ಹನಿಮೂನ್ ಗೆ ಕರೆದೊಯ್ದು ಸಮುದ್ರದ ಮಧ್ಯೆ ಬಿಟ್ಟು ಬಂದ ಟ್ರಾವೆಲ್ಲಿಂಗ್ ಏಜೆನ್ಸಿ – ದಂಪತಿಗೆ ಇದೆಂಥಾ ಫಜೀತಿ..?

ಹನಿಮೂನ್ ಗೆ ಕರೆದೊಯ್ದು ಸಮುದ್ರದ ಮಧ್ಯೆ ಬಿಟ್ಟು ಬಂದ ಟ್ರಾವೆಲ್ಲಿಂಗ್ ಏಜೆನ್ಸಿ – ದಂಪತಿಗೆ ಇದೆಂಥಾ ಫಜೀತಿ..?

ಮದುವೆ ಅಂದ್ರೆ ವಧುವರರ ಪಾಲಿಗೆ ಸುಮಧುರ ಗಳಿಗೆ. ಎರಡು ಜೀವಗಳು ಒಂದಾಗುವ ಅದ್ಭುತ ಕ್ಷಣ. ಹೀಗಾಗಿ ವಿವಾಹದ ಬಳಿಕ ಇಬ್ಬರು ಏಕಾಂತವಾಗಿ ಕಳೆಯಬೇಕೆಂದು ಹನಿಮೂನ್ ಪ್ಲ್ಯಾನ್ ಮಾಡ್ತಾರೆ. ಹೀಗೆ ಇಲ್ಲೊಂದು ಜೋಡಿ ಟ್ರಾವೆಲ್ಲಿಂಗ್ ಏಜೆನ್ಸಿ ಮೂಲಕ ಹನಿಮೂನ್ ಪ್ಯಾಕೇಜ್ ಮಾಡಿತ್ತು. ಆದ್ರೆ ಏಜೆನ್ಸಿಯವರು ಮಾಡಿದ ಎಡವಟ್ಟಿಗೆ ದಂಪತಿ ಸಮುದ್ರದೊಳಗೆ ಪರದಾಡಿದ್ದಾರೆ.

ಹನಿಮೂನ್​ಗೆ ಅಂತಾ ಹಲವಾರು ಟ್ರಾವೆಲಿಂಗ್​ ಪ್ಯಾಕೇಜ್​ಗಳು ಇವೆ. ಅದ್ರಂತೆ ಎಲಿಜಬೆತ್ ವೆಬ್‌ಸ್ಟರ್ ಮತ್ತು ಅಲೆಕ್ಸಾಂಡರ್ ಬರ್ಕಲ್ ಎಂಬ ದಂಪತಿ ಹವಾಯಿಯಲ್ಲಿ ಪ್ರವಾಸವನ್ನು ಬುಕ್ ಮಾಡಿದ್ರು. ಈ ಜೋಡಿ ಮಾಯಿ ಬಳಿಯ ಸಣ್ಣ ದ್ವೀಪವಾದ ಲಾನೈಗೆ ಸ್ನಾರ್ಕ್ಲಿಂಗ್ ಪ್ರವಾಸಕ್ಕಾಗಿ ಟಿಕೆಟ್‌ಗಳನ್ನು ಖರೀದಿಸಿದರು. ನೌಕೆಯು ಸ್ನಾರ್ಕ್ಲಿಂಗ್ ಸೈಟ್‌ಗೆ ಬಂದ ನಂತರ, ಕ್ಯಾಪ್ಟನ್ ತಂಡಕ್ಕೆ ಮತ್ತೊಂದು ಸ್ಥಳಕ್ಕೆ ತೆರಳಲು ಇನ್ನೂ ಒಂದು ಗಂಟೆ ಸಮಯವಿತ್ತು. ಹೀಗಾಗಿ ದಂಪತಿ ಹಾಯಾಗಿ ದ್ವೀಪದಲ್ಲಿ ಸ್ವಿಮ್​ ಮಾಡ್ತಾ ಇದ್ರು. ಈ ವೇಳೆ ಏಜೆನ್ಸಿಯವರು ದಂಪತಿಯನ್ನ ನೀರಿನಲ್ಲೇ ಬಿಟ್ಟು ಹೋಗಿದ್ದಾರೆ. ವೆಬ್‌ಸ್ಟರ್ ಮತ್ತು ಬರ್ಕಲ್ ದಂಪತಿಗೆ ತುರ್ತು ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಯಾವುದೇ ಸಲಹೆಯನ್ನು ಕೂಡ ನೀಡಿರಲಿಲ್ಲ.

