ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಚಾಲಕ ರಹಿತ ಮೊದಲ ಮೆಟ್ರೋ ರೈಲು ಸಂಚಾರ ಶೀಘ್ರದಲ್ಲೇ ಆರಂಭ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಚಾಲಕ ರಹಿತ ಮೊದಲ ಮೆಟ್ರೋ ರೈಲು ಸಂಚಾರ ಶೀಘ್ರದಲ್ಲೇ ಆರಂಭ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸಲು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಲೇ ಇದ್ದಾರೆ. ಇದರ ಭಾಗವಾಗಿ ನಗರದಲ್ಲಿ ನಮ್ಮ ಮೆಟ್ರೋವನ್ನು ಸಂಚರಿಸುತ್ತಿವೆ. ಇದೀಗ ನಮ್ಮ ಮೆಟ್ರೋ ಯೋಜನೆಯನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಲಾಗುತ್ತಿದೆ. ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಚಾಲಕರಹಿತ ಮೆಟ್ರೊ  ಸಂಚರಿಸುವಂತೆ ಮಾಡಬೇಕು ಎಂದು ಬಿಎಂಆರ್‌ಸಿಎಲ್‌ ಗುರಿ ಇಟ್ಟುಕೊಂಡಿದೆ.

ಇದನ್ನೂ ಓದಿ: ಟ್ರ್ಯಾಕ್ಟರ್ ಚಾಲಕನಿಗೆ ಬಯಸದೆ ಬಂತು ‘ಲಾಟರಿ’ ಭಾಗ್ಯ – ರೇಂಜ್ ರೋವರ್ ಕಾರಿನ ಮಾಲೀಕನಾದ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಿಲ್ಲದ ಮೊದಲ ಮೆಟ್ರೋ ರೈಲು ಶೀಘ್ರದಲ್ಲೇ ತನ್ನ ಸಂಚಾರವನ್ನು ಆರಂಭಿಸಲಿದೆ. ಅದಕ್ಕೆ ಬೇಕಾದ ತಯಾರಿ ನಡೆಸುತ್ತಿದೆ. ಇದೀಗ ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ)ನ ಲೋಕೋ-ಪೈಲಟ್‌ಗಳು, ತಂತ್ರಜ್ಞರು ಮತ್ತು ಎಂಜಿನಿಯರ್‌ಗಳನ್ನು ಒಳಗೊಂಡ 21 ಮಂದಿ ಚೀನಾದ ತಾಂತ್ರಿಕ ಸಿಬ್ಬಂದಿಗಳಿಗೆ ಭಾರತಕ್ಕೆ ಭೇಟಿ ನೀಡಲು ವೀಸಾ ದೊರೆತಿದ್ದು, ಅಂದುಕೊಂಡಂತೆ ಆದರೆ, ಚಾಲಕ ರಹಿತ ಮೊದಲ ಮೆಟ್ರೋ ರೈಲು ಮುಂದಿನ ವಾರ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ ಎಂದು ಬಿಎಂಆರ್‌ಸಿಎಲ್’ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ರೈಲನ್ನು ಸಿದ್ಧಪಡಿಸಿದ್ದು, ಡಿಸೆಂಬರ್ 15ರಂದು ಈ ರೈಲು ಭಾರತಕ್ಕೆ ರವಾನೆಯಾಗಲಿದೆ. ಮೊದಲಿಗೆ ರೈಲು ಚೆನ್ನೈ ಬಂದರನ್ನು ತಲುಪಲಿದ್ದು, ಮಕರ ಸಂಕ್ರಾಂತಿಗೂ ಮೊದಲು (ಜನವರಿ 15) ಬೆಂಗಳೂರಿನ ಹೆಬ್ಬಗೋಡಿಗೆ ತಲುಪುವ ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.

ಈ ಹಿಂದೆ ಬಿಎಂಆರ್’ಸಿಎಲ್ ತಂಡ ಚೀನಾಗೆ ಭೇಟಿ ನೀಡಿತ್ತು. ಭೇಟಿ ಬೆನ್ನಲ್ಲೇ ನವೆಂಬರ್ 20ರಂದು ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಮೊದಲ ರೈಲಿನ ಪರೀಕ್ಷಾ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪರಿಣತರ ಅಗತ್ಯವಿರುತ್ತದೆ. ಉಳಿದ ರೈಲುಗಳ ನಿರ್ವಹಣೆಗೂ ಮಾರ್ಗದರ್ಶನದ ಅಗತ್ಯವಿರುತ್ತದೆ. ಇದಕ್ಕೆ ಚೀನಾದ ತಾಂತ್ರಿಕ ಸಿಬ್ಬಂದಿ ನೆರವಾಗಲಿದ್ದಾರೆಂದು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಚೀನಾದ ತಾಂತ್ರಿಕ ಸಿಬ್ಬಂದಿಯ ಮೊದಲ ಬ್ಯಾಚ್ ನಲ್ಲಿರುವ 21 ಮಂದಿಗೆ ಭಾರತಕ್ಕೆ ಭೇಟಿ ನೀಡಲು ಈಗಾಗಲೇ ವೀಸಾ ತಲುಪಿದೆ. ಮೊದಲು ಚೀನಾದ ತಾಂತ್ರಿಕ ಸಿಬ್ಬಂದಿಗಳು ಈ ರೈಲಿನಲ್ಲಿ ಸಂಚರಿಸಲಿದ್ದಾರೆ. ನಂತರ ಉಳಿದವರು ಸಂಚರಿಸಲಿದ್ದಾರೆ. ರೈಲು ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ ಹೊಂದಿರಲಿದೆ. ಅದನ್ನು ನಾವು ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋಲ್ಕತ್ತಾ ಬಳಿಯ ಉತ್ತರ ಪರಗಣದಲ್ಲಿರುವ ಟಿಟಾಗರ್‌ ರೈಲಿನ ವ್ಯಾಗನ್ ಉತ್ಪಾದನಾ ಘಟಕದಲ್ಲಿ ಸಿದ್ಧಗೊಳ್ಳುತ್ತಿರುವ ರೈಲುಗಳಿಗೂ ಚೀನಾದ ತಂತ್ರಜ್ಞರ ಅಗತ್ಯವಿದೆ. ಅಲ್ಲಿ 32 ಹೊಸ ರೈಲುಗಳ ತಯಾರಿಕೆಗೆ ಅವರ ಸಹಾಯದ ಅಗತ್ಯವಿದೆ ಎಂದು ಹೇಳಿದ್ದಾರೆ.

Shwetha M