ಐಪಿಎಲ್ ಅಖಾಡದ ಸಾರ್ವಕಾಲಿಕ ಶ್ರೇಷ್ಠ ತಂಡ ಕಟ್ಟಿದ ಫ್ಯಾನ್ಸ್ – ಗ್ರೇಟೆಸ್ಟ್ ಟೀಂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ

ಐಪಿಎಲ್ ಅಖಾಡದ ಸಾರ್ವಕಾಲಿಕ ಶ್ರೇಷ್ಠ ತಂಡ ಕಟ್ಟಿದ ಫ್ಯಾನ್ಸ್ –  ಗ್ರೇಟೆಸ್ಟ್ ಟೀಂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ

ಐಪಿಎಲ್​​ಗೆ ಈಗಾಗ್ಲೇ ಕೌಂಟ್​​ಡೌನ್ ಶುರುವಾಗಿದೆ. ಕ್ರಿಕೆಟ್ ಫ್ಯಾನ್ಸ್ ಫೋಕಸ್ ಈಗ ಐಪಿಎಲ್​​ನತ್ತ ಶಿಫ್ಟ್ ಆಗ್ತಿದೆ. ಐಪಿಎಲ್​​ ಅಭಿಮಾನಿಗಳು ಯಾವಾಗಲೂ ಆಲ್​​ಟೈಮ್ ಬೆಸ್ಟ್​ ಟೀಮ್ ಯಾವುದು? ಐಪಿಎಲ್​​ನ ಆಲ್​​ಟೈಮ್ ಬೆಸ್ಟ್ ಕ್ಯಾಪ್ಟನ್ ಯಾರು? ಆಲ್​ಟೈಮ್ ಬೆಸ್ಟ್ ಬ್ಯಾಟ್ಸ್​ಮನ್ ಯಾರು? ಬೌಲರ್ ಯಾರು? ಈ ರೀತಿ ಹಲವು ಡಿಬೇಟ್​​ಗಳನ್ನ ಮಾಡ್ತಿರ್ತಾರೆ. ಇಂಥಾ ಸಂದರ್ಭದಲ್ಲೇ ಐಪಿಎಲ್​ನ ಆಲ್​​ ಟೈಮ್​ ಗ್ರೇಟೆಸ್ಟ್​ ಟೀಮ್​​ ಲಿಸ್ಟ್​ನ್ನ ರಿಲೀಸ್ ಮಾಡಲಾಗಿದೆ. ಮಾಜಿ ಕ್ರಿಕೆಟರ್ಸ್​ಗಳಾದ ವಾಸಿಮ್ ಅಕ್ರಂ, ಮ್ಯಾಥ್ಯೂ ಹೇಡನ್, ಟಾಮ್​ ಮೂಡಿ, ಡೇಲ್ ಸ್ಟೈಯ್ನ್ ಹಾಗೆಯೇ ಸುಮಾರು 70 ಮಂದಿ ಸ್ಪೋರ್ಟ್ಸ್​ ಜರ್ನಲಿಸ್ಟ್​​ಗಳ ಒಪೀನಿಯನ್ ತಗೊಂಡು ಐಪಿಎಲ್​​ನ ಆಲ್​ಟೈಮ್​ ಗ್ರೇಟೆಸ್ಟ್ ಟೀಮ್​​ಗೆ ಪ್ಲೇಯರ್ಸ್​ಗಳನ್ನ ಸೆಲೆಕ್ಟ್ ಮಾಡಲಾಗಿದೆ. ಈ ಟೀಮ್​​ನಲ್ಲಿ ಒಟ್ಟು 15 ಮಂದಿ ಆಟಗಾರರಿದ್ದಾರೆ. ಹಾಗೆಯೇ ಈ ಟೀಮ್​ಗೆ ಒಬ್ಬ ಕ್ಯಾಪ್ಟನ್​​ನನ್ನ ಕೂಡ ನೇಮಕ ಮಾಡಲಾಗಿದೆ.

