ವಿಪಕ್ಷ ನಾಯಕನ ಆಯ್ಕೆಗೆ ಕೊನೆಗೂ ಮುಹೂರ್ತ ಫಿಕ್ಸ್ – ಶನಿವಾರ ನಾಯಕ ಯಾರು ಎಂದು ಘೋಷಣೆ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಚುನಾವಣೆ ಸೋಲಿನ ಬಳಿಕ ಒಳಒಪ್ಪಂದ, ಆರೋಪ ಪ್ರತ್ಯಾರೋಪ, ನಾಯಕರ ಕೆಸರೆರೆಚಾಟ, ಕಾರ್ಯಕರ್ತರ ಆಕ್ರೋಶ ಹೀಗೆ ಒಂದರ ಬೆನ್ನಲ್ಲೊಂದರಂತೆ ಹೊರಬರುತ್ತಿರುವ ಅಸಮಾಧಾನದ ಹೊಗೆ ತಣಿಸುವುದು ವರಿಷ್ಠರಿಗೆ ಸವಾಲಾಗಿದೆ. ಇದೀಗ ಬಿಜೆಪಿಯಲ್ಲಿ ವಿಪಕ್ಷ ನಾಯಕ ಆಯ್ಕೆಯ ಪ್ರಕ್ರಿಯೆಯಲ್ಲಿ ಗೊಂದಲ ನಿವಾರಣೆಯಾದಂತೆ ಕಾಣುತ್ತಿದೆ. ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನಾಯಕ ಯಾರು ಎಂದು ರಾಜ್ಯ ವಿಜೆಪಿ ಶನಿವಾರ ಘೋಷಿಸಲಿದೆ.
ಇದನ್ನೂ ಓದಿ: ಜುಲೈ 1 ರಿಂದ ಅನ್ನಭಾಗ್ಯ ಜಾರಿ – ಅಕ್ಕಿ ಜೊತೆ ಖಾತೆಗೆ ಜಮೆಯಾಗುತ್ತೆ ಹಣ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬಹುದು ಹಾಗೂ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಾರಾಗಬಹುದು ಅನ್ನೋದು ಕೇಸರಿ ಬ್ರಿಗೇಡ್‌ನಲ್ಲಿ ದೊಡ್ಡ ಚರ್ಚೆಗೆ ಶನಿವಾರ ಉತ್ತರ ಸಿಗಲಿದೆ. ಇನ್ನು ಬಿಜೆಪಿಯಲ್ಲಿ ನಾಯಕರ ಬಹಿರಂಗ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆದಿದೆ. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕರಾದ ಗೋವಿಂದ ಕಾರಜೋಳ, ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.