ಕೊಟ್ಟ ಮಾತನ್ನು ಉಳಿಸಿಕೊಂಡ ಡ್ರೋನ್ ಪ್ರತಾಪ್ – ರನ್ನರ್ ಅಪ್ ಆಗಿ ಗೆದ್ದಿದ್ದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ದಾನ

ಕೊಟ್ಟ ಮಾತನ್ನು ಉಳಿಸಿಕೊಂಡ ಡ್ರೋನ್ ಪ್ರತಾಪ್ – ರನ್ನರ್ ಅಪ್ ಆಗಿ ಗೆದ್ದಿದ್ದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ದಾನ

ಬಿಗ್‌ಬಾಸ್ ರನ್ನರ್ ಅಪ್ ಆಗಿ ಕರ್ನಾಟಕದಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಡ್ರೋನ್ ಪ್ರತಾಪ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ರನ್ನರ್ ಅಪ್ ಆಗಿದ್ದಕ್ಕೆ ಡ್ರೋನ್ ಪ್ರತಾಪ್‌ಗೆ ಎಲೆಕ್ಟ್ರಿಕ್ ಬೈಕ್ ಅನ್ನು ಬಹುಮಾನವಾಗಿ ನೀಡಲಾಗಿತ್ತು. ಆಗ ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಒಂದು ಹೇಳಿಕೆ ನೀಡಿದ್ದರು. ಇದೀಗ ತಾನು ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು – ಮುದ್ದು ಕಂದನಿಗೆ ಅಕಾಯ್ ಎಂದು ಹೆಸರಿಟ್ಟ ಕಿಂಗ್ ಕೊಹ್ಲಿ

ಬಿಗ್‌ಬಾಸ್ ರನ್ನರ್ ಅಪ್ ಆಗಿದ್ದಕ್ಕೆ ಡ್ರೋನ್ ಪ್ರತಾಪ್‌ಗೆ ಎಲೆಕ್ಟ್ರಿಕ್ ಬೈಕ್ ಅನ್ನು ಬಹುಮಾನವಾಗಿ ನೀಡಲಾಗಿತ್ತು. ಆಗ ವೇದಿಕೆ ಮೇಲೆಯೇ ಡ್ರೋನ್ ಪ್ರತಾಪ್ ತನಗೆ ಸಿಕ್ಕ ಬೈಕ್‌ನ್ನು ಅಗತ್ಯವಿದ್ದವರಿಗೆ ನೀಡುವುದಾಗಿ ಹೇಳಿದ್ದರು. ಬಿಗ್‌ಬಾಸ್ ವೇದಿಕೆ ಮೇಲೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಡ್ರೋನ್ ಪ್ರತಾಪ್. ಇದೀಗ ಎಲೆಕ್ಟ್ರಿಕ್ ಬೈಕ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದಾರೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನೊಬ್ಬನಿಗೆ ಬೈಕ್ ಅನ್ನು ನೀಡುತ್ತಿರುವ ಚಿತ್ರ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ‘ಬಿಗ್‌ಬಾಸ್‌ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ. ಮಧ್ಯಾಹ್ನದಿಂದ ಸಂಜೆವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು. ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ಈ ಹುಡುಗನಿಗೆ ನೀಡಿದ್ದು ನನಗೆ ತುಂಬಾ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

ಡ್ರೋನ್ ಪ್ರತಾಪ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿರುವುದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘1ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೀರಿ’, ‘ನಿಮಗೆ ಮತ ಹಾಕಿದ್ದಕ್ಕೂ ಸಾರ್ಥವಾಯ್ತು’, ‘ನಿಮ್ಮ ಈ ಗುಣವೇ ನಿಮ್ಮನ್ನು ಬಿಗ್ಬಾಸ್ ಫಿನಾಲೆ ವರೆಗೂ ಕರೆತಂದಿತು’ ಇನ್ನೂ ಹಲವು ಕಮೆಂಟ್‌ಗಳನ್ನು ಮಾಡಿದ್ದಾರೆ.

Sulekha