ಗಿಲ್ಲಿ ನಟ ಕೊಟ್ಟಿದ್ದು ಒಂದು ಮುತ್ತು – ಗಿಲ್ಲಿಗೆ ಕಾವ್ಯ ಕೊಟ್ಟಿದ್ದು ಮೂರು ಮುತ್ತು..!

ಗಿಲ್ಲಿ ನಟ ಕೊಟ್ಟಿದ್ದು ಒಂದು ಮುತ್ತು – ಗಿಲ್ಲಿಗೆ ಕಾವ್ಯ ಕೊಟ್ಟಿದ್ದು ಮೂರು ಮುತ್ತು..!

ಬಿಗ್ ಬಾಸ್ ಕನ್ನಡ 12ರಲ್ಲಿ ವೀಕ್ಷಕರಿಗೆ ಇಷ್ಟ ಆಗುತ್ತಿರುವ ಜೋಡಿ ಅಂದರೆ ಗಿಲ್ಲಿ ಹಾಗೂ ಕಾವ್ಯಾ ಶೈವ. ಈ ಜೋಡಿ ಚೆನ್ನಾಗಿ ಆಡುತ್ತಿದ್ದಾರೆ. ಇದೀಗ ಗಿಲ್ಲಿ ಕಾವ್ಯಾಗೆ ಮುತ್ತು ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾವ್ಯಾ ಕೂಡಾ ಮುತ್ತನ್ನು ಸುಮ್ಮನೆ ಇಟ್ಟುಕೊಂಡಿಲ್ಲ. ಗಿಲ್ಲಿ ಕೊಟ್ಟ ಒಂದು ಕಿಸ್ ಗೆ ಮೂರು ಕಿಸ್ ಮರಳಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಗಂಟೆಗಟ್ಟಲೆ ಜಗಳ ನೋಡುವುದೇ ಬಿಗ್‌ಬಾಸ್ ಶೋ – ಹೀಗಾದರೆ ಈ ರಿಯಾಲಿಟಿ ಶೋ ನೋಡೋದು ಕಷ್ಟ ಅಂತಿದ್ದಾರೆ ವೀಕ್ಷಕರು

ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸಖತ್ ಎಂಟರ್‌ಟೈನರ್ ಎನಿಸಿರುವ ಗಿಲ್ಲಿ ಹಾಗೂ ಕಾವ್ಯಾ ಅವರ ಆಟ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಜಂಟಿಯಾಗಿದ್ದಾರೆ. ಜೊತೆಯಲ್ಲೇ ಇರುವ ಈ ಜೋಡಿ ಮತ್ತೊಂದು ರೀತಿಯಲ್ಲಿ ಮನರಂಜನೆ ನೀಡಿದ್ದಾದರೆ. ಗಿಲ್ಲಿ ನಟ ಅವರು ಕಾವ್ಯಾಗೆ ಚಿಕ್ಕದಾಗಿ ಕೈನಲ್ಲಿ ತಟ್ಟಿದ್ದಾರೆ. ಇದರಿಂದ ಹುಸಿಗೋಪ ತೋರಿಸಿದ ಕಾವ್ಯಾ ಅವರು, ಮೂರು ಏಟನ್ನು ಮರಳಿ ಕೊಟ್ಟರು. ಆ ಬಳಿಕ ತಳ್ಳಿದರು. ‘ನನಗೆ ಯಾಕೆ ಹೊಡೆದೆ? ಒಂದು ಹೊಡೆದರೆ ನಾನು ಮೂರು ಕೊಡೋದು’ ಎಂದರು ಕಾವ್ಯಾ. ‘ಒಂದು ಕೊಟ್ರೆ ಮೂರು ಕೊಡ್ತೀಯಾ’ ಎಂದಾಗಲೇ ಕಾವ್ಯಾಗೆ ಎಲ್ಲೋ ಮಿಸ್ ಹೊಡೀತಾ ಇದೆ ಎಂಬುದು ಅರ್ಥವಾಗಿ ಹೋಯಿತು. ‘ಒಂದು ಕೊಟ್ರೆ ಮೂರು ಕೊಡ್ತೀಯಾ’ ಎನ್ನುತ್ತಾ ಗಿಲ್ಲಿ ನಟ ಫ್ಲೈಯಿಂಗ್ ಕಿಸ್ ಕೊಟ್ಟರು. ಆಗ ಕಾವ್ಯಾ ‘ಫೂ.. ಫೂ..’ ಎಂದು ಮೂರು ಬಾರಿ ಹೇಳಿದರು. ಸದ್ಯ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಾ ಇದೆ.

Sulekha