ಇದನ್ನೂ ಓದಿ: BAZBALLಗೆ ರೋಹಿತ್ ಕೌಂಟರ್! – ಸೋತರೂ ಮೀಸೆ ಮಣ್ಣಾಗಿಲ್ಲ ಅಂತಿದ್ದಾರೆ ಆಂಗ್ಲರು

ಐಪಿಎಲ್ ಆರಂಭವಾಗಿ 16 ವರ್ಷಗಳಾಗಿದೆ. 2008ರಿಂದ ನಿರಂತರವಾಗಿ ಐಪಿಎಲ್​ ಟೂರ್ನಿ ನಡೀತಿದೆ. ಒಟ್ಟು 10 ಟೀಮ್​ಗಳು ಪ್ರತಿ ವರ್ಷ ಟ್ರೋಫಿಗಾಗಿ ಸೆಣಸಾಡ್ತಿವೆ. ಆರಂಭದಲ್ಲಿ 8 ಟೀಮ್​ಗಳಿದ್ವು. ಇದಾದ್ಮೇಲೆ 10 ಟೀಮ್​ಗಳಾಯ್ತು. ಐಪಿಎಲ್​​ ಅನ್ನೋದು ವನ್​ ಆಪ್ ದಿ ಮೋಸ್ಟ್ ಪಾಪ್ಯುಲರ್ ಮತ್ತು ಸಕ್ಸಸ್​​ಫುಲ್​ ಫ್ರಾಂಚೈಸಿ ಟೂರ್ನಿಯಾಗಿದೆ. ಕ್ರಿಕೆಟ್​ನಲ್ಲಂತೂ ಐಪಿಎಲ್​​​ಗೆ ಸಮಾನವಾದ ಇನ್ನೊಂದು ಫ್ರಾಂಚೈಸಿ ಟೂರ್ನಿ ಇಡೀ ಜಗತ್ತಿನಲ್ಲೇ ಇಲ್ಲ. ಹಾಗೆಯೇ ಹಾಗೆಯೇ ಜಾಗತಿಕ ಕ್ರೀಡಾ ವಲಯದಲ್ಲಿ ಫುಟ್ಬಾಲ್ ಬಳಿಕ ಅತ್ಯಂತ ದೊಡ್ಡ ಮಟ್ಟದಲ್ಲಿ, ಅತೀ ವೇಗವಾಗಿ ಬೆಳೆಯುತ್ತಿರುವ ಫ್ರಾಂಚೈಸಿ ಟೂರ್ನಿ ಅಂದ್ರೆ ಅದು ಐಪಿಎಲ್​. ಹೀಗಾಗಿ ಐಪಿಎಲ್​​ನ ಈ ಮೆಗಾ ಸಕ್ಸಸ್​​ನ್ನ ಸೆಲೆಬ್ರೇಟ್ ಮಾಡೋದಕ್ಕಾಗಿಯೇ ಈಗ ಐಪಿಎಲ್​ ಆಲ್​​ಟೈಮ್ ಗ್ರೇಟೆಸ್ಟ್ ಟೀಮ್​​ನ್ನ ರಿಲೀಸ್ ಮಾಡಲಾಗಿದೆ. ಫೈನ್..ಈಗ ಈ ಆಲ್​ಟೈಮ್​ ಗ್ರೇಟೆಸ್ಟ್ ಟೀಮ್​ನಲ್ಲಿ ಯಾರೆಲ್ಲಾ ಇದ್ದಾರೆ? ಕ್ಯಾಪ್ಟನ್ ಯಾರು? ಓಪನರ್ಸ್​​ಗಳು ಯಾರು? ಬ್ಯಾಟಿಂಗ್​​ ಮತ್ತು ಬೌಲಿಂಗ್​​ ಲೈನ್​​ಅಪ್​​ನಲ್ಲಿ ಯಾಱರಿದ್ದಾರೆ ಅನ್ನೋದನ್ನ ನೋಡ್ತಾ ಹೋಗೋಣ.

ವಿರಾಟ್ ಕೊಹ್ಲಿ & ಡೇವಿಡ್ ವಾರ್ನರ್ ಓಪನರ್ಸ್!

