ವೇಗವಾಗಿ ಕ್ಷೀಣಿಸುತ್ತಿದೆ ಮಂಗಳ ಗ್ರಹದಲ್ಲಿ ಹಗಲು ಹೊತ್ತಿನ ಅವಧಿ! – ನಾಸಾ ವಿಜ್ಞಾನಿಗಳು ಹೇಳಿದ್ದೇನು?  

ವೇಗವಾಗಿ ಕ್ಷೀಣಿಸುತ್ತಿದೆ ಮಂಗಳ ಗ್ರಹದಲ್ಲಿ ಹಗಲು ಹೊತ್ತಿನ ಅವಧಿ! – ನಾಸಾ ವಿಜ್ಞಾನಿಗಳು ಹೇಳಿದ್ದೇನು?  

ಚಂದ್ರನ ಬಳಿಕ ಈಗಾಗ್ಲೇ ಮಾನವನ ಚಿತ್ತ ಮಂಗಳ ಗ್ರಹದತ್ತ ನೆಟ್ಟಿದೆ. ಮಂಗಳನ ಅಂಗಳದಲ್ಲಿ ಮಾನವನಿಗೆ ಬದುಕಲು ಸಾಧ್ಯಾನಾ ಅನ್ನೋ ಬಗ್ಗೆ ಈಗಾಗ್ಲೇ ಭಾರಿ ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಮಂಗಳ ಗ್ರಹದ ಕುರಿತು ನಾಸಾ ವಿಜ್ಞಾನಿಗಳು ಮಹತ್ವದ ಸಂಗತಿಯೊಂದನ್ನ ಬಹಿರಂಗ ಪಡಿಸಿದ್ದಾರೆ.

ಮಂಗಳ ಗ್ರಹ ಭಾರಿ ವೇಗವಾಗಿ ತಿರುಗುತ್ತಿದೆಯಂತೆ. ಹೀಗಾಗಿ ಮಂಗಳ ಗ್ರಹದಲ್ಲಿ ಹಗಲು ಹೊತ್ತಿನ ಅವಧಿ ವೇಗವಾಗಿ ಕ್ಷೀಣಿಸುತ್ತಿದೆ ಅಂತಾ ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದೆ ನಾಸಾ ಮಂಗಳನ್ನಲ್ಲಿಗೆ ಕಳುಹಿಸಿದ್ದ ಲ್ಯಾಂಡರ್​​ನಿಂದಾಗಿ ಈ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ: ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?

ಮಂಗಳದ ಪರಿಭ್ರಮಣೆಯು ವರ್ಷಕ್ಕೆ ಸುಮಾರು 4 ಮಿಲಿಯಾರ್ಕ್ ಸೆಕೆಂಡ್‌ಗಳಷ್ಟು ವೇಗವನ್ನು ಪಡೆಯುತ್ತಿದೆ ಎಂದು ಸಂಶೋಧನೆಯಿಂದ ಗೊತ್ತಾಗಿದೆ. ಆದ್ರೆ ಮಂಗಳ ಗ್ರಹ ವೇಗವಾಗಿ ತಿರುಗೋಕೆ ನಿಖರ ಕಾರಣ ಏನು ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಮಂಗಳಗ್ರಹದ ಮೇಲೆ ಮಂಜುಗಡ್ಡೆಯ ಶೇಖರಣೆ ಅಥವಾ ಹಿಮದ ನಂತರದ ಮರುಕಳಿಸುವಿಕೆಯಿಂದ ಉಂಟಾಗಬಹದು. ಅಲ್ಲಿ ಸೃಷ್ಟಿಯಾಗುವ ಹಿಮದಿಂದ ಹೂಳಲ್ಪಟ್ಟ ನಂತರ ಭೂಪ್ರದೇಶಗಳು ಏರುತ್ತವೆ. ಗ್ರಹದ ದ್ರವ್ಯರಾಶಿಯಲ್ಲಿನ ಈ ಪಲ್ಲಟದಿಂದ ಮಂಗಳಗ್ರಹ ವೇಗವಾಗಿ ತಿರುಗುತ್ತಿದೆ ಅಂತಾ ವಿಜ್ಞಾನಿಗಳು ಹೇಳಿದ್ದಾರೆ.

suddiyaana