Watch – ಬಿಟ್ಟು ಹೋಗದಿರು ನನ್ನ… ಸಂಗಾತಿಗಾಗಿ ರೋದಿಸುತ್ತಿರುವ ಗಿಣಿರಾಮ
ಭೂಮಿಯಲ್ಲಿ ಜೀವಿಸುವ ಪ್ರತಿಯೊಂದು ಭಾವನೆ ಅನ್ನುವುದು ಇದ್ದೇ ಇರುತ್ತೆ.. ಅದು ಪ್ರಾಣಿಯಾಗಲಿ, ಪಕ್ಷಿಯಾಗಲಿ ತನ್ನವರನ್ನು ಕಳೆದು ಕೊಳ್ಳುವ ನೋವು ಎಲ್ಲರಿಗೂ ಒಂದೇ. ಮನುಷ್ಯರಿಗೆ ಮಾತು ಬರುತ್ತದೆ ಹಾಗಾಗಿ ತಮ್ಮ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕುತ್ತಾರೆ. ಆದರೆ, ಈ ಪ್ರಾಣಿ ಪಕ್ಷಿಗಳಿವೆಯಲ್ಲಾ, ಅವುಗಳಿಗೆ ಮಾತು ಬರುವುದಿಲ್ಲ. ಆದರೂ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಮನಮಿಡಿಯುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕಾದಾಟವೋ ಕಲೆಯೋ – ಹಾರ್ನ್ಬಿಲ್ ಗಳ ಅದ್ಬುತ ದೃಶ್ಯ ಸೆರೆ
ವೈರಲ್ ಆದ ದೃಶ್ಯಗಳಲ್ಲಿ ಒಂದು ಬಾಕ್ಸ್ ನಲ್ಲಿ ಸತ್ತಿರುವ ಗಿಳಿಯನ್ನು ಕಾಣಬಹುದು. ಮತ್ತೊಂದೆಡೆ, ಆ ಮೃತ ಗಿಳಿಯ ಪಕ್ಕ ಇನ್ನೊಂದು ಗಿಳಿ ಕುಳಿತು ರೋದಿಸುತ್ತಿದೆ. ತನ್ನ ಸಂಗಾತಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆ ಗಿಳಿಗೆ ಸಾಧ್ಯವಾಗುತ್ತಿಲ್ಲ. ತಾನು ಏನು ಮಾಡಿದರೆ ತನ್ನ ಸಂಗಾತಿ ಮತ್ತೆ ಎದ್ದು ನಿಲ್ಲುವುದೋ ಎನ್ನುವ ಹಾಗೆ ಎಲ್ಲಾ ಪ್ರಯತ್ನಗ ಳನ್ನೂ ಮಾಡುತ್ತಿದೆ. ಮನುಷ್ಯರಂತೆ ಸಂಗಾತಿಯ ಹಣೆಗೆ ಮುತ್ತಿಕ್ಕುತ್ತಿದೆ. ಒಮ್ಮೆ ಎದ್ದು ನಿಲ್ಲು… ನನ್ನ ಬಿಟ್ಟು ಹೋಗಬೇಡ.. ಮತ್ತೆ ಜೊತೆಯಾಗೋಣ ಎಂದು ಬೇಡುತ್ತಿದೆ.
“Goodbyes simply means I will miss you till we meet again”
Grieving just like us. Treat the wild with empathy. pic.twitter.com/DgqIfI0nH9— Susanta Nanda IFS (@susantananda3) January 2, 2023
ಈ ಭಾವುಕ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಹೃದಯ ಹಿಂಡುವ ವಿಡಿಯೋ ವೈರಲ್ ಆಗುತ್ತಿದೆ.