ಎಣ್ಣೆ, ಕೊಳಕು ನೀರು ಬಿದ್ರೂ ರಾಮಮಂದಿರದ ನೆಲ, ಗೋಡೆ ಹಾಳಾಗಲ್ಲ! – ಇದಕ್ಕೆ ಕಾರಣ ವಿಶೇಷ ಟೆಕ್ನಾಲಜಿ!

ಎಣ್ಣೆ, ಕೊಳಕು ನೀರು ಬಿದ್ರೂ ರಾಮಮಂದಿರದ ನೆಲ, ಗೋಡೆ ಹಾಳಾಗಲ್ಲ! – ಇದಕ್ಕೆ ಕಾರಣ ವಿಶೇಷ ಟೆಕ್ನಾಲಜಿ!

ಕೋಟ್ಯಂತರ ಹಿಂದೂಗಳ ಆಶಯದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯಾ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ. 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳು ಮತ್ತು ನೆಲದ ಅಮೃತಶಿಲೆಗಳು ವರ್ಷಗಳವರೆಗೆ ಹೊಳೆಯುತ್ತಲೇ ಇರುತ್ತವೆಂತೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಆಧಾರ್ ಕಡ್ಡಾಯ, ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ!

ಮರ್ಯಾದ ಪುರುಷೋತ್ತಮನ ದರ್ಶನಕ್ಕಾಗಿ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ದೇಗುಲದ ಗೋಡೆ, ಆವರಣಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೇ ಕೈಗಳಿಂದ ಗೋಡೆಗಳನ್ನು ಸ್ಪರ್ಶಿಸಿದರೆ, ಗೋಡೆಗಳ ಬಣ್ಣವು ಕಳೆಗುಂದುವ ಅಪಾಯವಿದೆ. ಅಮೃತಶಿಲೆಯ ಮೇಲೆ ಎಣ್ಣೆ ಬೀಳುವುದರಿಂದ ನೆಲಕ್ಕೆ ಹಾನಿಯಾಗುವ ಅಪಾಯವಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅವರು ಕೊಳಕು, ಮಳೆ ನೀರು, ಎಣ್ಣೆ, ಚಹಾ ಇತ್ಯಾದಿಗಳಿಂದ ತೊಂದರೆಗೊಳಗಾಗದಂತೆ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದೆ. ಒಂದು ವಿಶೇಷ ಟೆಕ್ನಾಲಜಿಯಿಂದಾಗಿ ಅಲ್ಲಿನ ನೆಲದ ಅಮೃತಶಿಲೆಗಳು ವರ್ಷಗಳವರೆಗೆ ಹೊಳೆಯುತ್ತಲೇ ಇರುತ್ತವೆ.

ಹೌದು, ಅಯೋಧ್ಯೆ ರಾಮಮಂದಿರ ನಿರ್ಮಾಣ ಮಾಡಲು ಬಳಸಿದ ಕಲ್ಲುಗಳ ಮೇಲೆ ಸ್ಟೇನ್ ವಿರೋಧಿ ರಾಸಾಯನಿಕಗಳ ಲೇಪನ ಮಾಡಲಾಗುತ್ತಿದೆ. ಇದನ್ನು ಇಡೀ ದೇವಾಲಯದ ಗೋಡೆಗಳು, ನೆಲ, ಕೆತ್ತಿದ ಚಿಹ್ನೆಗಳು ಮತ್ತು ಪ್ರತಿಮೆಗಳ ಮೇಲೆ ಮಾಡಲಾಗುತ್ತದೆ.  ಈ ರಾಸಾಯನಿಕವನ್ನು ಲೇಪನ ಮಾಡಿರುವುದರಿಂದ ಮಳೆ ನೀರು ಗೋಡೆಗಳ ಮೇಲೆ ಬಿದ್ದರೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ಮಂದಿರ ಯಾವುದೇ ಹೊಳಪನ್ನು ಕಳೆದುಕೊಳ್ಳುವುದಿಲ್ಲ.  ಪ್ರವಾಸಿಗರು ಸಹ ತಮ್ಮ ಕೈಗಳಿಂದ ಗೋಡೆಗಳನ್ನು ಸ್ಪರ್ಶಿಸಿದರೆ, ಗೋಡೆಗಳ ಬಣ್ಣವು ಕಳೆಗುಂದುವ ಅಪಾಯವಿದೆ. ಅಮೃತಶಿಲೆಯ ಮೇಲೆ ಎಣ್ಣೆ ಬೀಳುವುದರಿಂದ ನೆಲಕ್ಕೆ ಹಾನಿಯಾಗುವ ಅಪಾಯವಿದೆ. ಇದನ್ನು ತಡೆಯಲು ಟ್ರಸ್ಟ್ ಅಕೆಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ರಾಸಾಯನಿಕವನ್ನು ಲೇಪಿಸುವ ಜವಾಬ್ದಾರಿಯನ್ನು ನೀಡಿದೆ.

ಏಳರಿಂದ ಎಂಟು ಕಾರ್ಮಿಕರು  ಮಂದಿರಕ್ಕೆ ಹೊಳಪು ತರುವ ರಾಸಾಯನಿಕವನ್ನು ಕೋಟಿಂಗ್​ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಹಾಮಸ್ತಕಾಭಿಷೇಕಕ್ಕೆ ಮುನ್ನ ದೇವಾಲಯದ ಸಂಪೂರ್ಣ ಗರ್ಭಗುಡಿಗೆ ಲೇಪಿಸುವ ಗುರಿ ಹೊಂದಲಾಗಿದೆ. ಅಕೆಮಿ ಫೆರೋಲೈಟ್ ಸ್ಟೇನ್ ಸ್ಟಾಪ್ ಲೋಟಸ್ ಮತ್ತು ಹೈಡ್ರೊ ರಿಪೆಲೆಂಟ್ ಎಂಬ ರಾಸಾಯನಿಕದ ಹೆಸರು ಎಂದು ಈ ಕೆಲಸದಲ್ಲಿ ನಿರತರಾಗಿದ್ದ ಸಂದೀಪ್ ತಿಳಿಸಿದ್ದಾರೆ. ದೇವಾಲಯದ ಬುಡದಿಂದ ಎಂಟು ಅಡಿ ಎತ್ತರದ ಮೇಲೆ ಹೈಡ್ರೋ ನಿವಾರಕವನ್ನು ಅನ್ವಯಿಸಲಾಗುತ್ತದೆ. ಇದನ್ನು ಅಮೃತಶಿಲೆಯ ನೆಲದ ಮೇಲೆ ಅನ್ವಯಿಸಲಾಗುತ್ತದೆ.

Shwetha M