ಬಾಲಕನ ಸ್ಕ್ಯಾನಿಂಗ್‌ ರಿಪೋರ್ಟ್‌ ನೋಡಿದ ವೈದ್ಯರಿಗೆ ಶಾಕ್‌.. – ಹೊಟ್ಟೆಯಲ್ಲಿತ್ತು ಬರೋಬ್ಬರಿ 50 ಆಯಸ್ಕಾಂತ ಚೂರುಗಳು!

ಬಾಲಕನ ಸ್ಕ್ಯಾನಿಂಗ್‌ ರಿಪೋರ್ಟ್‌ ನೋಡಿದ ವೈದ್ಯರಿಗೆ ಶಾಕ್‌.. – ಹೊಟ್ಟೆಯಲ್ಲಿತ್ತು ಬರೋಬ್ಬರಿ 50 ಆಯಸ್ಕಾಂತ ಚೂರುಗಳು!

ಮಕ್ಕಳು ಅಳುತ್ತಿದ್ದಾರೆ, ತಮಗೆ ಕಿರಿ ಕಿರಿ ಮಾಡುತ್ತಿದ್ದಾರೆ ಎಂದು ಅವರನ್ನು ಸಮಾಧಾನ ಪಡಿಸಲು ಸಿಕ್ಕ ಸಿಕ್ಕ ವಸ್ತುಗಳನ್ನು ಕೊಡುವ ಮುನ್ನ ಎಚ್ಚರ.. ಮಕ್ಕಳು ಅವರಷ್ಟಕ್ಕೆ ಆಡಿಕೊಳ್ಳಲಿ‌ ಎಂದು ಕೈಗೆ ಸಿಕ್ಕ ವಸ್ತುಗಳನ್ನು ಕೊಟ್ಟರೆ ಅವರ ಜೀವಕ್ಕೆ ತೊಂದರೆ ಎದುರಾಗಬಹುದು.. ಇಲ್ಲೊಬ್ಬ ಪುಟ್ಟ ಬಾಲಕ ಆಟವಾಡುತ್ತಾ ಆಯಸ್ಕಾಂತಗಳನ್ನು ನುಂಗಿದ ಘಟನೆ ತೆಲಂಗಾಣದ ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡದ ಖಮ್ಮಂನ ನಿವಾಸಿಯಾಗಿರುವ ಆರ್ಯನಿಗೆ ಆಟವಾಡಲು ಪೋಷಕರು ಕೆಲವು ವಸ್ತುಗಳನ್ನು ತಂದುಕೊಟ್ಟಿದ್ದರು. ಬಾಲಕ ಅವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆದಿದ್ದಾನೆ. ಆಟವಾಡುತ್ತಾ ಆಟಿಕೆಗಳಲ್ಲಿದ್ದ ಚಿಕ್ಕ ಚಿಕ್ಕ ಆಯಸ್ಕಾಂತ ಚೂರುಗಳನ್ನು ಒಂದೊಂದಾಗಿಯೇ ನುಂಗಿದ್ದಾನೆ.

ಇದನ್ನೂ ಓದಿ: ಪಕ್ಕದ ಮನೆ ನಾಯಿ ಕಚ್ಚಿದ್ದ ವಿಚಾರ ಮುಚ್ಚಿಟ್ಟ –  ಒಂದು ತಿಂಗಳ ಬಳಿಕ ರೇಬಿಸ್‌ನಿಂದ ಮೃತಪಟ್ಟ ಬಾಲಕ!

ಬಾಲಕನಿಗೆ ಕೆಲವೇ ಹೊತ್ತಲ್ಲಿ ತೀವ್ರ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಪೋಷಕರು ಭಯದಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರಿಗೆ ಅನುಮಾನ ಬಂದು ತಕ್ಷಣ ಸ್ಕ್ಯಾನಿಂಗ್ ಮಾಡಿದ್ದಾರೆ. ಸ್ಕ್ಯಾನಿಂಗ್‌ ವರದಿ ನೋಡಿದ ವೈದ್ಯರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಬಾಲಕನ ಹೊಟ್ಟೆಯಲ್ಲಿ ಆಯಸ್ಕಾಂತಗಳನ್ನು ಪತ್ತೆ ಹಚ್ಚಿದ್ದಾರೆ. ಕೊನೆಗೆ ಈ ಚೂರುಗಳು ಕರುಳಿನಲ್ಲಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 50 ಆಯಸ್ಕಾಂತ ಚೂರುಗಳನ್ನು ಹೊರತೆಗೆದಿದ್ದಾರೆ.

ಈ ಕುರಿತು ಮಾತನಾಡಿದ ವೈದ್ಯರು, ಮಕ್ಕಳಿಗಾಗಿ ಖರೀದಿಸುವ ಆಟಿಕೆಗಳ ವಿಷಯದಲ್ಲಿ ಮುನ್ನೆಚ್ಚರಿಕೆ ತುಂಬಾ ಅಗತ್ಯ. ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು. ಬಾಲಕನನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರಿಂದ ಜೀವ ಉಳಿಸಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

suddiyaana