ಈ ಕಂಪನಿಯಲ್ಲಿ ಉದ್ಯೋಗಿಗಳೇ ಸೆಲೆಬ್ರಿಟಿಗಳು! – ದೀಪಾವಳಿ ಪ್ರಯುಕ್ತ ಕಾರ್‌ ಗಿಫ್ಟ್ ನೀಡಿದ ಕಂಪನಿ!

ಈ ಕಂಪನಿಯಲ್ಲಿ ಉದ್ಯೋಗಿಗಳೇ ಸೆಲೆಬ್ರಿಟಿಗಳು! – ದೀಪಾವಳಿ ಪ್ರಯುಕ್ತ ಕಾರ್‌ ಗಿಫ್ಟ್ ನೀಡಿದ ಕಂಪನಿ!

ಹಬ್ಬ ಹರಿದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಗಿಫ್ಟ್‌ಗಳನ್ನು ನೀಡುತ್ತವೆ. ಕೆಲವೊಂದು ಕಂಪನಿಗಳು ಬೋನಸ್‌ ಅಂತಾ ಒಂದೆರಡು ಸಾವಿರ ರೂಪಾಯಿ ಹಣವನ್ನು ನೀಡುತ್ತವೆ. ಇಲ್ಲೊಂದು ಕಂಪನಿ ಉದ್ಯೋಗಿಗಳಿಗೆ ನೀಡಿರುವ ಗಿಫ್ಟ್‌ ಭಾರಿ ಸುದ್ದಿಯಾಗಿದೆ. ಈ ಕಂಪನಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಿಫ್ಟ್‌ ಅನ್ನು ಉದ್ಯೋಗಿಗಳಿಗೆ ನೀಡಿದೆ.

ಅಷ್ಟಕ್ಕೂ ಕಂಪನಿ ಗಿಫ್ಟ್‌ ಕೊಟ್ಟಿದ್ದೇನು?

ಸಾಮಾನ್ಯವಾಗಿ ಕಂಪನಿಗಳು ಉದ್ಯೋಗಿಗಳಿಗೆ ಹಬ್ಬದ ಸಮಯದಲ್ಲಿ ಸ್ವೀಟ್‌ ಬಾಕ್ಸ್‌, ಬೋನಸ್‌ ನೀಡುತ್ತಾರೆ. ಆದ್ರೆ ಹರಿಯಾಣದ ಪಂಚಕುಲದಲ್ಲಿರುವ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿದೆ.

ಉದ್ಯೋಗಿಗಳೇ ಸೆಲೆಬ್ರಿಟಿಗಳು!

ಪಂಚಕುಲದಲ್ಲಿರುವ ಎಂಬ ಫಾರ್ಮಾಸ್ಯುಟಿಕಲ್ ಕಂಪನಿ ತಮ್ಮ ಉದ್ಯೋಗಿಗಳನ್ನು ಸೆಲೆಬ್ರಿಟಿಗಳು ಅಂತಾ ಭಾವಿಸಿದೆ. ಹೀಗಾಗಿ ಆ ಕಂಪನಿಯ ನಿರ್ದೇಶಕ ಎಂ.ಕೆ ಭಾಟಿಯಾ ಅವರು, 12 ಮಂದಿ ಉತ್ತಮ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಕೂಡ ಫಾರ್ಮಾಸ್ಯುಟಿಕಲ್ ಕಂಪನಿ, ಮಿಟ್ಸ್ ಹೆಲ್ತ್‍ಕೇರ್ 38ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿಗೆ ಕಾರುಗಳನ್ನು ಗಿಫ್ಟ್ ಮಾಡುವಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಕುಸ್ತಿಯಲ್ಲಿ ಗೆದ್ದರೂ ಸಂಗೀತಾಗೆ ಸಿಕ್ಕಿದ್ದು ‘ಕಳಪೆ’ – ಯಾರಿಗೂ ಗೌರವ ನೀಡದ ಕಾರಣಕ್ಕೆ ಕಳಪೆ ಕೊಟ್ಟಿದ್ದೇವೆ ಎಂದ ವಿನಯ್ ಟೀಮ್

ಆಫೀಸ್‌ ಬಾಯ್‌ಗೂ ಕಾರ್‌ ಗಿಫ್ಟ್‌!

ಈ ಬಾರಿ ದೀಪಾವಳಿಗೆ ನೀಡಿರುವ ಉಡುಗೊರೆಯ ಲಿಸ್ಟ್ ನಲ್ಲಿ ಕಂಪನಿ ಆಫೀಸ್ ಬಾಯ್ ಕೂಡ ಇದ್ದಾರೆ. ಈ ಮೂಲಕ ಕಂಪನಿಯ ಮಾಲೀಕರು, ಕಂಪನಿಯ ಪ್ರತಿಯೊಬ್ಬ ಉದ್ಯೋಗಿಯನ್ನೂ ಸಮಾನವಾಗಿ ನೋಡುತ್ತಿದ್ದಾರೆ ಎಂಬುದನ್ನು ಗಮನಿಸಬಹುದು.

ಕಂಪನಿಯ ಯಶಸ್ಸಿಗೆ ಎಲ್ಲಾ ಉದ್ಯೋಗಿಗಳು ಶ್ರಮಿಸಿದ್ದಾರೆ. ಉದ್ಯೋಗಿಗಳ ಕಠಿಣ ಪರಿಶ್ರಮ, ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಹಾಗೂ ನಿಷ್ಠೆಯಿಂದ ಮಾಡಿದ ಕೆಲಸದಿಂದ ಇಂದು ಕಂಪನಿ ಯಶಸ್ಸು ಕಂಡಿದೆ. ಕಂಪನಿ ಆರಂಭವಾದಾಗಿನಿಂದ ಜೊತೆ ಇದ್ದ ಉದ್ಯೋಗಿಗಳು ಕೂಡ ಇದಕ್ಕೆ ಕಾರಣಕರ್ತರು ಎಂದು ಅವರು ಹೇಳಿದ್ದಾರೆ. ಭಾಟಿಯಾ ಅವರ ಪ್ರಕಾರ, ಈ ಕಾರುಗಳು ಕೇವಲ ದೀಪಾವಳಿ ಉಡುಗೊರೆಯಾಗಿಲ್ಲ. ಆದರೆ ಕಂಪನಿಯಲ್ಲಿ ಅವರ ಅಚಲವಾದ ಬದ್ಧತೆ ಮತ್ತು ನಂಬಿಕೆಗೆ ಪ್ರತಿಫಲವಾಗಿದೆ.

ಡ್ರೈವಿಂಗ್ ಬರದವರಿಗೂ ಗಿಫ್ಟ್‌!

ಕುತೂಹಲಕಾರಿ ವಿಷವೆಂದರೆ, ಕಾರು ಗಿಫ್ಟ್ ಪಡೆದ ಕೆಲವರಿಗೆ ಡ್ರೈವಿಂಗ್ ಕೂಡ ಬರಲ್ಲ. ಅವರು ಕನಸಿನಲ್ಲಿಯೂ ಇಂಥದ್ದೊಂದು ಉಡುಗೊರೆ ಸಿಗುತ್ತೆ ಎಂದು ಯೋಚಿಸಿರಲಿಲ್ಲ. ಹೀಗಾಗಿ ಈ ಅನಿರೀಕ್ಷಿತ ಉಡುಗೊರೆಯಿಂದ ಅವರು ದಿಗ್ಭ್ರಮೆಗೊಂಡಿದ್ದಾರೆ.

Shwetha M