ತನ್ನ ಮಗಳನ್ನು ಮದುವೆಯಾದ್ರೆ 2 ಕೋಟಿ ಮೌಲ್ಯದ ಬಂಗಲೆ, 50 ಲಕ್ಷ ಎಫ್‌.ಡಿ! –ಬಿಗ್‌ ಆಫರ್‌ ನೀಡಿದ ವ್ಯಕ್ತಿ!

ತನ್ನ ಮಗಳನ್ನು ಮದುವೆಯಾದ್ರೆ 2 ಕೋಟಿ ಮೌಲ್ಯದ ಬಂಗಲೆ, 50 ಲಕ್ಷ ಎಫ್‌.ಡಿ! –ಬಿಗ್‌ ಆಫರ್‌ ನೀಡಿದ ವ್ಯಕ್ತಿ!

ಮನೆಯಲ್ಲಿ ಮಕ್ಕಳಿದ್ರೆ ಅವರ ಭವಿಷ್ಯಕ್ಕಾಗಿ ಒಂದಷ್ಟು ಹಣವನ್ನು ಕೂಡಿಡಲಾಗುತ್ತೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆಗೆ ಬೇಕಾಗುತ್ತೆ ಅಂತಾ ಉಳಿತಾಯ ಮಾಡಲಾಗುತ್ತೆ. ಆದ್ರೆ ಇಲ್ಲೊಂದು ಕಡೆ ಹೆಣ್ಣು ಮಗುವಿನ ತಂದೆ ತಾಯಿ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿ ಬೆಲೆಯ ಬಂಗಲೆ, 50 ಲಕ್ಷ ಎಫ್‌.ಡಿ ಮಾಡಿಸಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಮತಎಣಿಕೆಗೆ ಕೌಂಟ್ ಡೌನ್ – ಎಷ್ಟು ಗಂಟೆಗೆ ಮತ ಎಣಿಕೆ ಆರಂಭ?

ಹೌದು, ಅಚ್ಚರಿಯಾದ್ರೂ ಸತ್ಯ. ಹೆತ್ತ ಮಗಳಿಗೆ 24-25 ವರ್ಷವಾದರೆ ಸಾಕು ಹೆತ್ತವರಿಗೆ ಮಗಳ ಮದುವೆಯ ಚಿಂತೆ ಕಾಡಲಾರಂಭಿಸುತ್ತೆ. ಪ್ರತಿಯೊಬ್ಬರೂ ತಮ್ಮ ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಅದರಲ್ಲೂ ಹುಡುಗನಿಗೆ ಕೈತುಂಬಾ ಸಂಬಳ ಸಿಗುವ ನೌಕರಿಯಿದ್ದರೆ ಸಿಗುವ ಖುಷಿಯೇ ಬೇರೆ. ಯಾಕಂದ್ರೆ ಲೈಫ್‌ ಸೆಟಲ್‌ ಆಗಿರುತ್ತದೆ ಎಂಬ ಕಾರಣಕ್ಕೆ ಸ್ವಲ್ಪ ಶ್ರೀಮಂತ ವರನನ್ನು ಹುಡುಗಿಯ ಮನೆಯವರು ಆಯ್ಕೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಮಗಳನ್ನು ಮದುವೆಯಾಗುವ ಹುಡುಗನಿಗೆ 2 ಕೋಟಿಯ ಬಂಗಲೆಯ ಜೊತೆಗೆ 50 ಲಕ್ಷ ಎಫ್.ಡಿ ಕೂಡಾ ನೀಡುತ್ತೇನೆ ಎಂದು ಬಿಗ್‌ ಆಫರ್‌ ಒಂದನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಅಂಕಿತಾ ಪಾಟೇಲ್‌ (@ankita.patel_143) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಡಾಕ್ಟರ್‌ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ನಮ್ಮ ಕ್ಲಿನಿಕ್‌ ಮತ್ತು 50 ಲಕ್ಷ ಎಫ್.ಡಿ ಇದೆ ಅದನ್ನು ಆತನ ಹೆಸರಿಗೆ ಬರೆಯುತ್ತೇವೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 18.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ನಿಮ್ಮ ಮಗಳನ್ನು ನಾನು ಮದುವೆಯಾಗಲು ರೆಡಿ ಇದ್ದೇನೆ ಎಂದು ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಇನ್‌ಸ್ಟಾಗ್ರಾಮ್‌ ಬರಬರುತ್ತಾ ಮ್ಯಾಟ್ರಿಮೋನಿ ಸೈಟ್‌ ಆಗುತ್ತಿದೆ ಎಂದು ತಮಾಷೆ ಮಾಡಿದ್ದಾರೆ.

Shwetha M