ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ – ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ ಫ್ರೀ ಕರೆಂಟ್​ ಬೇಡಿಕೆ!

ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ – ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿದೆ ಫ್ರೀ ಕರೆಂಟ್​ ಬೇಡಿಕೆ!

ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಬರುತ್ತಿದ್ದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಜನರು, ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಕೆಲವರಂತೂ ಕರೆಂಟ್ ಬಿಲ್​ ನೀಡಲು ಬರುವ ರೀಡರ್​ರನ್ನು ಗ್ರಾಮದಿಂದಲೇ ಓಡಿಸಿದ್ದಾರೆ. ಅಲ್ಲಲ್ಲಿ ರೀಡರ್​ ಜತೆ ವಾಗ್ವಾದದ ಪ್ರಕರಣಗಳೂ ಕಂಡುಬಂದಿದೆ.

ತುಮಕೂರಿನ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ವೃದ್ಧೆ ಹಾಗೂ ಮಹಿಳೆಯರು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬೆಸ್ಕಾ ಸಿಬ್ಬಂದಿಯು ಮೇ ತಿಂಗಳ ಬಿಲ್ ಕೊಡಲು ತೆರಳಿದ್ದ. ಈ ವೇಳೆ ವೃದ್ಧೆ, ʼಕಾಂಗ್ರೆಸ್ ನವರು ಫ್ರೀ ಕೊಡ್ತಿನಿ ಅಂದಿದ್ರು. ಈಗ ನೀವು ಬಿಲ್ ಕೇಳೋಕೆ ಬಂದಿದ್ರಾ?. ನಾವು ಬಿಲ್ ಕಟ್ಟಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರನ್ನು ಕೇಳಿ. ನಾವು ಕರೆಂಟ್‌ ಬಿಲ್‌ ಕಟ್ಟೋದಿಲ್ಲ. ಅದ್ಯಾವ್ ನನ್ಮಗ ಬರ್ತಾನೋ ಬರಲಿ ಎಂದು ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಅವಾಜ್ ಹಾಕಿದ್ದಾರೆ.

ಇದನ್ನೂ ಓದಿ: ʼನಾವು ವಿದ್ಯುತ್‌ ಬಿಲ್‌ ಕಟ್ಟಲ್ಲ, ಕಾಂಗ್ರೆಸ್ ಬಳಿಯೇ ಕೇಳಿ‌ʼ – ಕೆಇಬಿ ಕಲೆಕ್ಟರ್​ ಊರಿಂದ ಹೊರಕ್ಕೆ!

ಇನ್ನು ಕಲಬುರಗಿಯಲ್ಲೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಮಹಿಳೆಯೊಬ್ಬರು, ʼಯಾರು ಬಿಲ್ ಕಟ್ಟಂಗಿಲ್ಲ ಅಂತಾ ಹೇಳಿನೇ. ನಮ್ಮಿಂದ ಕಾಂಗ್ರೆಸ್ ವೋಟ್ ಹಾಕಿಸಿಕೊಂಡ್ರು. ಹಾಗಾದ್ರೆ ಕಾಂಗ್ರೆಸ್ ಹೇಳಿದ್ದು ಬೋಗಸ್ಸಾ? ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ಕನೆಕ್ಷನ್ ಕಟ್ ಮಾಡಲು ಜೆಸ್ಕಾಂ ಸಿಬ್ಬಂದಿ ಮುಂದಾದಾಗ “ಅದು ಹೇಗೆ ಕಟ್ ಮಾಡ್ತಿರ ಕರೆಂಟ್ ಕನೆಕ್ಷನ್, ಜೂನ್‌ನಿಂದ ಕಾಂಗ್ರೆಸ್‌ನವರು ಕಟ್ಟಬೇಡಿ ಅಂದಾರ್. ಯಾರು ಬರ್ತಾರೋ ಬರ್ಲಿ.. ನಾವಂತು ಬಿಲ್ ಕಟ್ಟಂಗಿಲ್ಲ” ಎಂದು ಜೆಸ್ಕಾಂ ಸಿಬ್ಬಂದಿ ಜೊತೆಗೆ  ವಾಗ್ವಾದಕ್ಕಿಳಿದ್ದಾರೆ.

ಉಡುಪಿ ಜಿಲ್ಲೆಯ ವಾಸುದೇವ ಭಟ್‌ ಪೆರಂಪಳ್ಳಿ ಎಂಬುವವರು ವಿದ್ಯುತ್‌ ಮೀಟರ್‌ ಬೋರ್ಡ್‌ನ ಕೆಳಗೆ ಪತ್ರವೊಂದನ್ನು ಬರೆದು ಅಂಟಿಸಿದ್ದಾರೆ. ಇದರ ಫೋಟೋ ಭಾರೀ ವೈರಲ್‌ ಆಗಿದೆ.

“ಮೆಸ್ಕಾಂನವರೇ, ಕ್ಷಮಿಸಿ ಜೂನ್‌ ತಿಂಗಳಿನಿಂದ ನಮಗೆ ಕರೆಂಟ್‌ ಬಿಲ್‌ ಕೊಡಬೇಡಿ. ನಾವು ಬಿಲ್‌ ಕಟ್ಟಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ತನ್ನ ನೇತೃತ್ವದ ಸರಕಾರ ಬಂದರೆ ಹಲವಾರು ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಿಸಿತ್ತು. ಜೂನ್‌ನಿಂದಲೇ ಉಚಿತ ವಿದ್ಯುತ್‌ ಕೊಡುವ ಯೋಜನೆ ಘೋಷಣೆಯಾಗಿದೆ. ತಾನು ಸೇರಿದಂತೆ ಯಾರೂ ಕೂಡ ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇ. 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್‌ ಚುನಾವಣೆ ಗೆಲ್ಲಲು ಪ್ರನಾಳಿಕೆಯಲ್ಲಿ ಜನಪ್ರಿಯ ಯೋಜನೆ ಯೋಜನೆಗಳನ್ನು ಘೋಷಿಸಿದ್ದು, ಅದೇ ಮುಳುವಾಗುವ ಸಾಧ್ಯತೆ ಕಂಡು ಬರುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಫ್ರೀ ಕರೆಂಟ್ ಭರವಸೆ ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.

suddiyaana