ವಿಚ್ಛೇದನಕ್ಕೆ ಬಂದು ಮತ್ತೆ ಒಂದಾದ ನಾಲ್ಕು ಜೋಡಿ – ಕೋರ್ಟ್ ಆವರಣದಲ್ಲಿ ಅಪರೂಪದ ಸಮ್ಮಿಲನ..!

ವಿಚ್ಛೇದನಕ್ಕೆ ಬಂದು ಮತ್ತೆ ಒಂದಾದ ನಾಲ್ಕು ಜೋಡಿ – ಕೋರ್ಟ್ ಆವರಣದಲ್ಲಿ ಅಪರೂಪದ ಸಮ್ಮಿಲನ..!

ಜಗತ್ತಿನಲ್ಲಿ ಅತಿ ಹೆಚ್ಚಾಗಿ ಜಗಳ ಆಡೋದು ಗಂಡ ಹೆಂಡತಿಯೇ ಅನ್ನೋದು ಸರ್ವೆಯೊಂದರಲ್ಲಿ ಬೆಳಕಿಗೆ ಬಂದಿದೆ. ಆದ್ರೆ ಅಚ್ಚರಿ ಅಂದ್ರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋದು ಕೂಡ ಅದೇ ದಂಪತಿಯೇ. ಲೆಕ್ಕವಿಲ್ಲದಷ್ಟು ಸಲ ಜಗಳವಾಡಿ ಒಂದಾಗುವ ಈ ಸಂಬಂಧಕ್ಕೆ ಸರಿಸಾಟಿಯೇ ಇಲ್ಲ ಬಿಡಿ. ಕೆಲವರು ಕಿತ್ತಾಡಿಕೊಂಡು ಮತ್ತೆ ಒಂದಾದ್ರೆ ಇನ್ನೂ ಕೆಲವ್ರು ವಿಚ್ಛೇದನದವರೆಗೂ ಹೋಗುತ್ತಾರೆ. ಹೀಗೆ ಇಲ್ಲಿ ನಾಲ್ಕು ಜೋಡಿ ಡಿವೋರ್ಸ್ ಪಡೆಯೋಕೆ ಅಂತಾ ಹೋಗಿ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ – ಐಸಿಸ್ ಜತೆ ನಂಟು ಹೊಂದಿದ್ದವನ ಗುಟ್ಟು ಎಂಥಾದ್ದು..!?

ಸಣ್ಣ-ಪುಟ್ಟ ಮನಃಸ್ತಾಪಗಳನ್ನ ಮನೆಯಲ್ಲೇ ಬಗೆಹರಿಸಿಕೊಳ್ಳೋದು ಬಿಟ್ಟು ನಾಲ್ಕು ಜೋಡಿಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರು. ವಿಚ್ಚೇದನ ಕೇಳಿದ್ದ ನಾಲ್ಕು ಜೋಡಿಗಳು ಇದೀಗ ಕೋರ್ಟ್ ಆವರಣದಲ್ಲೇ ಮತ್ತೇ ಒಂದಾಗಿದ್ದಾರೆ. ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.‌

ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ‌ನಾಯಕ-ಅನಸೂಯ, ವಿರೇಶ- ಜಾನಕಮ್ಮ, ಶ್ರೀನಿವಾಸ -ತುಳಸಿದೇವಿ, ನಿಂಗಪ್ಪ-ಮಮತಾ ಗಂಗಾವತಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರು. ಸುಮಾರು ‌ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ನಾಲ್ಕು ಜೋಡಿಗಳು ಮತ್ತೇ ಒಂದಾಗಿದ್ದಾರೆ.

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರೋ ನಾಲ್ಕು ಜೋಡಿಗಳು ಕೋರ್ಟ್ ಹಾಲ್​ನಲ್ಲೇ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡ್ರು. ಸ್ವತಃ ನ್ಯಾಯಾಧೀಶರು ಮತ್ತು ವಕೀಲರು ಮುಂದೆ ನಿಂತು ಮುಂದಿನ ದಿನದಲ್ಲಿ ಯಾವುದೇ ಮನಸ್ತಾಪ ಇಲ್ಲದಂತೆ ಬದುಕಿ ಎಂದು ಒಬ್ಬರಿಗೊಬ್ಬರಿಗೆ ಸಿಹಿ ತಿನ್ನಿಸಿ ಹಾರೈಸಿದ್ರು. ಒಂದೇ ಬಾರಿಗೆ ನಾಲ್ಕು ಜೋಡಿ ಒಂದಾದ ಅಪರೂಪದ ಘಟನೆಗೆ ಗಂಗಾವತಿಯ ಒಟ್ಟು ನಾಲ್ವರು ನ್ಯಾಯಾಧೀಶರು ಮತ್ತು ವಕೀಲರು ಸಾಕ್ಷಿಯಾದರು. ನ್ಯಾಯಾಧೀಶರಾದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಜಿ.ಶಿವಳ್ಳಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಎಸ್ ಗಾಣಿಗೇರ,‌ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶ್ರೀದೇವಿ ಧರಬಾರೆ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೌರಮ್ಮ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಚ್ಚೇದನಕ್ಕೆ ಮುಂದಾಗಿದ್ದ ದಂಪತಿಗಳಿಗೆ ಬುದ್ಧಿ ಮಾತು ಹೇಳುವ ಮೂಲಕ ಶುಭ ಹಾರೈಸಿದ್ರು.

suddiyaana