ಐಪಿಎಲ್​​ ಆಲ್​ಟೈಮ್​ ಗ್ರೇಟೆಸ್ಟ್ ಟೀಮ್​ನಲ್ಲಿ ಆರ್​​ಸಿಬಿಯ ವಿರಾಟ್ ಕೊಹ್ಲಿ ಮತ್ತು ದೆಹಲಿ ಕ್ಯಾಪಿಟಲ್ಸ್​ನ ಡೇವಿಡ್ ವಾರ್ನರ್ ಸೆಲೆಕ್ಟ್ ಆಗಿದ್ದಾರೆ. ಹಾಗೆಯೇ ಇವರಿಬ್ಬರನ್ನೂ ಓಪನಿಂಗ್​ ಬ್ಯಾಟ್ಸ್​​ಮನ್​ಗಳಾಗಿ ಪಿಕ್ ಮಾಡಲಾಗಿದೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ ವನ್​ ಆಫ್ ದಿ ಮೋಸ್ಟ್ ಸಕ್ಸಸ್​​ಫುಲ್ ಬ್ಯಾಟ್ಸ್​ಮನ್​​. ಇನ್ನು ಡೇವಿಡ್ ವಾರ್ನರ್​ ಅಂತೂ ಐಪಿಎಲ್​ ಮತ್ತು ಆಸ್ಟ್ರೇಲಿಯಾ ಪರವೂ ಓಪನಿಂಗ್​ ಬ್ಯಾಟ್ಸ್​ಮನ್ ಆಗಿಯೇ ಕ್ರೀಸ್​ಗಿಳೀತಾರೆ.

3ನೇ ಕ್ರಮಾಂಕದಲ್ಲಿ ಕ್ರಿಸ್​​ ಗೇಲ್ ಬ್ಯಾಟಿಂಗ್!

ಇನ್ನು ಮೂರನೇ ಕ್ರಮಾಂಕದಲ್ಲಿ ಯುನಿವರ್ಸಲ್ ಬಾಸ್, ಆರ್​ಸಿಬಿಯ ಮಾಜಿ ಕ್ರಿಕೆಟಿಗ, ವೆಸ್ಟ್​ಇಂಡೀಸ್ ದೈತ್ಯ ಕ್ರೀಸ್​​ ಗೇಲ್​​ರನ್ನ ಸೆಲೆಕ್ಟ್ ಮಾಡಲಾಗಿದೆ. ಕ್ರೀಸ್​​ ಗೇಲ್ ಕೂಡ ಓಪನಿಂಗ್ ಬ್ಯಾಟ್ಸ್​ಮನೇ ಆಗಿದ್ರು. ನಿಮಗೆ ಗೊತ್ತಿರೋ ಹಾಗೆ ಆರ್​​ಸಿಬಿಯಲ್ಲಿ ಆಡೋವಾಗಲೂ ಗೇಲ್ ಓಪನಿಂಗ್ ಬರ್ತಿದ್ರು. ಬಟ್ ಆಲ್​​​ಟೈಮ್​ ಗ್ರೇಟೆಸ್ಟ್ ಐಪಿಎಲ್​ ಟೀಮ್​​ನಲ್ಲಿ ಕ್ರಿಸ್​​ಗೇಲ್​ರನ್ನ 3ನೇ ಆರ್ಡರ್ ಬ್ಯಾಟ್ಸ್​ಮನ್​​ ಆಗಿ ಎಕ್ಸ್​​ಪರ್ಟ್​ಗಳು ಪಿಕ್ ಮಾಡಿದ್ದಾರೆ.

ಮಿಡ್ಲ್ ಆರ್ಡರ್​ ಬ್ಯಾಟ್ಸ್ ​ಮನ್ ​ಗಳು ಯಾರೆಲ್ಲಾ?

