ಹಳದಿ ಮಾರ್ಗದಲ್ಲಿ ಶೀಘ್ರವೇ ಸಂಚರಿಸಲಿದೆ ಚಾಲಕ ರಹಿತ ನಮ್ಮ ಮೆಟ್ರೋ

ಹಳದಿ ಮಾರ್ಗದಲ್ಲಿ ಶೀಘ್ರವೇ ಸಂಚರಿಸಲಿದೆ ಚಾಲಕ ರಹಿತ ನಮ್ಮ ಮೆಟ್ರೋ

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನತೆಗೆ ಗುಡ್‌ನ್ಯೂಸ್‌ ವೊಂದಿದೆ. ಚಾಲಕ ರಹಿತ ಮೆಟ್ರೋ ಬೋಗಿಗಳು ಚೀನಾದಿಂದ ಹೊರಟಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ತಲುಪಲಿದೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಶೀಘ್ರದಲ್ಲೇ ಸಂಚಾರ ನಡೆಸಲಿದೆ.

ಇದನ್ನೂ ಓದಿ: ಉಪಕಾರ ಮಾಡಲು ಹೋಗಿ ಸಾಲದ ಶೂಲಕ್ಕೆ ಸಿಲುಕಿದ ದಂಪತಿ – ಸಾಯುವ ಮುನ್ನ ವಿಡಿಯೋದಲ್ಲಿ ಸೆರೆಯಾಯ್ತು ಕರುಣಾಜನಕ ಕಥೆ

ಹಳದಿ ಮಾರ್ಗದಲ್ಲಿ ಮೋಡಿ ಮಾಡಲಿರುವ ಚಾಲಕ ರಹಿತ ಮೆಟ್ರೋ ಚೀನಾದಿಂದ ಬೆಂಗಳೂರು ಕಡೆ ಹೊರಟಿದೆ. ಮೊದಲ ಆರು ಬೋಗಿಗಳ ರೈಲನ್ನು ಜನವರಿ 20ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಹಡಗು ಮೆಟ್ರೋ ರೈಲು ಹೊತ್ತು ಸದ್ಯ ಚೆನ್ನೈನತ್ತ ತೆರಳುತ್ತಿದೆ. ಫೆಬ್ರವರಿ 7ಕ್ಕೆ ಕಾರ್ಗೋಶಿಪ್ ಮೂಲಕ ಚೆನ್ನೈ ಬಂದರಿಗೆ ಬರಲಿದೆ.

ಬಂದರಿಗೆ ಬಂದ ನಂತರ ಚೆನ್ನೈನಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರವಾನೆಯಾಗಲಿದ್ದು, ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ-ಆರ್‌ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಓಡಾಡಲಿದೆ. ಈ ಮೆಟ್ರೋ ಸೆಪ್ಟೆಂಬರ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

Shwetha M