ರೀಲ್ಸ್ ಮಾಡೋರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ! – ಇನ್ಮುಂದೆ ಈ ಸ್ಥಳಗಳಲ್ಲಿ ರೀಲ್ಸ್ ಮಾಡುವಂತಿಲ್ಲ!

ರೀಲ್ಸ್ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಇನ್ಮುಂದೆ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮಾಡುವಂತಿಲ್ಲ. ಒಂದ್ವೇಳೆ ಫೋಟೋ, ವಿಡಿಯೋ ಶೂಟ್ ಮಾಡ್ಬೇಕು ಅಂದ್ರೆ ಶುಲ್ಕ ಪಾವತಿ ಮಾಡುವುದು ಕಡ್ಡಾಯ ಎಂದು ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೆ ಹೋದವರು ದೃಷ್ಠಿ ಕಳೆದುಕೊಂಡ್ರು! – ಅಯ್ಯೋ.. 9 ಮಂದಿ ಬಾಳಲ್ಲಿ ಕತ್ತಲು!
ದೇವಸ್ಥಾನಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮಾಡುವುದು ಅಥವಾ ವಿಡಿಯೋ ನಿಷೇಧವಿದೆ. ಆದ್ರೂ ದೇವಸ್ಥಾನಗಳಲ್ಲಿ ರೀಲ್ಸ್ , ವೀಡಿಯೋಗ್ರಾಫ್ ಹಾವಳಿ ಹೆಚ್ಚಾಗಿದ್ದು, ಈ ಕುರಿತಂತೆ ಸರ್ಕಾರ ಮಹತ್ವದ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಇದರಂತೆ ಇನ್ಮುಂದೆ ದೇವಸ್ಥಾನಗಳಲ್ಲಿ ಶೂಟಿಂಗ್ ಗೆ ನಿರ್ಬಂಧ ಮಾಡಿ, ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ವಿಡಿಯೋ ಮಾಡಲು ಅವಕಾಶ ನೀಡಿ ಅದಕ್ಕೆ ಶುಲ್ಕ ಕಡ್ಡಾಯ ಮಾಡುವ ಹೊಸ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಮುಜರಾಯಿ ಸಚಿವ ರಾಮಲಿಂಗರೆಡ್ಡಿ, ಇನ್ಮುಂದೆ ಮುಜರಾಯಿ ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ ಶುಲ್ಕ ಕಡ್ಡಾಯ ಮಾಡಲು ಮುಜರಾಯಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಎ ಮತ್ತು ಬಿ ಮುಜರಾಯಿ ದೇವಾಲಯಗಳಲ್ಲಿ ನಿಯಮ ಅನ್ವಯ ಆಗಲಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ರೆಕಾರ್ಡಿಂಗ್ ಮಾಡಲು ಹಣ ಪಾವತಿಸಲು ಅನುಮತಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನಿಗದಿತ ಹಣ ಪಾವತಿಸಿ ಶೂಟಿಂಗ್ ಗೆ 2003, 2013ರಲ್ಲಿ ನಿಯಮ ಜಾರಿಯಾಗಿತ್ತು. ಆದರೆ ಇತ್ತೀಚೆಗೆ ದೇಸ್ಥಾನದಲ್ಲಿ ರೀಲ್ಸ್, ಯೂಟ್ಯೂಬ್ ಚಾನೆಲ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ ಧಕ್ಕೆ ಉಂಟಾಗುತ್ತಿದೆ. ಹೀಗಾಗಿ ಮತ್ತೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಜರಾಯಿ ಇಲಾಖೆ ಸೂಚನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ನಮ್ಮ ಉದ್ದೇಶ ಇರೋದು ಹಣ ಪಡೆದುಕೊಳ್ಳುವುದು ಅಲ್ಲ. ಯಾರಾರೋ ಬಂದು ಏನೆನೋ ವಿಡಿಯೋ ಮಾಡೋದು ತಪ್ಪು. ಆದ್ದರಿಂದ ದೇವಸ್ಥಾನದಲ್ಲಿ ಶೂಟಿಂಗ್ ಮಾಡೋದಾಗ ಅನುಮತಿ ಪಡೆಯೋದು ಕಡ್ಡಾಯ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ನಿಯಮ ಮಾಡಲಾಗಿದೆ. ನಾವು ಈಗ ಅದನ್ನು ಮತ್ತಷ್ಟು ಬೀಗಿ ಮಾಡ್ತಿದ್ದೇವೆ. ದೇವಾಲಯಗಳ ಬಗ್ಗೆ ಸಂದೇಶ ಉದ್ದೇಶ ಮುಖ್ಯವಾಗಿರಬೇಕು ಅನ್ನೋದು ಕಮಿಷನರ್ ಅವರ ಉದ್ದೇಶವಾಗಿದೆ. ಈ ಹಿಂದೆ ಎರಡು ಬಾರಿ ಸರ್ಕ್ಯೂಲರ್ ಮಾಡಿದ್ದೇವೆ, ಈಗ ಜಾರಿ ಮಾಡಲು ಕಟ್ಟುನಿಟ್ಟು ಮಾಡಿದ್ದೇವೆ ಅಷ್ಟೇ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಇನ್ನು, ದೇವಾಲಯಗಳ ಸರ್ವೆ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಒಟ್ಟು ನಮ್ಮ ಇಲಾಖೆಗೆ ಸೇರಿದ 40 ಸಾವಿರ ಪ್ರಾಪರ್ಟಿ ಇದೆ. ಇದರಲ್ಲಿ 36 ಸಾವಿರ ಎಕರೆ ಜಮೀನು ಸೇರಿದೆ. ನಗರ ಪ್ರದೇಶದಲ್ಲಿ 4 ಸಾವಿರ ಪ್ರಾಪರ್ಟಿ ಇದೆ. ಇದರಲ್ಲಿ 17 ಸಾವಿರ ಎಕರೆ ದೇವಸ್ಥಾನ ಹೆಸರಿಗೆ ಬಂದಿದೆ. ಶೇಕಡಾ 50 ರಷ್ಟು ಬಂದಿದೆ. 2023ಕ್ಕೂ ಮುಂಚೆ ಕೇವಲ ಮೂರುವರೆ ಸಾವಿರ ಪ್ರಾಪರ್ಟಿ ಮಾತ್ರ ಇತ್ತು. ಮುಂದಿನ ಒಂದು ವರ್ಷದಲ್ಲಿ ದೇವಸ್ಥಾನ ಎಲ್ಲಾ ಜಾಗ ದೇವಸ್ತಾನಕ್ಕೆ ಬರುತ್ತದೆ ಎಂದು ಹೇಳಿದರು.

ನೋಡಿರಿ

