ಮಂಚದಿಂದ ಬಿದ್ದ ಅಜ್ಜಿಯನ್ನು ಎತ್ತಲು ಬಂದ ಅಗ್ನಿಶಾಮಕ ದಳ!
ನಿದ್ರೆಯಲ್ಲಿ ಸಾಕಷ್ಟು ಜನರು ಬೆಚ್ಚಿಬೀಳುತ್ತಾರೆ. ಇನ್ನೂ ಕೆಲವರು ನಿದ್ದೆಯಲ್ಲಿ ಹೊರಳಾಡುತ್ತಾರೆ. ಈ ವೇಳೆ ಕೆಲವರು ಮಂಚದಿಂದ ಕೆಳಗೆ ಬೀಳುತ್ತಾರೆ. ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮತ್ತೆ ಮಂಚದಲ್ಲಿ ಮಲಗುತ್ತಾರೆ. ಇಲ್ಲೊಬ್ಬರು ಮಹಿಳೆ ನಿದ್ರಿಸುತ್ತಿರುವ ವೇಳೆ ಮಂಚದಿಂದ ಕೆಳಗೆ ಬಿದ್ದಿದ್ದು, ಆಕೆಯನ್ನು ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ವೃದ್ದೆಯೊಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿದ್ರಿಸುತ್ತಿರುವ ವೇಳೆ ಮಂಚದಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಕೆ ಮೇಲೆ ಏಳಲು ಪ್ರಯತ್ನಿಸಿದ್ದಾರೆ. ಮೇಲೆ ಏಳಲು ಸಾಧ್ಯವಾಗದೇ ಇದ್ದಾಗ ಕುಟುಂಬಸ್ಥರನ್ನು ಸಹಾಯಕ್ಕೆ ಕರೆದಿದ್ದಾರೆ. ಅವರು ಕೂಡ ಆಕೆಯನ್ನು ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ. ಅವರು ಕೂಡ ಈ ಪ್ರಯತ್ನದಲ್ಲಿ ವಿಫಲರಾಗಿದ್ದು, ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆಸಿ ವೃದ್ದೆಯನ್ನು ಮೇಲೆತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡನನ್ನು ಬಿಟ್ಟು ಇಬ್ಬರು ಪುರುಷರ ಜೊತೆ ಆಂಟಿಯ ತುಂಟಾಟ – ಪ್ರೇಯಸಿ ಮತ್ತು ಮಗನನ್ನೇ ಕೊಂದ ಪ್ರಿಯಕರ
ಕುಟುಂಬಸ್ಥರಿಗೆ ವೃದ್ದೆಯನ್ನು ಮೇಲೆತ್ತಲು ಸಾಧ್ಯವಾಗಿಲ್ಲವೇಕೆ?
62 ವರ್ಷದ ವೃದ್ಧೆ ಅಧಿಕ ತೂಕ ಮತ್ತು ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಕೆ ಸುಮಾರು 160 ಕೆಜಿ ಇದ್ದಾರೆ. ಆಕೆ ಅಧಿಕ ತೂಕ ಇರುವುದರಿಂದಾಗಿ ಆಕೆಯನ್ನು ಕುಟುಂಬಸ್ಥರಿಗೂ ಮೇಲೆ ಎತ್ತಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯ ಪಡೆದುಕೊಂಡಿದ್ದಾರೆ.
ಮಹಿಳೆ ಬಿದ್ದ ನಂತರ ಕುಟುಂಬಕ್ಕೆ ಮೇಲೆ ಎತ್ತುವುದು ಮಾತ್ರವಲ್ಲ. ಮಂಚಕ್ಕೆ ಬೆನ್ನನ್ನು ಒರಗಿಸಿ ಕುಳಿತುಕೊಳ್ಳಲು ಕೂಡ ಸಮಸ್ಯೆಯಾಯ್ತು. ಹೀಗಾಗಿ ಸಹಾಯಕ್ಕಾಗಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಕರೆದರು ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದ್ದಾರೆ.
ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ (ಆರ್‌ಡಿಎಂಸಿ) ತಂಡವು ಫ್ಲಾಟ್‌ಗೆ ಆಗಮಿಸಿ ಮಹಿಳೆಯನ್ನು ಮೇಲಕ್ಕೆತ್ತಿ ಹಾಸಿಗೆಯ ಮೇಲೆ ಮಲಗಿಸಿದರು. ಬಿದ್ದ ಕಾರಣ ಮಹಿಳೆಗೆ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಅನೇಕ ಕರೆಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ಇದು ವಿಚಿತ್ರವಾದ ಪ್ರಕರಣವಾಗಿತ್ತು ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.