ಚುನಾವಣಾ ಆಯೋಗದಿಂದ ಭರ್ಜರಿ ಬೇಟೆ! – ಎಲೆಕ್ಷನ್‌ಗೂ ಮುನ್ನವೇ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶ

ಚುನಾವಣಾ ಆಯೋಗದಿಂದ ಭರ್ಜರಿ ಬೇಟೆ! – ಎಲೆಕ್ಷನ್‌ಗೂ ಮುನ್ನವೇ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶ

ಲೋಕಸಭೆ ಚುನಾವಣೆಯ ಅಖಾಡ ರಂಗೇರಿದೆ. ಅತ್ತ ಮತದಾರರ ಮನವೊಲಿಸುವಲ್ಲಿ ಎಲ್ಲಾ ಪಕ್ಷಗಳು ನಾನಾ ರೀತಿಯ ಸರ್ಕಸ್‌ ನಡೆಸುತ್ತಿದ್ದರೆ, ಇತ್ತ ಮತದಾರರಿಗೆ ಗಿಫ್ಟ್, ಹಣ, ಮದ್ಯ ನೀಡಿ ಅಮಿಷವೊಡ್ಡುತ್ತಿರುವವರ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇಲ್ಲಿವರೆಗೆ ನಗದು, ಮದ್ಯ, ಡ್ರಗ್ಸ್‌, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನುವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟಾಲಿವುಡ್‌ಗೆ ಹಾರಿದ ಕಾಂತಾರ ಬೆಡಗಿ – ತೆಲುಗು ಸ್ಟಾರ್ ನಿತಿನ್ ಸಿನಿಮಾಗೆ ಸಪ್ತಮಿ ಗೌಡ ನಾಯಕಿ

ಈ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಮಾರ್ಚ್‌ 1 ರಿಂದ ಏಪ್ರಿಲ್‌ 13ರ ವರೆಗೆ ವಶಪಡಿಸಿಕೊಂಡ ವಸ್ತುಗಳ ವಿವರವನ್ನು ಚುನಾವಣಾ ಆಯೋಗ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 3,475 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಾರಿ ಚುನಾವಣೆ ನಡೆಯುವ ಮೊದಲೇ ಕಳೆದ ವರ್ಷದ ದಾಖಲೆಯನ್ನು ಮುರಿಯಲಾಗಿದೆ.

ಈ ಬಾರಿ 395.39 ಕೋಟಿ ರೂ. ನಗದು,  489.31 ಕೋಟಿ ರೂ. ಮೌಲ್ಯದ 35,829,924.75 ಲೀ. ಮದ್ಯ, 2,068 ಕೋಟಿ ರೂ. ಮೌಲ್ಯದ ಡ್ರಗ್ಸ್‌.  562.10 ಕೋಟಿ ಮೌಲ್ಯದ ಅಮೂಲ್ಯ ಲೋಹ, 1,142.49 ಕೋಟಿ ಮೌಲ್ಯದ ಉಡುಗೊರೆ ಮುಂತಾದವುಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದು 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು ಎಂದು ಆಯೋಗ ತಿಳಿಸಿದೆ.

ಇನ್ನು ಕರ್ನಾಟಕದಿಂದ 35.53 ಕೋಟಿ ರೂ ನಗದು, 1.30 ಕೋಟಿ ರೂ. ಮೌಲ್ಯದ ಮದ್ಯವನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shwetha M