಿದೆ.‌

suddiyaana