ಎಲ್ಲೆಲ್ಲಿ ಬ್ಯಾಕ್ಟೀರಿಯಾ ಬೆಳೆಯುತ್ತೆ ಗೊತ್ತಾ? – ಮನೆಯೊಳಗೇ ಇರುತ್ತೆ ಸೋಂಕು ನಿವಾರಣೆಗೆ ಮದ್ದು!
ನಮ್ಮ ದಿನನಿತ್ಯದ ಕೆಲಸದಲ್ಲಿ ಅನೇಕ ವಸ್ತುಗಳನ್ನು ನಾನು ಯೂಸ್ ಮಾಡ್ತಾ ಇರ್ತೇವೆ.. ಆದ್ರೆ ಅದ್ರ ಸ್ವಚ್ಛತೆ ಬಗ್ಗೆ ನಾವು ಅಷ್ಟೋಂದಾಗಿ ಯೋಚನೆ ಮಾಡಲು ಹೋಗಲ್ಲ. ನಿಮ್ಗೊಂದು ವಿಚಾರ ಗೊತ್ತಾ? ಪ್ರತಿದಿನ ಉಪಯೋಗಿಸುವ ವಸ್ತುಗಳಿಂದಲೇ ನಮ್ಮ ಆರೋಗ್ಯ ಹಾಳಾಗುತ್ತಿದೆ.
ಪ್ರತಿ ದಿನ ಬಳಕೆ ಮಾಡುವ ವಸ್ತುಗಳ ಸ್ವಚ್ಛತೆಯ ಬಗ್ಗೆ ಅಷ್ಟಾಗಿ ಗಮನ ಕೊಡುವುದಿಲ್ಲ. ಹೀಗಾಗಿ ನಮ್ಮ ಕಣ್ಣಿಗೆ ಕಾಣದ ಬ್ಯಾಕ್ಟೀರಿಯ, ವೈರಸ್ ಸೇರಿದಂತೆ ಸೋಂಕು ತರುವ ಕೀಟಾಣುಗಳು ಅವುಗಳಲ್ಲಿ ಸುಲಭವಾಗಿ ಬೆಳೆಯುತ್ತವೆ.. ನಾವು ಮತ್ತೆ ಇದೇ ವಸ್ತುಗಳನ್ನು ಬಳಸುವುದರಿಂದ ಸೋಂಕು ತಗುಲುವುದು ಸಹಜ.
ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬೇಡಿಕೆಗೆ ಬಿಜೆಪಿ ನಾಯಕರಿಂದ ಅಸ್ತು – ಪುತ್ತಿಲ ಬಿಜೆಪಿಗೆ ಬರೋದು ಫಿಕ್ಸ್
ಪ್ರತಿನಿತ್ಯ ಹಲ್ಲುಜ್ಜುವ ಟೂತ್ ಬ್ರಷ್ ಅನ್ನು ಇಡುವ ಹೋಲ್ಡರ್ ನಲ್ಲಿ ಸೋಂಕುಕಾರಕ ಕ್ರಿಮಿಗಳು ಹೆಚ್ಚಾಗಿರುತ್ತವೆ. ತೇವಾಂಶದ ವಾತಾವರಣ ಇದಕ್ಕೆ ಪ್ರಮುಖ ಕಾರಣ. ಹೀಗಾಗಿ ಟೂತ್ ಬ್ರಶ್ ಸ್ವಚ್ಛತೆಯ ಜೊತೆಗೆ ಅದನ್ನು ಇಡುವ ಹೋಲ್ಡರ್ ಸ್ವಚ್ಛತೆಗೂ ಆದ್ಯತೆ ನೀಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇನ್ನು ಮನೆಯಲ್ಲಿರುವ ರಿಮೋಟ್ ನಲ್ಲೂ ಸೋಂಕು ಹರಡುವ ಕೀಟಾಣುಗಳಿರುತ್ತವೆ. ಆಹಾರ ತಿನ್ನುವಾಗ ಕೂಡ ರಿಮೋಟ್ ಕೈಯಲ್ಲಿ ಹಿಡಿದಿಕೊಳ್ಳುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ಇದರಿಂದ ನೇರವಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಇನ್ನು ದಿನನಿತ್ಯ ಬಳಸುವ ಕಂಪ್ಯೂಟರ್ ಕೀಬೋರ್ಡ್ ಮೇಲೆ ಕೇವಲ ಧೂಳು ಮಾತ್ರ ಇರುವುದಿಲ್ಲ, ಹಲವು ಬಗೆಯ ಸೋಂಕುಕಾರಕ ಕ್ರಿಮಿಗಳು ಕೂಡ ಇರುತ್ತವೆ. ಬ್ಯಾಕ್ಟೀರಿಯಾಗಳು ಕೀಬೋರ್ಡ್ ಜಾಗದಲ್ಲಿ ಹೆಚ್ಚು ಬೆಳವಣಿಗೆ ಆಗುತ್ತಿರುತ್ತವೆ. ಇಲ್ಲೂ ಕ್ಲೀನಿಂಗ್ ವಿಷಯದಲ್ಲಿ ಎಚ್ಚರವಿರಲಿ. ಇದಲ್ಲದೆ ಅಡುಗೆ ಮನೆಯ ಬಳಕೆಮಾಡುವ ಸ್ಪಾಂಜ್, ಕಿಚನ್ ಸಿಂಕ್, ಕಿಚನ್ ನಲ್ಲಿ ಬಳಸುವ ಟವಲ್ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಒಳ್ಳೆಯ ಜಾಗ ಅಂತಾನೇ ಹೇಳ್ಬೋದು. ತೇವಾಂಶವಿರುವ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಗಳು ಹೆಚ್ಚು ಬೆಳವಣಿಗೆ ಆಗುತ್ತವೆ. ಹೀಗಾಗಿ ಅಡುಗೆ ಮನೆಯ ಸ್ಪಾಂಜ್ ಅನ್ನು ಹೆಚ್ಚು ಗಲೀಜಾಗದಂತೆ ಆಗಾಗ ಸ್ವಚ್ಛವಾಗಿ ತೊಳೆದು ಇಟ್ಟು ಕೊಳ್ಳದಿದ್ದರೆ, ಅದರಿಂದಲೇ ರೋಗ ಹರಡುವ ಸಾಧ್ಯತೆ ದಟ್ಟವಾಗಿ ರುತ್ತದೆ.
ಮಹಿಳೆಯರು ಬಳಸುವ ಹ್ಯಾಂಡ್ ಬ್ಯಾಗ್ ಅಥವಾ ಪುರುಷರ ಬಳಕೆಯ ಪರ್ಸ್ ಕೂಡ ಬ್ಯಾಕ್ಟೀರಿಯಾಗಳಿಗೆ ಸಂತತಿ ಹೆಚ್ಚಿಸಿಕೊಳ್ಳುವ ಸ್ಥಳವಾಗಿರುತ್ತವೆ. ಕೆಲವೊಮ್ಮೆ ಮೇಕಪ್ ಬ್ರಷ್ ಬಳಸಿ ಅದನ್ನು ಸ್ವಚ್ಛ ಮಾಡಿದೆ ಹಾಗೆ ಬಿಟ್ಟುಬಿಡುತ್ತೇವೆ. ಅಲ್ಲೂ ಬ್ಯಾಕ್ಟೀರಿಯಾ ಬೆಳೆದು ನೇರವಾಗಿ ಮುಖಕ್ಕೇ ಮೇಕಪ್‌ಮೂಲಕ ಎಂಟ್ರಿಕೊಡಬಹುದು.. ಹೀಗಾಗಿ ನಾವು ಪ್ರತಿ ನಿತ್ಯ ಬಳಸೋ ವಸ್ತುಗಳನ್ನು ಶುಚಿಯಾಗಿಟ್ಟುಕೊಳ್ಳೋದು ಒಳ್ಳೆದು. ಇಲ್ಲದಿದ್ರೆ ಅನಾರೋಗ್ಯಕ್ಕೆ ತುತ್ತಾಗೋದು ಗ್ಯಾರಂಟಿ.