ನಿನ್ನ ರಕ್ಷಣೆಗೆ ನಾನಿದ್ದೀನಿ ಅಕ್ಕಾ.. – ಸ್ಕೂಲ್‌ಗೆ ಹೊರಟ ಬಾಲಕಿಯನ್ನ ಬಸ್ ಬಳಿ ಬಿಟ್ಟು ಬಂದ ಶ್ವಾನ!

ಶ್ವಾನಗಳು ಮನೆಯ ಮುದ್ದಿನ ಪ್ರಾಣಿಗಳು. ಶ್ವಾನಗಳಿಗೆ ಬಹುತೇಕ ಮನೆಯ ಪ್ರೀತಿಯ ಸದಸ್ಯರ ಸ್ಥಾನವೇ ಇದೆ. ಬಹುತೇಕರು ತಮ್ಮ ಮನೆಯ ಶ್ವಾನಗಳನ್ನು ಮಕ್ಕಳಂತೆ ಬಲು ಅಕ್ಕರೆಯಿಂದಲೂ ನೋಡುತ್ತಾರೆ. ಶ್ವಾನಗಳು ಕೂಡ ಅನ್ನ ಹಾಕಿದ ಯಜಮಾನನ್ನು ಯಾವತ್ತೂ ಮರೆಯುವುದಿಲ್ಲ. ಅನ್ನ ಹಾಕಿದ ಮನೆಗೆ ಕಾವಲಾಗಿರುತ್ತವೆ. ಇದೀಗ ಇಲ್ಲೊಂದು ಕಡೆ ಶ್ವಾನವೊಂದು ಬಾಲಕಿಯನ್ನ ಶಾಲೆಗೆ ಕಳುಹಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಯಶ್ ಡಿಪ್ರೆಷನ್ನಲ್ಲಿದ್ದಾರೆ.. – ರಾಕಿಂಗ್ ಸ್ಟಾರ್ ಬಗ್ಗೆ ಶಾಕಿಂಗ್ ಭವಿಷ್ಯ ಹೇಳಿದ ಜ್ಯೋತಿಷಿ!
ಶ್ವಾನಗಳು ಮನುಷ್ಯನ ಆಪ್ತ ಸ್ನೇಹಿತನಾಗಿ ಬಿಡುತ್ತವೆ. ಮನೆಯ ಸದಸ್ಯರು ಎಲ್ಲಿಗಾದ್ರೂ ಹೊರಟು ನಿಂತರೆ ಸಾಕು, ಅವರನ್ನೇ ಹಿಂಬಾಲಿಸುತ್ತವೆ. ಇನ್ನು, ಮನೆಯಲ್ಲಿರುವ ಪುಟಾಣಿ ಮಕ್ಕಳಿಗೆ ಕಾವಲಾಗಿ ನಿಲ್ಲುತ್ತವೆ. ಇದೀಗ ಇಲ್ಲೊಂದು ಕಡೆ ಪುಟ್ಟ ಬಾಲಕಿಗೆ ಶ್ವಾನ ಕಾವಾಲಾಗಿದೆ. ಬಾಲಕಿಯನ್ನ ಶ್ವಾನವೇ ಸ್ಕೂಲ್ ಬಸ್ ತನಕ ಬಿಟ್ಟು ಬಂದಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
StreetdogofBombay ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಮನೆಯ ಮುದ್ದಿನ ಶ್ವಾನದ ನಡುವಿನ ಬಾಂಧವ್ಯವನ್ನು ನೋಡಬಹುದು. ಪುಟ್ಟ ಹುಡುಗಿಯೂ ಶಾಲೆಗೆ ಹೋಗಲು ಸಿದ್ಧವಾಗಿದ್ದು, ರಸ್ತೆಯತ್ತ ನಡೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ಶ್ವಾನವು ಆಕೆಯನ್ನೇ ಹಿಂಬಾಲಿಸಿದ್ದು, ಸ್ಕೂಲ್ ಬಸ್‌ಗೆ ಹತ್ತಿಸಿದೆ. ಆ ಬಳಿಕ ಬಸ್ಸಿನ ಮೆಟ್ಟಿಲನ್ನು ಹತ್ತಿ ಪುಟ್ಟ ಹುಡುಗಿಯೂ ಸೀಟಿನಲ್ಲಿ ಕುಳಿತುಕೊಂಡಿದ್ದಾಳೋ ಎಂದು ಪರೀಕ್ಷಿಸಿದೆ.
ಈ ವಿಡಿಯೋ ಹದಿಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆ ದಾರ ಬಾಡಿ ಗಾರ್ಡ್ ಎಂದರೆ, ಮತ್ತೊಬ್ಬರು, ಈ ಪುಟಾಣಿಗೆ ಸೀಟ್ ಸಿಕ್ಕಿತೇ ಎಂದು ಪರೀಕ್ಷಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಜವಾಬ್ದಾರಿಯುತ ಶ್ವಾನ ಎಂದು ಹೇಳಿದ್ದಾರೆ.

ನೋಡಿರಿ