ಐಪಿಎಲ್​ ಆಲ್​ಟೈಮ್ ಗ್ರೇಟೆಸ್ಟ್ ಟೀಮ್​​ನ ಮಿಡ್ಲ್​​ ಆರ್ಡರ್ ಬ್ಯಾಟಿಂಗ್​ ಲೈನ್​​ಅಪ್ ನಿಜಕ್ಕೂ ಇಂಟ್ರೆಸ್ಟಿಂಗ್ ಆಗಿದೆ. ಚೆನ್ನೈ ಸೂಪರ್​ ಕಿಂಗ್ಸ್​​ನಲ್ಲಿ ಆಡ್ತಾ ಇದ್ದ ಸುರೇಶ್ ರೈನಾ, ಎಬಿಡಿ ವಿಲಿಯರ್ಸ್, ಸೂರ್ಯಕುಮಾರ್ ಯಾದವ್ ಮತ್ತು ಎಂ.ಎಸ್.ಧೋನಿ ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್​ಗಳಾಗಿದ್ದಾರೆ. ಆಫ್​ಕೋಸ್ ಎಂ.ಎಸ್.ಧೋನಿ ಗ್ರೇಟೆಸ್ಟ್​ ಟೀಮ್​ನ ವಿಕೆಟ್ ಕೀಪರ್​​ ಕೂಡ ಆಗಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಸುರೇಶ್ ರೈನಾ, ಎಬಿಡಿ ವಿಲಿಯರ್ಸ್ ಮತ್ತು ಸೂರ್ಯಕುಮಾರ್ ಯಾದವ್ ಈ ಮೂವರು ಐಪಿಎಲ್​​ನಲ್ಲಿ ಕ್ಲಿಕ್ ಆದಂಥಾ ಮಿಡ್ಲ್​​ ಆರ್ಡರ್​​ ಬ್ಯಾಟ್ಸ್​ಮನ್​ಗಳು. ಎಬಿಡಿ ವಿಲಿಯರ್ಸ್​​ ಅಂತೂ ಆರ್​ಸಿಬಿಯ ಬೆನ್ನೆಲುಬಾಗಿದ್ರು.

ಗ್ರೇಟೆಸ್ಟ್ ಟೀಂ ಆಲ್ರೌಂಡರ್ಸ್ ಯಾರು?

ಟಿ20 ಫಾರ್ಮೆಟ್​​ನ್ನ ಆಲ್ರೌಂಡರ್ಸ್​ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮಗೂ ಗೊತ್ತೇ ಇದೆ. ಹೀಗಾಗಿ ಐಪಿಎಲ್​​ ಆಲ್​ಟೈಮ್ ಬೆಸ್ಟ್​ ಟೀಮ್​​ಗೂ ವರ್ಲ್ಡ್ ಕ್ಲಾಸ್​ ಆಲ್ರೌಂಡರ್ಸ್​ಗಳನ್ನ ಪಿಕ್ ಮಾಡಲಾಗಿದೆ. ಈಗ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿರೋ ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್​ ಕಿಂಗ್ಸ್​​ನ ರವೀಂದ್ರ ಜಡೇಜ ಮತ್ತು ಮುಂಬೈ ಇಂಡಿಯನ್ಸ್ ಮಾಜಿ ಪ್ಲೇಯರ್ ಮತ್ತೊಬ್ಬ ವಿಂಡೀಸ್ ದೈತ್ಯ ​ಕಿರಾನ್ ಪೊಲ್ಲಾರ್ಡ್​ ಒಟ್ಟು ಮೂವರು ಆಲ್ರೌಂಡರ್ಸ್​ಗಳನ್ನ ಟೀಮ್​ಗೆ ಸೆಲೆಕ್ಟ್ ಮಾಡಲಾಗಿದೆ. ಐಪಿಎಲ್​​ನಲ್ಲಿ ಹಾರ್ದಿಕ್ ಪಾಂಡ್ಯ ಯಾವಾಗಲೂ ಒಬ್ಬ ಬೆಸ್ಟ್ ಆಲ್ರೌಂಡರ್ ಆಗಿ ಪರ್ಫಾಮ್ ಮಾಡಿದ್ರು. ಇನ್ನು ರವೀಂದ್ರ ಜಡೇಜ ಅಂತೂ ಕೇಳೋದೆ ಬೇಡ. ಧೋನಿ ಟೀಮ್​​ನ ಕೀ ಪ್ಲೇಯರ್. ಮ್ಯಾಚ್​ ವಿನ್ನರ್. 2023ರಲ್ಲೂ ರವೀಂದ್ರ ಜಡೇಜ ಹೊಡೆದ ವಿನ್ನಿಂಗ್ ಶಾಟ್ ನಿಮಗೆ ನೆನಪು ಇದ್ದೇ ಇರುತ್ತೆ. ಹಾಗೆಯೇ ಟೀಂ ಇಂಡಿಯಾ ಪರವೂ ಬೆಸ್ಟ್ ಪರ್ಫಾಮೆನ್ಸ್ ನೀಡ್ತಾ ಇದ್ದಾರೆ. ಐಸಿಸಿ ಱಂಕಿಂಗ್​ನಲ್ಲೂ ನಂಬರ್-1 ಆಲ್ರೌಂಡರ್ ಆಗಿದ್ದಾರೆ. ಇನ್ನು ಕಿರನ್​ ಪೊಲ್ಲಾರ್ಡ್ ಕೂಡ ಮುಂಬೈ ಇಂಡಿಯನ್ಸ್​ಗೆ ಹಲವು ಮ್ಯಾಚ್​​​ಗಳನ್ನ ಗೆಲ್ಲಿಸಿಕೊಟ್ಟಿದ್ರು.

