ಮಗಳ ಮದುವೆಗೆ ಕೇವಲ 2 ಗಂಟೆ ಇರುವಾಗಲೇ ಕುಸಿದು ಬಿದ್ದ ಅಪ್ಪ – ಆಮೇಲೆ ನಡೆದಿದ್ದು ಘೋರ ದುರಂತ!

ಮಗಳ ಮದುವೆಗೆ ಕೇವಲ 2 ಗಂಟೆ ಇರುವಾಗಲೇ ಕುಸಿದು ಬಿದ್ದ ಅಪ್ಪ – ಆಮೇಲೆ ನಡೆದಿದ್ದು ಘೋರ ದುರಂತ!

ಆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮಗಳ ಮದುವೆ ಹಿನ್ನೆಲೆ ಸ್ನೇಹಿತರು, ಬಂಧುಮಿತ್ರರೆಲ್ಲರೂ ಆಗಮಿಸಿದ್ದರು. ವಧು ಕೂಡ ಅಂದವಾಗಿ ರೆಡಿಯಾಗಿ ಮಂಟಪಕ್ಕೆ ಬಂದಿದ್ದಳು. ಮದುವೆಗೆ ಕೇವಲ ಎರಡು ಗಂಟೆ ಮಾತ್ರ ಬಾಕಿ ಇದೆ ಎನ್ನುವಾಗಲೇ ಅಲ್ಲೊಂದು ದುರಂತ ಸಂಭವಿಸಿದೆ. ಕನ್ಯಾದಾನ ಮಾಡಬೇಕಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ. ಮಗಳ ಮದುವೆ ದಿನವೇ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತನನ್ನು ಎರ್ರಾಳ ರಾಮುಲು(48) ಎಂದು ಗುರುತಿಸಲಾಗಿದ್ದು, ಶಂಕರಪಟ್ಟಣ ಮಂಡಲದ ಅಂಬಲಪುರ ಗ್ರಾಮದ ನಿವಾಸಿ.

ಇದನ್ನೂ ಓದಿ: ಸಿಡಿಲು ಬಡಿದು 12 ಮಂದಿ ಸಾವು.. 14 ಜನರಿಗೆ ಗಾಯ – ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ಥ

ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ರಾಮುಲು ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ಹಿರಿಯ ಮಗಳು ಲಾವಣ್ಯಳ ಮದುವೆ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮದುವೆ ನಿಗದಿಯಾಗಿತ್ತು. ಮುಹೂರ್ತಕ್ಕೆ ಇನ್ನೂ ಎರಡು ಗಂಟೆ ಬಾಕಿ ಇದ್ದು, ಇಡೀ ಮದುವೆ ಮಂಟಪ ಬಂಧುಗಳಿಂದ ತುಂಬಿ ತುಳುಕುತ್ತಿತ್ತು. ವಧು-ವರರು ಕೂಡ ಮಂಟಪವನ್ನು ಪ್ರವೇಶಿಸಲು ಸಿದ್ಧರಾಗಿದ್ದ ವೇಳೆ ರಾಮುಲು ಎದೆಯಲ್ಲಿ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಹುಜೂರಾಬಾದ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಆತನ ನಿಧನದಿಂದಾಗಿ ಮದುವೆ ಮನೆ ಮಸಣವಾಗಿ ಮಾರ್ಪಟ್ಟಿದ್ದು, ಅಲ್ಲಿಯವರೆಗೂ ಇದ್ದ ಸಂತಸದ ಕ್ಷಣ ಮರೆಯಾಗಿದೆ. ಇಡೀ ಕುಟುಂಬವೇ ಕಣ್ನೀರ ಸಾಗರದಲ್ಲಿ ಮುಳುಗಿದೆ. ತುಂಬಾ ಸಂತಸದಿಂದ ನಡೆಯಬೇಕಿದ್ದ ಮದುವೆ ಅನಿರೀಕ್ಷಿತ ಘಟನೆಯಿಂದಾಗಿ ಮೂಂದೂಡಲಾಗಿದೆ.

suddiyaana