‘ದ್ರೋಣ’ ಬಂದ ಸೈಡ್ ಬಿಡಿ – ಬಂಡೀಪುರದಲ್ಲಿ ವನ್ಯಸಂಪತ್ತು ಕಾಯಲು ಬಂದಿದ್ದಾನೆ ಹೊಸ ಸೇನಾನಿ..!

‘ದ್ರೋಣ’ ಬಂದ ಸೈಡ್ ಬಿಡಿ – ಬಂಡೀಪುರದಲ್ಲಿ ವನ್ಯಸಂಪತ್ತು ಕಾಯಲು ಬಂದಿದ್ದಾನೆ ಹೊಸ ಸೇನಾನಿ..!

ಬಂಡೀಪುರದಲ್ಲಿ ವನ್ಯಸಂಪತ್ತು ಲೂಟಿ ಮಾಡುವವರು ಹುಷಾರಾಗಿರಲೇಬೇಕು. ಒಂದು ವೇಳೆ ಅರಣ್ಯ ಸಂಪತ್ತಿನ ಮೇಲೆ ಕಣ್ಣು ಹಾಕಿದರೆ ದ್ರೋಣ ಸುಮ್ಮನೆ ಬಿಡುವುದೇ ಇಲ್ಲ. ಯಾಕೆಂದರೆ, ಈಗ ಬಂಡೀಪುರದಲ್ಲಿ ದ್ರೋಣನದ್ದೇ ಮಾತು. ಈ ದ್ರೋಣ ಈಗ ಬಂಡೀಪುರವನ್ನು ಕಾಯಲು ಟೊಂಕಕಟ್ಟಿ ನಿಂತಿದ್ದಾನೆ. ಅಂದಹಾಗೆ ಈ ದ್ರೋಣ ಬಂಡೀಪುರ ಅರಣ್ಯ ಕಾವಲಿಗೆ ಬಂದಿರುವ ಹೊಸ ಸೇನಾನಿ. ಈ ಹಿಂದೆ ಬಂಡೀಪುರದಲ್ಲಿ ಕಳ್ಳಕಾಕರನ್ನು ರಾಣಾ ಹೆಡೆಮುರಿ ಕಟ್ಟುತಿದ್ದ. ಆದ್ರೆ, ಅವನ ನಿಧನದಿಂದ ಅರಣ್ಯ ಇಲಾಖೆಗೆ ದೊಡ್ಡ ನಷ್ಟವೆ ಆಗಿತ್ತು. ಇದೀಗ ಆ ಜಾಗಕ್ಕೆ ಹೊಸದಾಗಿ ದ್ರೋಣ ಬಂದಿದ್ದಾನೆ. ಜರ್ಮನ್ ಶಫರ್ಡ್ ಜಾತಿಯ ಈ ಶ್ವಾನ ಕಳ್ಳಕಾಕರ ವಾಸನೆ ಹಿಡಿಯುವುದರಲ್ಲಿ ಎಕ್ಸ್‌ಪರ್ಟ್.

ಇದನ್ನೂ ಓದಿ: ಮಾಂಸ ಕೊಳ್ಳಲು ಆಗ್ತಿಲ್ಲ.. ಗಗನಕ್ಕೇರಿತು ಚಿಕನ್, ಮೊಟ್ಟೆ ದರ – ನಾನ್ ವೆಜ್ ಪ್ರಿಯರಿಗೆ ಬಿಗ್ ಶಾಕ್

ಈ ಹಿಂದೆ ಇದ್ದ ರಾಣಾ ಕೂಡ ಹಲವು ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದ. ಇದೀಗ ಅದೇ ಜಾತಿಗೆ ಸೇರಿದ್ದ ದ್ರೋಣ, ಹಲವು ತಿಂಗಳ ಕಾಲ ಎಲ್ಲಾ ರೀತಿಯ ಟ್ರೈನಿಂಗ್ ಪಡೆದು ಬಂಡೀಪುರಕ್ಕೆ ಆಗಮಿಸಿದ್ದಾನೆ. ಈಗಾಗಲೇ ಆನೆ ಸೆರೆ ಕಾರ್ಯಚರಣೆ ಸೇರಿದಂತೆ ಹಲವು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾನೆ. ಸದ್ಯ ದ್ರೋಣನನ್ನ ನೋಡಿಕೊಳ್ಳಲು ಅರಣ್ಯ ಇಲಾಖೆಯ ಸ್ಪೆಷಲ್ ಟೈಗರ್ ಫೋರ್ಸ್ ನೌಕರ ಕಾಳ ಎಂಬುವವರು ನೇಮಕವಾಗಿದ್ದಾರೆ. ಸದ್ಯ ಕಾಳ ಹಾಗೂ ದ್ರೋಣ ಇಬ್ಬರಿಗೂ ಈಗ ಇಲಾಖೆ ವತಿಯಿಂದ ಟ್ರೈನಿಂಗ್ ನೀಡಲಾಗಿದೆ. ಹುಲಿ ಕಾರ್ಯಾಚರಣೆ, ಮರಗಳ್ಳರು, ಬೇಟೆಗಾರರನ್ನು ಹಿಡಿಯಲು ಈ ದ್ರೋಣ ಇಲಾಖೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.

suddiyaana