ಗ್ರೇಟೆಸ್ಟ್ ಟೀಂ ಸ್ಪಿನ್ನರ್ಸ್​ ಗಳು ಯಾರೆಲ್ಲಾ?

​ಐಪಿಎಲ್​​ ಆಲ್​ಟೈಮ್​ ಗ್ರೇಟೆಸ್ಟ್​ ಟೀಮ್​ಗೆ ಮೂವರು ಸ್ಪಿನ್ನರ್ಸ್​ಗಳನ್ನ ಪಿಕ್ ಮಾಡಲಾಗಿದೆ. ಸದ್ಯ ಗುಜರಾತ್​ ಟೈಟಾನ್ಸ್​​ನಲ್ಲಿರೋ ಆಪ್ಘನ್​​ ಸ್ಪಿನ್ನರ್ ರಶೀದ್ ಖಾನ್, ವೆಸ್ಟ್​ಇಂಡೀಸ್ ಮೂಲದ ಸುನಿಲ್ ನರೇನ್ ಮತ್ತು ಈಗ ರಾಜಸ್ಥಾನ್ ರಾಯಲ್ಸ್ ಪರ ಆಡ್ತಾ ಇರೋ ಯುಜುವೇಂದ್ರ ಚಹಾಲ್​ರನ್ನ ಐಪಿಎಲ್​​ ಆಲ್​ಟೈಮ್​ ಗ್ರೇಟೆಸ್ಟ್​ ಟೀಮ್​ನ ಸ್ಪಿನ್ ಸ್ಕ್ವಾಡ್​​ಗೆ ಸೇರಿಸಿಕೊಳ್ಳಲಾಗಿದೆ.

ಗ್ರೇಟೆಸ್ಟ್ ಟೀಂ ಫಾಸ್ಟ್ ಬೌಲರ್ಸ್ ಯಾರು?

