ಟ್ಯಾಟೂ ನೋಡಬೇಕಾ.. ʼಆʼ ಭಾಗ ನೋಡಬೇಕಾ.. ಬಟ್ಟೆ ಸರಿಯಾಗಿ ಹಾಕಮ್ಮಾ ʼಭೂಮಿ‌ʼ ಎಂದ ಫ್ಯಾನ್ಸ್

ಟ್ಯಾಟೂ ನೋಡಬೇಕಾ.. ʼಆʼ ಭಾಗ ನೋಡಬೇಕಾ.. ಬಟ್ಟೆ ಸರಿಯಾಗಿ ಹಾಕಮ್ಮಾ ʼಭೂಮಿ‌ʼ ಎಂದ ಫ್ಯಾನ್ಸ್

‘ಕಿನ್ನರಿ’ ಧಾರಾವಾಹಿ ಮೂಲಕ ಕಿರುತೆರೆ ಎಂಟ್ರಿಕೊಟ್ಟ ನಟಿ ಭೂಮಿ ಶೆಟ್ಟಿ ʼಮಣಿʼ ಎಂದೇ ಖ್ಯಾತಿ ಪಡೆದಿದ್ದರು. ಆ ಧಾರವಾಹಿ ಶುರುವಾದ ಬಳಿಕ ಜನರು ಬಹಳ ಖುಷಿಯಿಂದ ಈಕೆಯನ್ನು ಮೆಚ್ಚಕೊಂಡಿದ್ದರು. ಬಿಗ್‌ ಬಾಸ್‌ ರಿಯಾಲಿಟಿ ಶೋ ಹೋದ ಮೇಲಂತೂ ಆಕೆಯ ಖ್ಯಾತಿ ಇನ್ನೂ ಹೆಚ್ಚಿತ್ತು. ಆದರೆ ಇದೀಗ ಭೂಮಿ ಶೆಟ್ಟಿಯನ್ನು ನೋಡಿ ಇವಳೇನಾ ಮುಗ್ಧ ಮಣಿಯಾಗಿ ಕಾಣಿಸಿಕೊಂಡ ನಟಿ ಎಂದು ಶಾಕ್ ಆಗಿದ್ದಾರೆ. ಇಕ್ಕಟ್ ಸಿನಿಮಾ ಸುಂದರಿಯ ಹಾಟ್ ಅವತಾರಕ್ಕೆ ನೆಟ್ಟಿಗರು ಹೌಹಾರಿದ್ದಾರೆ. ಟ್ಯಾಟೂ ಹಾಕಿಕೊಂಡಿದ್ದು ಓಕೆ. ಆದರೆ, ಎದೆ ಮೇಲೆ ಟ್ಯಾಟು ಹಾಕಿಕೊಂಡೆ ಅಂತಾ ಎದೆಯನ್ನೇ ತೋರಿಸುವ ಅಗತ್ಯ ಇತ್ತಾ ಎಂದು ಭೂಮಿ ಶೆಟ್ಟಿಯನ್ನು ಈಗ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.

ಭೂಮಿಕಾ ಶೆಟ್ಟಿ ಇದೀಗ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿಯ ಬೋಲ್ಡ್ ಅವತಾರ ನೋಡಿ ಮಣಿಗೆ ಇದೆಲ್ಲಾ ಬೇಕಿತ್ತಾ ಅಂತಿದ್ದಾರೆ. ಯಾಕೆಂದರೆ, ಭೂಮಿ ಕೊಟ್ಟ ಪೋಸ್ ಹಾಗಿದೆ. ತನ್ನೆದೆಯನ್ನು ಪ್ರದರ್ಶಿಸಲು ಟ್ಯಾಟೂ ನೆಪ ಬೇಕಿತ್ತಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಭೂಮಿ ಶೆಟ್ಟಿ ಪಾರ್ಟಿ ಗೆ ತೆರಳಲು ತೊಟ್ಟಿರುವ ಡ್ರೆಸ್ ಜೊತೆಗೆ ಭೂಮಿ ನೀಡಿರುವ ಎದೆಭಾಗದ ದರ್ಶನ ಪಡ್ಡೆಹೈಕಳ ನಿದ್ದೆಗೆಡಿಸಿದೆ. ಈ ಫೋಟೋ ಇದೀಗ ವೈರಲ್ ಆಗಿದ್ದು, ಫ್ಯಾನ್ಸ್‌  ಮಾತ್ರ ಫುಲ್‌ ಗರಂ ಆಗಿದ್ದಾರೆ.