ಇದನ್ನೂ ಓದಿ : ಈ ಮಹಿಳೆ ನಿದ್ರೆ ಮಾಡಿದ್ರೆ 4 ದಿನವಾದ್ರೂ ಎಚ್ಚರವಾಗಲ್ಲ – ‘ಸ್ಲೀಪಿಂಗ್‌ ಬ್ಯೂಟಿʼಯ  ಸೀಕ್ರೆಟ್ ಏನು?

ಟ್ರಾವೆಲ್ಲಿಂಗ್​ ಪ್ಯಾಕೇಜ್​ ಕಂಪನಿಯು ನಿಗದಿತ ಗಡಿಗಳನ್ನು ನೀಡಿರಲಿಲ್ಲ. ಹಾಯಾಗಿ ಹನಿಮೂನ್​ನ ಕಳೆಯಬೇಕು ಎಂದು ಬಂದ್ರೆ ಪಜೀತಿ ತಂದಿಟ್ಟರು ಎಂದು ದಂಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೊದಲಿಗೆ, ದಂಪತಿ ಶಾಂತವಾದ ಹಾಗೂ ಸ್ಪಚ್ಛ ನೀರಿನಲ್ಲಿ ಸ್ವಿಮ್ಮಿಂಗ್​ ಮಾಡುತ್ತಿದ್ದರು. ಆದರೆ, ನೀರು ಹೆಚ್ಚಾಗ ತೊಡಗಿದ್ದಾಗ ಅವರು ಪ್ಯಾಕೇಜ್​ನ ದೋಣಿಯತ್ತ ಈಜಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಪ್ಯಾಕೇಜ್​ ದೋಣಿಯವರು ಅದಾಗಲೇ ಮುಂದಿನ ಸ್ಥಳಕ್ಕೆ ಹೋಗಿದ್ದರು. ಸಿಬ್ಬಂದಿ ಸದಸ್ಯರು ಮೂರು ಹೆಡ್‌ಕೌಂಟ್‌ಗಳನ್ನು ಮಾಡಿಕೊಂಡಿದ್ದರೂ ಕೂಡ ನಮ್ಮ ಮೇಲೆ ಗಮನ ಹರಿಸಿಲ್ಲ ಎಂದು ದಂಪತಿ ದೂರಿದ್ದಾರೆ.

ಒಂದು ಗಂಟೆಗಳ ಕಾಲ ದಂಪತಿ ಆ ಪ್ಯಾಕೇಜ್​ನವರಿಗಾಗಿ ಕಾದಿದ್ದಾರೆ. ಆದರೂ ಬಂದಿಲ್ಲ. ಕೊನೆಗೆ US ಕೋಸ್ಟ್ ಗಾರ್ಡ್‌ನ ಸದಸ್ಯ ಹೆಬರ್ಟ್ ಮೂಲಕ ಸ್ಥಳೀಯ ಘಟಕವನ್ನ ಸಂಪರ್ಕಿಸಿದ್ದಾಗಿ ತಿಳಿದು ಬಂದಿದೆ. ಬಳಿಕ ದಂಪತಿ  ಹವಾಯಿ ಸ್ನಾರ್ಕ್ಲಿಂಗ್ ಕಂಪನಿ ವಿರುದ್ಧ $5 ಮಿಲಿಯನ್‌ ಪರಿಹಾರ ಕೊಡುವಂತೆ ದೂರು ದಾಖಲಿಸಿದ್ದಾರೆ. ಕೊನೆಗೆ ಟ್ರಾವೆಲಿಂಗ್ ಏಜೆನ್ಸಿಗೆ 40 ಲಕ್ಷ ರೂಪಾಯಿ ದಂಡ ಹಾಕಲಾಗಿದೆ.

suddiyaana