ಇನ್ನು ಐಪಿಎಲ್​​ ಆಲ್​ಟೈಮ್ ಗ್ರೇಟೆಸ್ಟ್ ಟೀಮ್​​ನ ಫಾಸ್ಟ್ ಬೌಲರ್ಸ್​ಗಳ ವಿಚಾರಕ್ಕೆ ಬರೋದಾದ್ರೆ ಜಸ್ಪ್ರಿತ್ ಬುಮ್ರಾ ಮತ್ತು ಲಸಿತ್ ಮಲಿಂಗಾ ಇವರಿಬ್ಬರೂ ಯುನಾನಿಮಸ್ ಆಗಿ ಚೂಸ್ ಮಾಡಲಾಗಿದೆ. ಬುಮ್ರಾ ಈಗಲೂ ಕೂಡ ಮುಂಬೈ ಇಂಡಿಯನ್ಸ್​ನಲ್ಲೇ ಇದ್ದಾರೆ. ಲಸಿತ್ ಮಲಿಂಗಾ ಕೂಡ ಈ ಹಿಂದೆ ಮುಂಬೈ ಇಂಡಿಯನ್ಸ್​​ನಲ್ಲೇ ಆಡಿದ್ರು. ಇನ್ನು ಮತ್ತೊಬ್ಬ ಮೀಡಿಯಮ್ ಪೇಸ್​ ಬೌಲರ್​ ಹಾರ್ದಿಕ್ ಪಾಂಡ್ಯ ಕೂಡ ಸ್ಕ್ವಾಡ್​​​ನಲ್ಲಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್​​ನ ಮೂವರು ಪ್ಲೇಯರ್ಸ್​ಗಳು ಐಪಿಎಲ್​​ ಆಲ್​​ಟೈಮ್ ಗ್ರೇಟೆಸ್ಟ್​ ಟೀಮ್​​ಗೆ ಸೆಲೆಕ್ಟ್ ಆಗಿದ್ದಾರೆ.

ಗ್ರೇಟೆಸ್ಟ್ ಟೀಂ ಕ್ಯಾಪ್ಟನ್ ಯಾರು?

ವನ್ ಆ್ಯಂಡ್ ಓನ್ಲಿ ಎಂ.ಎಸ್.ಧೋನಿ.. ಚೆನ್ನೈ ಸೂಪರ್​ ಕಿಂಗ್ಸ್​​ನ್ನ ಐದು ಬಾರಿ ಚಾಂಪಿಯನ್ ಆಗಿಸಿದ ಧೋನಿಗೆ ಐಪಿಎಲ್​​​ ಆಲ್​ಟೈಮ್​​ ಗ್ರೇಟೆಸ್ಟ್ ಟೀಮ್​​​ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ನಾಯಕತ್ವ ವಿಚಾರದಲ್ಲಿ ಇಬ್ಬರ ಬಗ್ಗೆ ಚರ್ಚೆಯಾಗಿತ್ತು. ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ. ಫೈನಲಿ ಎಲ್ಲಾ ಎಕ್ಸ್​ಪರ್ಟ್​ಗಳು ಸೇರಿ ಧೋನಿಯನ್ನೇ ಕ್ಯಾಪ್ಟನ್ ಆಗಿ ಚೂಸ್ ಮಾಡಿದ್ರು. ಅಫ್​ಕೋಸ್ ಧೋನಿ ಇದಕ್ಕೆ ಡಿಸರ್ವ್ಡ್​ ಕೂಡ. ವರ್ಲ್ಡ್​ ಕ್ರಿಕೆಟ್​​ನಲ್ಲೇ ಬೆಸ್ಟ್​ ಕ್ಯಾಪ್ಟನ್ ಯಾರು ಅಂತಾ ಬಂದಾಗ ಧೋನಿ ಹೆಸರು ಯಾವಾಗಲೂ ಮುಂಚೂಣಿಯಲ್ಲೇ ಇರುತ್ತೆ. ಅದು ಬೇರೆ 2023ರಲ್ಲಿ, ಕಳೆದ ವರ್ಷವೇ ಧೋನಿ ಐದನೇ ಬಾರಿಗೆ ಚೆನ್ನೈಯನ್ನ ಚಾಂಪಿಯನ್ ಆಗಿಸಿದ್ರು. ಹೀಗಿರುವಾಗ ಐಪಿಎಲ್​​​ ಆಲ್​ಟೈಮ್​​ ಗ್ರೇಟೆಸ್ಟ್ ಟೀಮ್​ನ ಕ್ಯಾಪ್ಟನ್ ಆಗಿ ಧೋನಿಯನ್ನೇ ಚೂಸ್ ಮಾಡಿರೋದ್ರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

Sulekha