ಇತ್ತೀಚಿಗೆ ಭೂಮಿ ಶೆಟ್ಟಿ ಎದೆ ಕಾಣುವ ಹಾಗೇ ಬಟ್ಟೆ ಧರಿಸಿದ್ದರು.  ಕತ್ತಲೆಯಲ್ಲಿ ಕಪ್ಪು ಕನ್ನಡಕ ಧರಿಸಿ ಹೈ ಬನ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಬ್ರೌನ್ ಬಣ್ಣದ ಬ್ಲೌಸ್ ಟಾಪ್‌ಗೆ ಬ್ರೌನ್ ಬಣ್ಣದ ಒಳ ಉಡುಪು ಧರಿಸಿದ್ದಾರೆ. ಇದಕ್ಕೆ ಸೂಟ್ ಆಗುವ ರೀತಿ ಕಲರ್ ಕಲರ್ ಸ್ಕರ್ಟ್ ಧರಿಸಿದ್ದಾರೆ. ಇನ್ನೂ ಭೂಮಿ ಶೆಟ್ಟಿ ಫೋಟೋಗೆ ಒಂದು ಸ್ಪೆಷಾಲಿಟಿ ಏನೆಂದರೆ ಭೂಮಿ ಎದೆ ಮೇಳಿರುವ ಡ್ರ್ಯಾಗನ್ ಟ್ಯಾಟೂ, ಸಖತ್ ಡಿಫರೆಂಟ್ ಆಗಿದೆ. ನಟಿಯ ಹಾಟ್ ಲುಕ್ ನೋಡಿ ಸರಿಯಾಗಿ ಬಟ್ಟೆ ಹಾಕಮ್ಮ ಅಂತಾ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೆ ಮಾನ ಮರ್ಯಾದೆ ಏನು ಇಲ್ವಾ? ಪಬ್ಲಿಕ್ ಪ್ಲೇಸ್‌ನಲ್ಲಿ ಹೀಗೆ ಬರೋದಾ ಅಂತಾ ನಟಿಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ನಟಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

‘ಇಕ್ಕಟ್’ (Ikkat)ಎಂಬ ಸಿನಿಮಾದಲ್ಲಿ ಲಾಕ್‌ಡೌನ್ ಕುರಿತ ನೈಜ ಕಥೆಯಲ್ಲಿ ಭೂಮಿ ಶೆಟ್ಟಿ ಸದ್ದು ಮಾಡಿದ್ದರು. ಮೊದಲ ಸಿನಿಮಾದಲ್ಲೇ ತನ್ನ ಪ್ರತಿಭೆ ಎಂತಹದ್ದು ಎಂದು ನಟಿ ಸಾಬೀತುಪಡಿಸಿದ್ದರು. ಹೊಸ ಬಗೆಯ ಪಾತ್ರಗಳನ್ನ ನಟಿ ಎದುರು ನೋಡ್ತಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ಮಾಡ್ತಿದ್ದಾರೆ. ಜಿಮ್, ವರ್ಕೌಟ್ ಅಂತಾ ಭೂಮಿ ಬೆವರಿಳಿಸುತ್ತಿದ್ದಾರೆ. ಈ ಬೆನ್ನಲ್ಲೇ ಭೂಮಿಕಾ ಶೆಟ್ಟಿ ಹಾಟ್‌ ಫೋಟೋಸ್‌ ವೈರಲ್‌ ಆಗಿದೆ.

suddiyaana